rameshwaram cafe blast accused| ರಾಮೇಶ್ವರಂ ಕಫೆ ಸ್ಫೋಟ ಪ್ರಕರಣದ ಆರೋಪಿ ಮಲೆನಾಡಿನವನೇ? ಗೃಹಸಚಿವರು ಹೇಳಿದ್ದೇನು?

rameshwaram cafe blast accused from Malnad? What did the Home Minister say?

rameshwaram cafe blast accused|  ರಾಮೇಶ್ವರಂ ಕಫೆ ಸ್ಫೋಟ ಪ್ರಕರಣದ ಆರೋಪಿ ಮಲೆನಾಡಿನವನೇ? ಗೃಹಸಚಿವರು ಹೇಳಿದ್ದೇನು?
rameshwaram cafe blast accused

shivamogga Mar 13, 2024  rameshwaram cafe blast accused ಬೆಂಗಳೂರು ರಾಮೇಶ್ವರಂ ಕಫೆ  ಯಲ್ಲಿ ನಡೆದ ಬಾಂಬ್ ಸ್ಫೋಟ ಸಂಬಂಧ ಎನ್​ಐಎ ತನ್ನ ತನಿಖೆಯನ್ನ ತೀವ್ರಗೊಳಿಸಿದೆ. ಈ ಮಧ್ಯೆ ಆರೋಪಿಯ ಸುಳಿವು ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಈ ಸಂಬಂಧ ರಾಜ್ಯದ ಮಾಧ್ಯಮಗಳು ತನಿಖಾ ವರದಿಗಳನ್ನ ಬಿತ್ತರಿಸುತ್ತಿದೆ. ಅದರ ನಡುವೆ ಆರೋಪಿ ಮಲೆನಾಡಿನವನು , ತೀರ್ಥಹಳ್ಳಿಯವನು, ಶಿವಮೊಗ್ಗ ಐಸಿಸ್​ ಮಾಡ್ಯುಲ್​ನ ತಂಡದವನು ಎಂಬೆಲ್ಲಾ ಸುದ್ದಿಗಳನ್ನ ಬಣ್ಣಕಟ್ಟಿ ಹರಿಬಿಡಲಾಗುತ್ತಿದೆ. 

ಆದರೆ ಈ ಬಗ್ಗೆ ಗೃಹಸಚಿವ ಡಾ.ಜಿ.ಪರಮೇಶ್ವರ್  ಬೆಂಗಳೂರಿನಲ್ಲಿ ಮಾತನಾಡಿದ್ದಾರೆ. ಇಂತಹ ವರದಿಗಳ ಬಗ್ಗೆ ನಾನು ಸಹ ಆಲಿಸಿದ್ದೇನೆ. ಆದರೆ ಆತನ ಬಂಧನವಾದ ಮೇಲೆಷ್ಟೆ ಎಲ್ಲದಕ್ಕೂ ಸ್ಪಷ್ಟನೆ ಸಿಗಲಿದೆ ಎಂದಿದ್ದಾರೆ. ಸ್ಪೆಕಿಲೇಷನ್​ ಮಾಡುತ್ತಿದ್ದಾರೆ. ಆತ ಕರ್ನಾಟಕದವನು, ಅಲ್ಲಿಯವನು, ಇಲ್ಲಿಯವನು ಎಂದು ಜೀರೋಡೌನ್ ಮಾಡೋದಕ್ಕೆ ಮಾಡುತ್ತಿದ್ದಾರೆ. ಈ ಬಗ್ಗೆ ಮೀಡಿಯಾದಲ್ಲಿ ಗಮನಿಸಿದ್ದೇನೆ. ಆದರೆ ಈ ಬಗ್ಗೆ ಗ್ಯಾರಂಟಿಯಾಗಬೇಕಿದೆ. ಆತನನ್ನು ಹಿಡಿದ ಮೇಲೆಯೇ ಎಲ್ಲದಕ್ಕೂ ಸ್ಪಷ್ಟನೆ ಸಿಗಲಿದೆ ಎಂದಿದ್ದಾರೆ. 

ರಾಷ್ಟ್ರೀಯ ಮಾಧ್ಯಮವೊಂದು ಪ್ರಕರಣ ಶಿವಮೊಗ್ಗ ಐಸಿಸಿ ಮಾಡ್ಯಲ್​ನ ಭಾಗವಾಗಿದ್ದು, ಆ ಸಂಬಂಧ ಪ್ರಕರಣದ ಆರೋಪಿಯು ಧರಿಸಿದ್ದ ಕ್ಯಾಪ್​ನಲ್ಲಿ ಸಿಕ್ಕ ಕೂದಲಿನ ಮೂಲಕ ಡಿಎನ್​ಎ ಟೆಸ್ಟ್ ಗೆ ಒಳಪಡಿಸಿದೆ. ಅದರ ಡಿಎನ್​ಎ ಹಾಗೂ ಸಸ್ಪೆಕ್ಟ್ ಆರೋಪಿಯ ಕುಟುಂಬದ ಡಿಎನ್​ಎ ಮೂಲಕ ಆರೋಪಿಯನ್ನು ಪತ್ತೆ ಮಾಡುವ ತನಿಖೆಯು ನಡೆಯುತ್ತಿದೆ ಎಂದು ದಿ ಇಂಡಿಯನ್ ಎಕ್ಸ್​ಪ್ರೆಸ್  ವರದಿ ಮಾಡಿದೆ. ಆದಾಗ್ಯು ರಾಜ್ಯದ ಗೃಹಮಂತ್ರಿ ಆರೋಪಿ ಅರೆಸ್ಟ್ ಆದ ಬಳಿಕ ಎಲ್ಲದಕ್ಕೂ ಸ್ಪಷ್ಟನೆ ಸಿಗಲಿದೆ ಎಂದಿದ್ದಾರೆ.