ಬಟ್ಟೆ ಮಾರುತ್ತಿದ್ದವನು ಇಂಡಿಯಾ ನಂ 1 ಶಂಕಿತ ಆಗಿದ್ದೇಗೆ? ತೀರ್ಥಹಳ್ಳಿ ಮತೀನ್‌ & ಏಳು ತನಿಖಾ ಸಂಸ್ಥೆಗಳು

Is the clothes seller India's No. 1 suspect? Tirthahalli Mateen & seven investigative agencies

ಬಟ್ಟೆ ಮಾರುತ್ತಿದ್ದವನು ಇಂಡಿಯಾ ನಂ 1 ಶಂಕಿತ ಆಗಿದ್ದೇಗೆ? ತೀರ್ಥಹಳ್ಳಿ ಮತೀನ್‌ & ಏಳು ತನಿಖಾ ಸಂಸ್ಥೆಗಳು
Tirthahalli Mateen ,investigative agencies

SHIVAMOGGA | MALENADUTODAY NEWS | Apr 25, 2024    

ಬೆಂಗಳೂರಿನ ರಾಮೇಶ್ವರಂ ಕಫೆ ಸ್ಫೋಟ ಪ್ರಕರಣದಲ್ಲಿ  ಎನ್‌ಐಎ ಹಾಗೂ ಕೊಲ್ಕತ್ತಾ ಪೊಲೀಸರು ಅಬ್ದುಲ್‌ ಮತೀನ್‌ ತಾಹಾ ಹಾಗೂ ಮುಸಾವಿರ್‌ ಹುಸೇನ್‌ ಶಾಜೀಬ್‌ ನನ್ನ ಅರೆಸ್ಟ್‌ ಮಾಡಿದ್ದರು. ಅಲ್ಲಿಗೆ ಶಿವಮೊಗ್ಗ ಅಥವಾ ತೀರ್ಥಹಳ್ಳಿ ಐಸಿಸ್‌ ಮಾಡ್ಯುಲ್‌ಗೆ ಒಂದು ಹಂತದ ಕ್ಲೈಮ್ಯಾಕ್ಸ್‌ ಸಿಕ್ಕಾಗಿತ್ತು. ಆದಾಗ್ಯು ಈ ಪ್ರಕರಣದಲ್ಲಿ  ಸಿಕ್ಕಿಬಿದ್ದ ಅಬ್ದುಲ್‌ ಮತೀನ್‌ ತಾಹಾ NIA ಪಾಲಿಗೆ ಕೇವಲ ಒಂದು ಶಂಕಿತ ಭಯೋತ್ಪಾದನೆ ಕೇಸ್‌ನ ಭಾಗವಾಗಿರಲಿಲ್ಲ. ಇಡೀ ಭಾರತದಲ್ಲಿಯೇ ಅತಿದೊಡ್ಡ ಬ್ರೇಕ್‌ ಥ್ರೂ ಕೊಡಬಲ್ಲ ಸಂಗತಿಯಾಗಿತ್ತು. ವಿಶೇಷವಾಗಿ ದಕ್ಷಿಣ ಭಾರತದಲ್ಲಿ ನಡೆದ ಸಂಶಯಾಸ್ಪದ ಕೃತ್ಯಗಳಲ್ಲಿಗೆ ಮಾಸ್ಟರ್‌ ಮೈಂಡ್‌ ಆಗಿದ್ದ ಮತೀನ್‌ ತಾಹಾನ ಅರೆಸ್ಟ್‌ ಇದುವರೆಗಿನ ಪ್ರಕರಣಗಳ ಮಿಸ್ಸಿಂಗ್‌ ಹುಡುಕಿಕೊಟ್ಟಿತ್ತು. 

ಮಲೆನಾಡು ಟುಡೆ

ಮಲೆನಾಡು ಟುಡೆಗೆ ಲಭ್ಯವಾದ ಮಾಹಿತಿ ಪ್ರಕಾರ, ಅಬ್ದುಲ್ ಮತೀನ್ ತಾಹಾನ ಬಂಧನ ತನಿಖಾ ಸಂಸ್ಥೆಗಳ ಪಾಲಿಗೆ ಅತ್ಯಂತ ದೊಡ್ಡ ಅರೆಸ್ಟ್. ಅಬ್ದುಲ್ ಮತೀನ್ ತಾಹಾಗಾಗಿ ಕೇವಲ NIA ಮಾತ್ರ ಹುಡುಕಾಟ ನಡೆಸ್ತಾ ಇರ್ಲಿಲ್ಲ.. R&AW, IB, ದೆಹಲಿಯ Special Cell, ಮಹಾರಾಷ್ಟ್ರ ಮತ್ತು ಉತ್ತರಪ್ರದೇಶದ ATS, ತೆಲಂಗಾಣದ CI Cell, ತಮಿಳುನಾಡಿನ Q Branch ಮತ್ತು ಕರ್ನಾಟಕ ಪೊಲೀಸರೂ ಸಹ ಅಬ್ದುಲ್ ಮತೀನ್ ತಾಹನಿಗಾಗಿ ಹುಡುಕಾಡುತ್ತಿದ್ದರು. 

ಅಬ್ದುಲ್‌ ಮತೀನ್‌ ತಾಹ

ಬಟ್ಟೆ ವ್ಯಾಪಾರಿ ಮತೀನ್

ಅರ್ಧಕ್ಕೆ ಓದು ಬಿಟ್ಟ ಯುವಕ, ಸಾಮಾನ್ಯ ಎತ್ತರಕ್ಕಿಂತಲೂ ತುಸು ಕಮ್ಮಿಯಿರುವ ಆಳು, ಪ್ರೀತಿ ಪ್ರೇಮ ಎನ್ನುವ ವಯಸ್ಸಿನಲ್ಲಿ ಶಂಕಿತ ಚಟುವಟಿಕೆಗಳನ್ನ ನಡೆಸ್ತಿದ್ದ. ಬಾಂಬೆಯಿಂದ ಬಟ್ಟೆ ತಂದು ಬೆಂಗಳೂರಿನ ಗುರಪ್ಪನಪಾಳ್ಯ, ಸದ್ದುಗುಂಟೆ ಪಾಳ್ಯದ ಬೀದಿಯಲ್ಲಿ ಮಾರುತ್ತಿದ್ದ ಅಬ್ದುಲ್‌ ಮತೀನ್‌ ತಾಹಾ ದೇಶದ ಮೋಸ್ಟ್‌ ವಾಂಟೆಡ್‌ ಟೆರರಿಸ್ಟ್‌ ಆಗುತ್ತಾನೆ ಎಂದು ತನಿಖಾ ಸಂಸ್ಥೆಗಳೆ ಊಹಿಸಿರಲಿಲ್ಲ.‌

ಅಲ್‌ ಹಿಂದ್‌ ಟ್ರಸ್ಟ್‌ 

Bengaluru Rameshwaram Cafe blast

ಬೆಂಗಳೂರಿನ ಬೀದಿಯಲ್ಲಿ ಬಟ್ಟೆ ಮಾರುತ್ತಿದ್ದಾಗಲೇ ಶಂಕಿತ ಚಟುವಟಿಕೆ ನಡೆಸ್ತಿದ್ದವರ ಲಿಂಕ್‌ಗೆ ಬಂದಿದ್ದ ಮತೀನ್‌ ಆ ದಾರಿಯಲ್ಲಿಯೇ ಬಹಳ ದೂರ ಸಾಗಿದ್ದ. ಅಲ್‌ ಹಿಂದ್‌ ಟ್ರಸ್ಟ್‌ ಬಗ್ಗೆ ನಿಮಗೆ ಗೊತ್ತಿರಬಹುದು. ಕೆಲವರ್ಷಗಳ ಹಿಂದೆ ಬೆಂಗಳೂರು ಹಾಗೂ ತಮಿಳುನಾಡಿನಲ್ಲಿ ಸುದ್ದಿಯಾಗಿದ್ದ ಭಯೋತ್ಪಾದನಾ ಸಂಘಟನೆ ಇದಾಗಿತ್ತು. ತಮಿಳುನಾಡಲ್ಲಿ ಆತಂಕವಾದಿ ಕೃತ್ಯಗಳನ್ನ ಎಸೆಗಲು ಷಡ್ಯಂತ್ರವೊಂದು ರೂಪಿತವಾಗಿದೆ ಎಂದು ಗೊತ್ತಾಗುಲೇ ಅಲ್ಲಿನ ಸರ್ಕಾರ,  ಸ್ಟ್ರೈಟ್‌ ಅವೇ ಅಲ್ಲಿನ ಪೊಲೀಸ್‌ ಇಲಾಖೆಗೆ ಫುಲ್‌ ಪವರ್‌ ನೀಡಿ, ಭಯ ಹುಟ್ಟಿಸುವ ಗಿಡವನ್ನು ಬೇರು ಸಮೇತ ಚಿವುಟಿ ಹಾಕಿ ಎಂದಿತ್ತ. ಆಗಲೇ ತಮಿಳುನಾಡಿನ ಕ್ಯೂ ಸೆಲ್‌ ಕರ್ನಾಟಕ ಪೊಲೀಸ್‌ ಹಾಗೂ ಕೇಂದ್ರ ತನಿಖಾ ಸಂಸ್ಥೆಗಳ ಸಂಪರ್ಕ ಸಾಧಿಸಿ ಹಿಡಿಯಬೇಕಾದ ಹೆಗ್ಗಣಗಳ ಲಿಸ್ಟ್‌ ಮಾಡಿತ್ತು. ಆ ಪಟ್ಟಿಯಲ್ಲಿದ್ದ ಕೊನೆಯ ಹೆಸರುಗಳು ಅಬ್ದುಲ್‌ ಮತೀನ್‌ ತಾಹಾ ಹಾಗೂ ಮುಸಾವಿರ ಹುಸೇನ್‌ ಶಾಜೀಬ್‌..

ಅಬ್ದುಲ್‌ ಮತೀನ್‌ ತಾಹ

ಖ್ವಾಜಾ ಮೊಯುನುದ್ದೀನ್

ಆ ಸಮಯದಲ್ಲಿ ಗುರುಪ್ಪನ ಪಾಳ್ಯದಲ್ಲಿ ತನಿಖಾ ಸಂಸ್ಥೆಗಳು ನಡೆಸಿದ ದಾಳಿಯಲ್ಲಿ  ಅಲ್‌ ಹಿಂದ್‌ ಟಾಪ್‌ ಮೋಸ್ಟ್‌ ಆಸಾಮಿಗಳು ಅರೆಸ್ಟ್‌ ಆಗಿದ್ದರು. ಆ ಪೈಕಿ ಮತೀನ್‌ಗೆ ಭಯೋತ್ಪಾದನೆಯ ಅ..ಆ..ಇ.. ಈ ಹೇಳಿದ್ದ ಖ್ವಾಜಾ ಮೊಯುನುದ್ದೀನ್‌ ಮೆಹಬೂಬ್‌ ಪಾಷಾ ಕೂಡ ಇದ್ದರು. ಆದರೆ ಮತೀನ್‌ ಹಾಗೂ ಮುಸಾವೀರ್‌ ಅಂದು ಪೊಲೀಸರ ಕೈಗೆ ಸಿಕ್ಕಿಬಿದ್ದಿರಲಿಲ್ಲ. ಆ ಕಾಲಕ್ಕೆ ಅಷ್ಟೇನೂ ಇಂಪಾರ್ಟೆಂಟ್‌ ಅಲ್ಲದ ವ್ಯಕ್ತಿಯಾಗಿದ್ದ ಮತೀನ್‌ ಬಗ್ಗೆ ತನಿಖಾ ಸಂಸ್ಥೆಗಳು ಸಹ ತಲೆಕೆಡಿಸಿಕೊಂಡಿರಲಿಲ್ಲ. ‌

ಕನ್ಯಾಕುಮಾರಿಯಲ್ಲಿ ಎಸ್‌ಐ ಕೊಲೆ

ಆದರೆ, ಆನಂತರ ಕನ್ಯಾಕುಮಾರಿಯಲ್ಲಿ ನಡೆದಿದ್ದ ಎಸ್‌ಐ ವಿಲ್ಸನ್‌ ಕೊಲೆ ಪ್ರಕರಣದಲ್ಲಿ ಮತೀನ್‌ ಹೆಸರು ಕೇಳಿಬಂದಿತ್ತು. ಆದಾದ ಬಳಿಕ ಮಂಗಳೂರು ಗೋಡೆ ಬರಹ ಪ್ರಕರಣ, ಶಿವಮೊಗ್ಗ ಟ್ರಯಲ್‌ ಬ್ಲಾಸ್ಟ್‌, ಮಂಗಳೂರು ಕುಕ್ಕರ್‌ ಬ್ಲಾಸ್ಟ್‌, ರಾಮೇಶ್ವರಂ ಕಫೆ ಸ್ಫೋಟ ಮತೀನ್‌ ಡೈರಕ್ಷನ್‌ನಲ್ಲಿ ನಡೆದ ಮೇಜರ್‌ ಕೇಸ್‌ಗಳು.. ಇದಷ್ಟೆ ಅಲ್ಲದೆ ಮತೀನ್‌ ನಿಗೂಢ ಶಂಕಿತ ಕೃತ್ಯಗಳನ್ನು ಎಸೆಗಲು ತನ್ನವರಿಗೆ ಸೂಚಿಸಿದ್ದ.  ಇದಕ್ಕೆ ಸಾಕ್ಷಿ ಎಂಬಂತೆ, ಎನ್‌ಐಎ ಅಧಿಕಾರಿಗಳು ಶಾರೀಖ್‌ ತೀರ್ಥಹಳ್ಳಿಯಲ್ಲಿ ವಾಹನಗಳಿಗೆ ಬೆಂಕಿ ಹಚ್ಚುತ್ತಿದ್ದ ಎಂಬ ವಿಚಾರವನ್ನು ಹೊರತೆಗೆದಿತ್ತು. ಇದು ನಿಜಕ್ಕೂ ಅಚ್ಚರಿಯ ವಿಷಯವಾಗಿತ್ತು. 

ಅಬ್ದುಲ್‌ ಮತೀನ್‌ ತಾಹ

ಪರಪ್ಪನ ಅಗ್ರಹಾರದಲ್ಲಿ ಸಿಕ್ಕ ಸುಳಿವು

ದೆಹಲಿಯಲ್ಲಿ ಅರೆಸ್ಟ್‌ ಆಗಿದ್ದ ಅರಾಫತ್‌ ಅಲಿಗೂ ಮತೀನ್‌ ಕಿಂಗ್‌ ಪಿನ್‌ ಆಗಿದ್ದ ಎನ್ನುತ್ತದೆ ತನಿಖಾ ಸಂಸ್ಥೆಗಳು. ಇಷ್ಟೆಲ್ಲಾ ಅಪಖ್ಯಾತಿ ಹೊಂದಿದ್ದ ಮತೀನ್‌ ಸಿಕ್ಕಿಬಿದ್ದಿದ್ದು ಸಹ ವಿಚಿತ್ರ ರೀತಿಯಲ್ಲಿ ತೀರ್ಥಹಳ್ಳಿಯ ಮತೀನ್‌ ರಾಮೇಶ್ವರಂ ಕಫೆಯ ಸ್ಫೋಟದಲ್ಲಿ ಭಾಗಿಯಾಗಿದ್ದ ಎಂಬುದು ಆರಂಭದಲ್ಲಿ ಗೊತ್ತಿರಲಿಲ್ಲ. ಸಸ್ಪೆಕ್ಟ್‌ ನ ಹಿಂದೆ ಬಿದ್ದಿದ್ದ ತನಿಖಾ ಸಂಸ್ಥೆಗಳು ಮುಸಾವಿರ್‌ನನ್ನ ಸುಳಿವು ಪತ್ತೆ ಹಚ್ಚಿತ್ತು. ಆತನ ಬಗ್ಗೆ ತೀರ್ಥಹಳ್ಳಿಗೆ ಬಂದು ಕನ್‌ಫರ್ಮ್‌ ಮಾಡಿಕೊಂಡು ಹೋಗಿದ್ದ ಎನ್‌ಐಎ ಬೆಂಗಳೂರು ಪರಪ್ಪನ ಅಗ್ರಹಾರದಲ್ಲಿ ಅದಾಗಲೇ ಸೆರೆಯಾಗಿರುವ ಶಂಕಿತರ ಬಳಿ ವಿಚಾರಣೆ ನಡೆಸಿತ್ತು. ಸೆಕೆಂಡ್‌ ಕನ್‌ಫರ್ಮ್‌ಗೆ ತೆರಳಿದ್ದ ತನಿಖಾಧಿಕಾರಿಗಳಿಗೆ ಅಲ್ಲಿದ್ದ ಶಂಕಿತನೊಬ್ಬ..ಸಿಸಿ ಕ್ಯಾಮಾರಾದ ತುಣಕನ್ನ ನೋಡಿ.. ಸಾರ್‌ ಇವನ್ಯಾವನೋ ಗೊತ್ತಿಲ್ಲ.. ಆದರೆ ಈತನ ಪಕ್ಕದಲ್ಲಿರುವುದು ಅಬ್ದುಲ್‌ ಮತೀನ್‌ ತಾಹ ಎಂದಿದ್ದ.. 

ಅರರೇ…

ಇನ್‌ವೆಸ್ಟಿಗೇಷನ್‌ ಆಫಿಸರ್ಸ್‌ ಶಂಕಿತ ಗುರುತು ಹಿಡಿದ ಚಹರೆ ಅಚ್ಚರಿ ಮೂಡಿಸಿತ್ತು. ಏಕೆಂದರೆ ಮತೀನ್‌ ತಾಹ ಇಂಡಿಯಾದಲ್ಲಿ ಇಲ್ಲ. ಆತ ದೇಶಬಿಟ್ಟು ಹೋಗಿದ್ದಾನೆ ಎಂದೇ ನಂಬಿದ್ದರು ಅಧಿಕಾರಿಗಳು. ದೇಶಬಿಟ್ಟು ಹೋದವನು ಚನ್ನೈನಲ್ಲಿ ಏನು ಮಾಡುತ್ತಿದ್ದಾನೆ? ಹೈಪ್ರೊಫೈಲ್‌ ತನಿಖಾ ಸಂಸ್ಥೆಗಳಿಗೆ ಒಂದು ಸಿಸಿ ಟಿವಿ ಪೂಟೇಜ್‌ ಹಾಗೂ ಪರಪ್ಪನ ಅಗ್ರಹಾರದ ಶಂಕಿತ ಐಡೆಂಟಿಫೈ ಮಾಡಿದ್ದ ಚಿತ್ರ ದೊಡ್ಡ ಕೆಲಸ ಕೊಟ್ಟಿತ್ತು. 

ಅಬ್ದುಲ್‌ ಮತೀನ್‌ ತಾಹ

ರಾಮೇಶ್ವರಂ ಕಫೆ ಸ್ಫೋಟ ಪ್ರಕರಣ

ಅಲ್ಲಿಂದ ರಾಮೇಶ್ವರಂ ಕಫೆ ಪ್ರಕರಣ ಮತ್ತೊಂದು ಟ್ವಿಸ್ಟ್‌ ಪಡೆದುಕೊಂಡಿತ್ತು. ಒಂದು ಹಂತದ ತನಿಖೆ ಮುಗಿಸಿದ್ದ ಅಧಿಕಾರಿಗಳು ಮತ್ತೊಮ್ಮೆ ಹೊಸದಾಗಿನಿಂದ ತನಿಖೆ ಆರಂಭಿಸ್ತಾರೆ. ಘಟನೆ ನಡೆದ ಹಿಂದಿನ ದಿನಗಳ ಸಿಸಿ ಟಿವಿ ದೃಶ್ಯಾವಳಿಗಳನ್ನ  ಪರಿಶೀಲಿಸ್ತಾರೆ. ಆ ವಿಡಿಯೋದಲ್ಲಿ ಮತೀನ್‌ ಕಾಣುತ್ತಾನೆ. ಯೆಸ್‌, ಇದು ಮತೀನ್‌ನದ್ದೇ ಕೃತ್ಯ ಎಂದು ಸಾಬೀತಾಗುತ್ತದೆ. ಈತನನ್ನ ಬೇಟೆಯಾಡಲೇ ಬೇಕು ನಿಶ್ಚಯ ಮಾಡುತ್ತಾರೆ. ಕರ್ನಾಟಕ ಸ್ಟೇಟ್‌ ಐಬಿ ಅಧಿಕಾರಿಗಳು ಸಂಗ್ರಹಿಸ್ತಿದ್ದ ಸೀಕ್ರೆಟ್‌ ಮಾಹಿತಿಗಳನ್ನ ತೆಗೆದುಕೊಂಡ ಅಧಿಕಾರಿಗಳು ಸೆಂಟ್ರಲ್‌ ಐಬಿ ಮೂಲಕ ಆರೋಪಿಗಳ ಅಕೌಂಟ್‌ ಟ್ರೇಸಿಂಗ್‌ ಮಾಡಿಸುತ್ತಾರೆ. ಹಿಂದೆ ಶಿವಮೊಗ್ಗದ ಮೋಸ್ಟ್‌ ಟೆರರ್‌ ರೌಡಿಶೀಟರ್‌ಗಳನ್ನ ಕೇಸ್‌ವೊಂದರಲ್ಲಿ ಹಿಡಿಯಲು ಇದೇ ರೀತಿ ಅಕೌಂಟ್‌ ಟ್ರೇಸಿಂಗ್‌ ನಡೆಸಲಾಗಿತ್ತು. ಅದೇ ರೀತಿ ತನಿಖಾ ಸಂಸ್ಥೆಗಳು ಅಕೌಂಟ್ರ ಟ್ರಾನ್ಜೆಕ್ಷನ್‌ ಮೂಲಕ ಮತೀನ್‌ ಮೂಲವನ್ನ ಭೇದಿಸ್ತಾರೆ. ಕೋಲ್ಕತ್ತಾದ ಲಾಡ್ಜ್‌ವೊಂದರಲ್ಲಿ ಅನಾಮತ್ತಾಗಿ ಬಾಗಿಲು ತಟ್ಟಿ ಸರ್‌ಫ್ರೈಸ್‌ ಕೊಟ್ಟಿದ್ದ ಅಧಿಕಾರಿಗಳು ಮತೀನ್‌ನನ್ನ ಮುಸಾವಿರ್‌ನ ಜೊತೆಗೆ ಅರೆಸ್ಟ್‌ ಮಾಡಿದ್ದರು. 

ತೀರ್ಥಹಳ್ಳಿಯಿಂದ ಹೊರಟು ಬೆಂಗಳೂರಲ್ಲಿ ಬಟ್ಟೆ ಮಾರುತ್ತಿದ್ದ ಮತೀನ್‌ ಆನಂತರ ಇಡೀ ಭಾರತದಲ್ಲಿಯೆ ಅತಿದೊಡ್ಡ ಶಂಕಿತನಾಗಿ ಬೆಳೆದಿದ್ದ. ಅವನ ಅರೆಸ್ಟ್‌ ಎನ್‌ಐಎ ಲಿಸ್ಟ್‌ನ ಬಿಗ್‌ ಕ್ಯಾಚ್‌.. ಇದಿಷ್ಟು ಮತೀನ್‌ನ ವಿಚಾರ, ಇನ್ನೊಬ್ಬನಿದ್ದಾನೆ ಮುಸಾವಿರ್‌ ಹುಸೇನ್‌ ಶಾಜೀಬ್‌ ಮತ್ತೊಂದು ವಿಚಾರವಿದೆ “ಮಿಸ್ಸಿಂಗ್‌ ಸಸ್ಪೆಕ್ಸ್‌” ಅದರ ಬಗ್ಗೆ ಸದ್ಯದಲ್ಲಿಯೇ ಮಲೆನಾಡು ಟುಡೆ ವರದಿ..