ತೀರ್ಥಹಳ್ಳಿ ಪ್ರತಿಮಾ ಕೊಲೆ ಕೇಸ್! ಚಾರ್ಜ್​ಶೀಟ್​ ಸಲ್ಲಿಸಿದ ಪೊಲೀಸರ ಆರೋಪವೇನು?

Bengaluru Geologist Prathima Murder Case , Thirthahalli pratima murder case What is the charge sheet filed by the police

ತೀರ್ಥಹಳ್ಳಿ ಪ್ರತಿಮಾ ಕೊಲೆ ಕೇಸ್! ಚಾರ್ಜ್​ಶೀಟ್​ ಸಲ್ಲಿಸಿದ ಪೊಲೀಸರ ಆರೋಪವೇನು?
Thirthahalli pratima murder case ,Bengaluru Geologist Prathima Murder Case, charge sheet ,

Shivamogga | Feb 5, 2024 | ಬೆಂಗಳೂರು ನಲ್ಲಿ ಭೂ ವಿಜ್ಞಾನ ಇಲಾಖೆ ಆಧಿಕಾರಿಯಾಗಿದ್ದ  ತೀರ್ಥಹಳ್ಳಿ ಪ್ರತಿಮಾ ಕೊಲೆ ಕೇಸ್  ಸಂಬಂಧ ಬೆಂಗಳೂರು ಪೊಲೀಸರು ಚಾರ್ಜ್​ಶೀಟ್​ ಸಲ್ಲಿಸಿದ್ದಾರೆ. 

ಕಳೆದ ವರ್ಷ ನವೆಂಬರ್ ನಲ್ಲಿ ಬೆಂಗಳೂರಿನಲ್ಲಿ  ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಡಿಡಿ ಆಗಿ ತೀರ್ಥಹಳ್ಳಿ ಮೂಲದ ಪ್ರತಿಮಾ ಎಂಬವರ ಕೊಲೆಯಾಗಿತ್ತು. ಅಪಾರ್ಟ್​ಮೆಂಟ್​ನ ಅವರ ಮನೆಯಲ್ಲಿಯೇ ಪ್ರತಿಮಾ ಹತ್ಯೆಯಾಗಿತ್ತು. 

ಭೂ ವಿಜ್ಞಾನ ಇಲಾಖೆ ಅಧಿಕಾರಿ ಪ್ರತಿಮಾ ಹತ್ಯೆ ಪ್ರಕರಣ ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿತ್ತು. ಹಾಗೂ ಸರ್ಕಾರ ಸಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿತ್ತು.  ಸುಬ್ರಮಣ್ಯಪುರ ಪೊಲೀಸ್​ ಸ್ಟೇಷನ್​  ಪೊಲೀಸ್ ಸ್ಟೇಷನ್ ಲಿಮಿಟ್ಸ್​ ನಲ್ಲಿ ನಡೆದಿದ್ದ ಪ್ರತಿಮಾ ಕೊಲೆ ಕೇಸ್ ನಲ್ಲಿ ಪೊಲೀಸರು ಚಾರ್ಜ್​ ಶೀಟ್ ಸಲ್ಲಿಸಿದ್ದಾರೆ. 

ಸುಮಾರು  ಆರುನೂರು ಪುಟದ ಚಾರ್ಜ್​ ಶೀಟ್​ನಲ್ಲಿ ಆರೋಪಿ ಕಿರಣ್​ ವಿರುದ್ಧ ತಾಂತ್ರಿಕ ಸಾಕ್ಷ್ಯ ಹಾಗೂ ಸಾಂದರ್ಭಿಕ ಸಾಕ್ಷ್ಯಗಳನ್ನು ಒದಗಿಸಿದ್ದಾರೆ. ಪ್ರಕರಣದಲ್ಲಿ ಆರೋಪಿ ಕಿರಣ್ ತನ್ನನ್ನ ಕೆಲಸದಿಂದ ವಜಾಗೊಳಿಸಿದ್ದಕ್ಕೆ ಈ ಕೃತ್ಯವೆಸಗಿದ್ದ ಎಂದು ಆರೋಪಿಸಲಾಗಿದೆ. 

ಇದನ್ನ ಸಹ ಓದಿ : ಬೈಕ್​ಗೆ ಡಿಕ್ಕಿಯಾಗುವುದನ್ನ ತಪ್ಪಿಸುವ ವೇಳೆ ಸೇತುವೆಯಿಂದ ಹಳ್ಳಕ್ಕೆ ಬಿದ್ದ ಲಾರಿ

ಘಟನೆಯ ಹಿಂದಿನ ದಿನವೂ ಕೊಲೆಗಾಗಿ ಸ್ಕೆಚ್ ಹಾಕಿದ್ದ ಆರೋಪಿ ಮರುದಿನ ಕೃತ್ಯವನ್ನು ಎಕ್ಸಿಕ್ಯೂಟ್ ಮಾಡಿದ್ದಾನೆ. ಪ್ರತಿಮಾ ಮನೆಗೆ ಬಂದು ಡೋರ್ ಓಪನ್ ಮಾಡುತ್ತಲೆ ಅವರನ್ನ ವೇಲ್​ನಿಂದ ಬಿಗಿದ ಆರೋಪಿ ಆನಂತರ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. 

ಎಂಟು ನಿಮಿಷದಲ್ಲಿ ಕೃತ್ಯವೆಸಗಿ ಪರಾರಿಯಾಗಿದ್ದ ಆರೋಪಿಯ ಫೋನ್ ಲೊಕೆಷನ್, ಸಿಟಿ ಟಿವಿ ಕ್ಯಾಪ್ಚರ್​ಗಳನ್ನು ಪೊಲೀಸರು ಚಾರ್ಜ್​ಶೀಟ್​ನಲ್ಲಿ ಸಾಕ್ಷ್ಯಗಳನ್ನಾಗಿ ಪ್ರೊಡ್ಯೂಸ್ ಮಾಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. 

ಪ್ರತಿಮಾರ ಬಳಿ ಇದ್ದ ಐದು ಲಕ್ಷ ದುಡ್ಡು ಹಾಗೂ ಮೈಮೇಲಿದ್ದ ಚಿನ್ನವನ್ನು ಕೃತ್ಯದ ಬೆನ್ನಲ್ಲೆ ಕದ್ದೊಯ್ದ ಆರೋಪಿ ಎಸ್ಕೇಪ್ ಆಗಿದ್ದ. ಆ ಬಳಿಕ ಪೊಲೀಸರು ಮಲೆಮಹದೇಶ್ವರ ಬೆಟ್ಟದಲ್ಲಿದ್ದ ಆರೋಪಿಯನ್ನ ಅರೆಸ್ಟ್ ಮಾಡಿ ಕರೆತಂದಿದ್ದರು. ಹೈಪ್ರೊಪೈಲ್ ಕೇಸ್​ನಲ್ಲಿ ಆರೋಪಿಯನ್ನ ಬಂಧಿಸಿದ್ದ ಪೊಲೀಸರು ಇದೀಗ ಪ್ರಕರಣಕ್ಕೆ ತಾರ್ಕಿಕ ಅಂತ್ಯ ನೀಡಿದ್ದಾರೆ.

Thirthahalli pratima murder case ,Bengaluru Geologist Prathima Murder Case, charge sheet ,