ತೀರ್ಥಹಳ್ಳಿ ಪೊಲೀಸ್ ಸ್ಟೇಷನ್​ ಗೆ ಬಂತು ಅನುಮಾನಾಸ್ಪದ ಬ್ಯಾಗ್​ ಪತ್ತೆ ಯಾಗಿರುವ ಬಗ್ಗೆ ಫೋನ್ ಕಾಲ್ ! ಆಮೇಲೇನಾಯ್ತು ಗೊತ್ತಾ

Thirthahalli police station received a phone call about the discovery of a suspicious bag. Do you know what happened after that?

ತೀರ್ಥಹಳ್ಳಿ ಪೊಲೀಸ್ ಸ್ಟೇಷನ್​ ಗೆ ಬಂತು ಅನುಮಾನಾಸ್ಪದ ಬ್ಯಾಗ್​ ಪತ್ತೆ ಯಾಗಿರುವ ಬಗ್ಗೆ ಫೋನ್ ಕಾಲ್ ! ಆಮೇಲೇನಾಯ್ತು ಗೊತ್ತಾ
Thirthahalli police station

Shivamogga Mar 11, 2024  ಬೆಂಗಳೂರು ರಾಮೇಶ್ವರಂ ಕಫೆ ಯಲ್ಲಿ ಬಾಂಬ್​ ಸ್ಫೋಟ ಆದ ಬೆನ್ನಲ್ಲೆ ರಾಜ್ಯದ ಮಾಧ್ಯಮಗಳು ಬೆಂಗಳೂರು ತುಂಬಾ ಓಡಾಡುತ್ತಾ ಬ್ಯಾಗ್​ಗಳನ್ನ ಇಟ್ಟು ರಿಯಾಲಿಟಿ ಚೆಕ್  ಮಾಡಿದ್ವು. ಮತ್ತೊಂದೆಡೆ ಪೊಲೀಸರು ಸಿಸಿ ಕ್ಯಾಮರಾಗಳನ್ನು ಫಾಲೋ ಮಾಡ್ತಾ ರಾಮೇಶ್ವರಂ ಕಫೆಯ ಆರೋಪಿಯ ಜಾಡು ಹಿಡಿದು ಓಡಾಡುತ್ತಿದ್ದಾರೆ. ಇದೆಲ್ಲದರ ನಡುವೆ ತೀರ್ಥಹಳ್ಳಿ ಪೊಲೀಸರಿಗೆ ಒಂದು ಬ್ಯಾಗ್ ಕೆಲಕಾಲ ಟೆನ್ಶನ್ ಕೊಟ್ಟಿತ್ತು. ಆನಂತರ ಬ್ಯಾಗ್​ನಲ್ಲಿ ಏನು ಇಲ್ಲ ಎಂಬುದು ಗೊತ್ತಾಗಿ ಆ ಪ್ರಕರಣವನ್ನು 112 ಪೊಲೀಸರೇ ವಿಲೇವಾರಿ ಮಾಡಿದೆ.. 

ಏನಿದು ಕೇಸ್ 

ಕಳೆದ 09.03.2024ರಂದು ತೀರ್ಥಹಳ್ಳಿ ಪೊಲೀಸ್ ಸ್ಟೇಷನ್  ಠಾಣಾ ವ್ಯಾಪ್ತಿಯಲ್ಲಿನ ಪ್ರದೇಶವೊಂದರಿಂದ 112  ERSS ಗೆ ಕರೆಯೊಂದು ಬಂದಿದೆ. ಇಲ್ಲೊಂದು ಬ್ಯಾಗ್ ಬಿದ್ದಿದೆ. ಯಾತಕ್ಕೋ ಸಂಶಯ ಆಗ್ತಿದೆ ಎಂದಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಬ್ಯಾಗ್​ ನೋಡಿ ನೋಡಿ ಪರಿಶೀಲಿಸಿದ್ದಾರೆ. ಅದರಲ್ಲಿ ಅನುಮಾನಸ್ಪವಾದ ಯಾವುದೇ ವಸ್ತುಗಳು ಇರಲಿಲ್ಲ. ಹಾಗಾಗಿ ಪ್ರಕರಣದ ಮಾಹಿತಿ ಪೊಲೀಸ್ ಸ್ಟೇಷನ್​ಗೆ ವರ್ಗಾಯಿಸಿ ವಿಲೇವಾರಿ ಮಾಡಿದ್ದಾರೆ.  

ಮಾಲೀಕರಿಲ್ಲದ ಬೈಕ್ ಪತ್ತೆ 

ಇದೇ ರೀತಿಯಲ್ಲಿ ದಿನಾಂಕ 06.03.2024ರಂದು ಭದ್ರಾವತಿ ಹೊಸಮನೆ ಪೊಲೀಸ್ ಸ್ಟೇಷನ್​ ಲಿಮಿಟ್ಸ್ ನಲ್ಲಿ ನಂಬರ್​ ಪ್ಲೇಟ್ ಇಲ್ಲದ ಬೈಕ್​ ಒಂದು ಹಲವು ದಿನಗಳಿಂದ ನಿಂತಿರುವ ಬಗ್ಗೆ 112 ಪೊಲೀಸರಿಗೆ ದೂರು ಬಂದಿತ್ತು.. ತಕ್ಷಣವೆ ಸ್ಥಳಕ್ಕೆ ಬಂದ ಪೊಲೀಸರು ಬೈಕ್​ನ್ನ ಸ್ಟೇಷನ್​ಗೆ ಕಳಿಹಿಸಿ ಪ್ರಕರಣ ವಿಲೇವಾರಿ ಮಾಡಿದ್ದರು. 

ಶಿವಮೊಗ್ಗ ರೈಲು ನಿಲ್ದಾಣ

ಹೀಗೆ ಶಿವಮೊಗ್ಗ ರೈಲು ನಿಲ್ದಾಣದಲ್ಲಿಯು ಅನುಮಾನಸ್ಪದ ಬಾಕ್ಸ್​ಗಳು ಪತ್ತೆಯಾಗಿದ್ದವು. ಆನಂತರ ದಿನವಿಡಿ ರಾಜ್ಯದ ಮಾಧ್ಯಮಗಳು ಜಗಮಗ ಸುದ್ದಿ ಮಾಡಿದ್ದವು.ಇಡೀ ದಿನದ ಹೈಡ್ರಾಮದ ಬಳಿಕ ಅದರಲ್ಲಿ ಉಪ್ಪು ಪತ್ತೆಯಾಗಿತ್ತು. ಇವೆಲ್ಲದರ ಹೊರತಾಗಿ ಶಿವಮೊಗ್ಗ ಪೊಲೀಸ್ ಇಲಾಖೆಯ ಅಲರ್ಟ್​​ನೆಸ್ ಮೆಚ್ಚುವಂತದ್ದು. ಅನುಮಾನಸ್ಪದಕ್ಕೆ ಆಸ್ಪದವೇ ಇಲ್ಲದಂತೆ ತಕ್ಷಣವೇ ಪ್ರಕರಣವನ್ನ ಇತ್ಯರ್ಥ ಮಾಡುತ್ತಿರುವ 112 ಸಿಬ್ಬಂದಿಗಳಿಗೆ ಥ್ಯಾಂಕ್ಸ್ ಹೇಳಲೇಬೇಕು