ಅಧ್ಯಕ್ಷ V/s ರಾಜ್ಯಾಧ್ಯಕ್ಷ! NPS ನೌಕರ ಸಂಘದ ಪ್ರಭಾಕರ್​ ಆರೋಪವೇನು? ರಾಜ್ಯ ಸರ್ಕಾರಿ ನೌಕರರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಕೊಟ್ಟ ಉತ್ತರವೇನು? ಇಲ್ಲಿದೆ ವಿವರ!

President V/S State President! What is Prabhakar's allegation of NPS Employees Association? What was the reply given by Shadakshari, state president of the State Government Employees' Association? Here's the details! ಅಧ್ಯಕ್ಷ V/s ರಾಜ್ಯಾಧ್ಯಕ್ಷ! NPS ನೌಕರ ಸಂಘದ ಪ್ರಭಾಕರ್​ ಆರೋಪವೇನು? ರಾಜ್ಯ ಸರ್ಕಾರಿ ನೌಕರರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಕೊಟ್ಟ ಉತ್ತರವೇನು? ಇಲ್ಲಿದೆ ವಿವರ!

ಅಧ್ಯಕ್ಷ V/s ರಾಜ್ಯಾಧ್ಯಕ್ಷ!  NPS ನೌಕರ ಸಂಘದ ಪ್ರಭಾಕರ್​ ಆರೋಪವೇನು? ರಾಜ್ಯ ಸರ್ಕಾರಿ ನೌಕರರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಕೊಟ್ಟ ಉತ್ತರವೇನು? ಇಲ್ಲಿದೆ ವಿವರ!

KARNATAKA NEWS/ ONLINE / Malenadu today/ Jul 22, 2023 SHIVAMOGGA NEWS 

ಶಿವಮೊಗ್ಗದಲ್ಲಿ ಕಳೆದ 19 ರಂದು ವಾಟ್ಸ್ಯಾಪ್​ ಡೆತ್ ನೋಟ್ ಮೆಸೇಜ್ ಮಾಡಿ ನಾಪತ್ತೆಯಾಗಿದ್ದ ಎನ್​ಪಿಎಸ್​ ನೌಕರರ ಸಂಘದ ಶಿವಮೊಗ್ಗ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಭಾಕರ್  ನಿನ್ನೆ ಪತ್ತೆಯಾಗಿದ್ದಾರೆ. ಅವರು ಪತ್ತೆಯಾಗುತ್ತಲೇ ಈ ಸಂಬಂಧ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ (State President of State Government Employees Association) ಸಿಎಸ್ ಷಡಾಕ್ಷರಿ ಮಾತನಾಡಿದ್ದಾರೆ. ಅಲ್ಲದೆ ಕೋಟೆ ಪೊಲೀಸ್ ಸ್ಟೇಷನ್​ನಲ್ಲಿ ಪ್ರಭಾಕರ್​ರವರು ಕೂಡ ಆರೋಪಿಸಿದ್ದಾರೆ. ಪ್ರಭಾಕರ್​ ರವರು ಮಾಡಿದ ಆರೋಪ ಹಾಗೂ ಸಿಎಸ್ ಷಡಾಕ್ಷರಿ ಕೊಟ್ಟ ಉತ್ತರ ಇಲ್ಲಿದೆ 

ಎನ್​ಪಿಎಸ್​ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಭಾಕರ್​ ರವರ ಆರೋಪ ವೇನು?

ಎನ್​ಪಿಎಸ್​ ಹೋರಾಟಕ್ಕೆ ಎಂದು ಕಳೆದ ಡಿಸೆಂಬರ್​ನಲ್ಲಿ ಬೆಂಗಳೂರಿಗೆ ಹೋಗಿದ್ದಾಗ ಒಂದು ಪೋನ್​ ಕಾಲ್ ಬಂದಿತ್ತು. ಆ ಕರೆಯಲ್ಲಿ ನನಗೆ ಕಿರುಕುಳ ನೀಡಿದರು . ನಿನ್ನ ಹೋರಾಟ ಷಡಾಕ್ಷರಿಯವರ ವಿರುದ್ಧವಾ ಎಂದು ಕೇಳಿದ್ರು. 

ನಾ ಟೀಚಿಂಗ್ ಪೋಸ್ಟಿಂಗ್ ವಿಚಾರದಲ್ಲಿ ಸಾಕಷ್ಟು ಸಮಸ್ಯೆ ಮಾಡಲಾಯ್ತು, ನನಗೆ ಅರ್ಹತೆ ಇದ್ದರೂ ಅದು ಕೊಡೋದಕ್ಕೆ ಬರೋದಿಲ್ಲ ಎಂದು ಇವರೇ ತೀರ್ಪುಕೊಟ್ಟರು. 

ಅಧ್ಯಕ್ಷರ ಸಹಕಾರ ಇರುವ ಅಧಿಕಾರಿಗಳು ನನ್ನ ವಿರುದ್ಧ ನಡೆದುಕೊಂಡರು. ನನ್ನಂತೆ ಗುಲ್ಬರ್ಗಾ, ಭದ್ರಾವತಿ, ಚಿತ್ರದುರ್ಗದಲ್ಲಿಯು ಅಧಿಕಾರಿಗಳಿಗೆ ಕಿರುಕುಳವಾಗಿದೆ. 

ಸಂಬಳ ಆಗದೇ ದುಡ್ಡಿಲ್ಲದೇ ನನ್ನ ಸಮಸ್ಯೆಯನ್ನು ನಾನು ಸರಿಪಡಿಸಿಕೊಳ್ಳಲು ಆಗದೇ ಹೊರಟುಹೋಗಿದ್ದೆ. ಈ ಮಧ್ಯೆ ನಡೆದ ಘಟನೆಯಿಂದ ವಾಪಸ್​ ಬಂದಿದ್ದೇನೆ!



ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿಎಸ್​ ಷಡಾಕ್ಷರಿಯವರು ಆರೋಪಕ್ಕೆ ಕೊಟ್ಟ ಉತ್ತರವೇನು?



ನನ್ನ ಹೆಸರು  ಪ್ರಸ್ತಾಪಿಸಿ ವಾಟ್ಸ್ಯಾಪ್ ನಲ್ಲಿ ಪ್ರಭಾಕರ್ ಮೆಸೇಜ್​   ಮಾಡಿದ್ರು ಎಂಬುದು ಗೊತ್ತಾಗುತ್ತಲೇ ವಿಧಾನಸೌಧ ಪೊಲೀಸ್ ಸ್ಟೇಷನ್​ನಲ್ಲಿ ಈ ಬಗ್ಗೆ ಕಂಪ್ಲೆಂಟ್ ಮಾಡಿದ್ದು, ಸರ್ಕಾರಕ್ಕೂ ಈ ಸಂಬಂಧ ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದೇನೆ. 

ಪ್ರಭಾಕರ್​ ರವರ ಆರೋಪಕ್ಕೂ ನನಗೂ ಸಂಬಂಧವಿಲ್ಲ.  ಆ ನಿಟ್ಟಿನಲ್ಲಿ ಚರ್ಚೆಗೆ ಸಿದ್ಧನಿದ್ದೇನೆ. ಅವರು ಮಾಡುತ್ತಿರುವ ಆರೋಪಗಳಿಗೆ ಯಾವುದೆ ದಾಖಲೆಗಳು ಇಲ್ಲ

ನನ್ನನ್ನ ಟಾರ್ಗೆಟ್  ಮಾಡುತ್ತಿರುವುದರ ಬಗ್ಗೆ ಅನುಮಾನ ಇದ್ದು, ಅವರ ಹಿಂದೆ ಯಾರೋ ಇರಬಹುದು ಎಂದು ಅನುಮಾನಿಸಿದ್ದಾರೆ. 

ಪ್ರಭಾಕರ್​ ರವರು ಶಿವಮೊಗ್ಗದಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಅನಾರೋಗ್ಯದ ಕಾರಣಕ್ಕೆ ಸಬ್​ರಿಜಿಸ್ಟರ್​ ಆಫೀಸ್​ಗೆ ಬದಲಾವಣೆ ಕೇಳಿರುತ್ತಾರೆ. ಆನಂತರ ಶಿಕ್ಷಣ ಇಲಾಖೆಯಲ್ಲಿ ಬದಲಾವಣೆ ತೆಗೆದುಕೊಂಡಿದ್ದರು.  ಇನ್ನೂ ಎಫ್​ಡಿಎ ವೃಂದ ಬದಲಾವಣೆ ನ್ಯೂನತೆ ಸಂಬಂಧ ಬೆಳಗಾವಿಯಲ್ಲಿಯು ಒಬ್ಬರಿಗೆ ಡಿಮೋಟ್ ಮಾಡಲಾಗಿದೆ. ಅದೆ ರೀತಿ ಇವರಿಗೂ ಆಗಿದೆ. ಈ ನಿಟ್ಟಿನಲ್ಲಿ ಯಾವುದೇ ಶಿಫಾರಸ್ಸು ನಾನು ಮಾಡಿಲ್ಲ. ಯಾವುದೇ ತೊಂದರೆ ಮಾಡಿಲ್ಲ. ಯಾರಿಗೂ ಫೋನ್​ ಮಾಡಿ ಮಾಡಿಕೊಡಬೇಡಿ ಎಂದು ಹೇಳಿಲ್ಲ. 

ಹೊನ್ನಾಳಿಯಲ್ಲಿ ಸಂಬಳ  ಆಗಿಲ್ಲವೆನ್ನುವುದನ್ನ  ತಿಳಿಸಿದ್ದರೇ ಆ ನಿಟ್ಟಿನಲ್ಲಿ ನಾನು ಮಾತನಾಡುತ್ತಿದ್ದೆ. ಅಲ್ಲದೆ ಅವರಿಗೆ ಸಂಬಳ ಆಗಿರುವ ಬಗ್ಗೆ ಹೊನ್ನಾಳಿಯ ಅಧಿಕಾರಿಯು ಪ್ರೆಸ್ ನೋಟ್ ಬಿಡುಗಡೆ ಮಾಡಿದ್ಧಾರೆ.  

ಸರ್ಕಾರದ ಅಡಿಯಲ್ಲಿ ನಡೆಯುವ ಪ್ರಕ್ರಿಯೆಗಳಿಗೆ ನಾನು ಯಾವುದೇ ಒತ್ತಡ ಹೇರಲು ಸಾಧ್ಯವಿಲ್ಲ. ಕಾನೂನಿನಲ್ಲಿ ಅವಕಾಶ ಇದ್ದರೇ ಮಾತ್ರ ಯಾವುದೇ ಪ್ರಕ್ರಿಯೆಗಳನ್ನು ಅಧಿಕಾರಿಗಳು ಕೈಗೊಳ್ಳುತ್ತಾರೆ. ಇಲ್ಲಿ ಮಧ್ಯ ಪ್ರವೇಶ ಮಾಡಲು ಸಾಧ್ಯವಿಲ್ಲ. 

ಪ್ರಭಾಕರ್​ರವರಿಗೆ ಐದು ಲಕ್ಷ ರೂಪಾಯಿ ಸಾಲವನ್ನು ಕೂಡ ಕೊಡಿಸಿದ್ದೇವೆ.  ಹೊನ್ನಾಳಿಯಿಂದ ಶಿವಮೊಗ್ಗಕ್ಕೆ ವರ್ಗಾವಣೆ ಸಂಬಂಧ ನೌಕರರ ಸಂಘದಿಂದ ಪತ್ರ ನೀಡಿದ್ದೇವೆ. ಈ ರೀತಿಯಲ್ಲಿ ಅವರಿಗೆ ಸಹಕಾರ ಕೊಟ್ಟಿದ್ದೇವೆ ತೊಂದರೆ ಕೊಟ್ಟಿಲ್ಲ ಎಂದಿದ್ದಾರೆ. 





ನಡುರಸ್ತೆಯಲ್ಲಿ ಮಹಿಳೆಯ ಕೊಲೆ! ಸಾಬೀತಾಯ್ತು ಅಪರಾಧ! ಶಿಕಾರಿಪುರ ಗ್ರಾಮಾಂತರ ಠಾಣೆಯ ಕೇಸ್​ನಲ್ಲಿ ಕೋರ್ಟ್ ತೀರ್ಪು!

ಮಾಜಿ ಸಿಎಂ ಬಿಎಸ್​ವೈ ಇನ್ಮುಂದೆ ಡಾ.ಬಿಎಸ್​ ಯಡಿಯೂರಪ್ಪ! ಅಭಿಮಾನಿಗಳಿಗೂ ಅವಕಾಶ ನೀಡಿದ BYR

ಮಗ ಬೈಕ್​ ಓಡಿಸಿದ ತಪ್ಪಿಗೆ 25 ಸಾವಿರ ರೂಪಾಯಿ ದಂಡ ಕಟ್ಟಿದ ತಂದೆ! ಕಾರಣವೇನು ಗೊತ್ತಾ?

ವೈದ್ಯರೊಬ್ಬರ ಸಮಯ ಪ್ರಜ್ಞೆಯಿಂದ ಬಯಲಾಯ್ತು ದುಷ್ಕೃತ್ಯ! ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾಯ್ತು ಮತ್ತೊಂದು ಪೋಕ್ಶೋ ಕೇಸ್!

 ​