KARNATAKA NEWS/ ONLINE / Malenadu today/ Oct 4, 2023 SHIVAMOGGA NEWS
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ನಗರ ಸಭಾ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿ ವಿಪರೀತವಾಗಿದೆ. ಆದರೆ ಅದರ ಬಗ್ಗೆ ತಲೆಕೆಡಿಸಿಕೊಳ್ಳುವವರು ಇಲ್ಲದಂತಾಗಿದೆ ಎಂದು ಜನರು ದೂರುತ್ತಿದ್ದಾರೆ. ಈ ನಡುವೆ ಬೀದಿನಾಯಿಗಳು ದಾಳಿ ನಡೆಸಿ ಬಾಲಕನೊಬ್ಬನ ಮುಖಕ್ಕೆ ಗಂಭೀರ ಗಾಯವಾಗಿದೆ. ಬಾಲಕ ಮನೆಯ ಮುಂದೆ ಆಟವಾಡುತ್ತಿದ್ದ ವೇಳೆಯಲ್ಲಿ ನಾಯಿಗಳು ದಾಳಿ ಮಾಡಿದ್ದು, ಆತನನ್ನ ಅಟ್ಟಾಡಿಸಿ ಆತನ ಮುಖಕ್ಕೆ ಕಚ್ಚಿವೆ.
ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ಪಡೆದುಕೊಂಡು ಭಯಬೀತನಾಗಿದ್ಉದ, ಕಮಿಷನರ್ ಮಾಮಾ ದಯವಿಟ್ಟು ನಾಯಿಗಳನ್ನು ಹಿಡಿಸಿ ಎಂದು ಅಂಗಲಾಚಿ ವಿಡಿಯೋ ಮಾಡಿದ್ದಾನೆ. ಸಾಗರ ನಗರಸಭೆ ವ್ಯಾಪ್ತಿಯ 25ನೇ ವಾರ್ಡಿನಲ್ಲಿ ಈ ಘಟನೆ ನಡೆದಿದೆ.
ಇನ್ನಷ್ಟು ಸುದ್ದಿಗಳು
