KARNATAKA NEWS/ ONLINE / Malenadu today/ Nov 6, 2023 SHIVAMOGGA NEWS
SHIVAMOGGA | ಬೆಂಗಳೂರು ಸುಬ್ರಮಣ್ಯಪುರಂ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ತೀರ್ಥಹಳ್ಳಿ ಮೂಲದ ಪ್ರತಿಮಾರವರ ಹತ್ಯೆ ಕೇಸ್ನಲ್ಲಿ ಓರ್ವ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಸಂಬಂಧ ಪೊಲೀಸರಿಗೆ ಬಿಗ್ ಲೀಡ್ ಸಿಕ್ಕಿದೆ.
ಮೂಲಗಳ ಪ್ರಕಾರ ಸುಬ್ರಮಣ್ಯಪುರ ಪೊಲೀಸ್ ಸ್ಟೇಷನ್ ಪೊಲೀಸರು ಪ್ರತಿಮಾರವರ ಬಳಿ ಡ್ರೈವರ್ ಕೆಲಸಕ್ಕಿದ್ದ ಕಿರಣ್ ಎನ್ನುವವನ್ನ ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ರಾಜ್ಯಮಟ್ಟದ ಮಾಧ್ಯಮವೊಂದು ವರದಿಮಾಡಿದೆ. ಅದರ ಪ್ರಕಾರ, ಪ್ರತಿಮಾರವರ ಜೊತೆಗೆ ಕೆಲಸ ಮಾಡುತ್ತಿದ್ದ ಕಿರಣ್ ರನ್ನ ವಾರದ ಹಿಂದಷ್ಟೆ ಕೆಲಸದಿಂದ ತೆಗೆದುಹಾಕಲಾಗಿತ್ತು. ಇದೇ ಕಾರಣಕ್ಕೆ ಕಿರಣ್ ಪ್ರತಿಮಾರನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
READ : ಬೆಂಗಳೂರಲ್ಲಿ DD ಪ್ರತಿಮಾ ಹತ್ಯೆ! ಇಲಾಖೆಯಲ್ಲಿ ಏನಿದೆ ಮಾತು? ಕುಟುಂಬಸ್ಥರು ಹೇಳೋದೆನು? ನಡೆದಿದ್ದೇನು?
ಸದ್ಯ ಕಿರಣ್ನನ್ನ ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣದ ಬಗ್ಗೆ ಇನ್ನಷ್ಟು ವಿಚಾರಣೆ ನಡೆಸ್ತಿದ್ದಾರೆ. ಕಾರು ಚಾಲಕನಾಗಿದ್ದ ಕಿರಣ್ನಿಂದ ಹಲವು ಕರೆಗಳು ಪ್ರತಿಮಾರಿಗೆ ಬಂದಿತ್ತು. ಇದರ ಬಗ್ಗೆ ಅನುಮಾನ ಬಂದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ. ಇನ್ನೊಂದೆಡೆ ಪ್ರತಿಮಾರ ಮೃತದೇಹ ನಿನ್ನೆ ರಾತ್ರಿ ತೀರ್ಥಹಳ್ಳಿಯ ಸಹ್ಯಾದ್ರಿ ಸ್ಕೂಲ್ ಪಕ್ಕದಲ್ಲಿರುವ ಇರುವ ಅವರ ಪತಿಯ ನಿವಾಸಕ್ಕೆ ರವಾನೆಯಾಗಿದೆ.
READ : ಬೆಂಗಳೂರಲ್ಲಿ DD ಪ್ರತಿಮಾ ಹತ್ಯೆ! ಇಲಾಖೆಯಲ್ಲಿ ಏನಿದೆ ಮಾತು? ಕುಟುಂಬಸ್ಥರು ಹೇಳೋದೆನು? ನಡೆದಿದ್ದೇನು?
ರಾತ್ರಿ 10 ಗಂಟೆ ಸುಮಾರಿಗೆ ಮೃತಹದೇಹ ತೀರ್ಥಹಳ್ಳಿ ರವಾನೆ ಮಾಡಲಾಗಿದ್ದು ಇವತ್ತು ಬೆಳಗ್ಗೆ 10 ಗಂಟೆ ಸುಮಾರಿಗೆ ಅಂತ್ಯಕ್ರಿಯೆ ನಡೆಯಲಿದೆ. ಕುರುವಳ್ಳಿ ಸೇತುವೆ ಪಕ್ಕದಲ್ಲಿರುವ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ