ನಾಪತ್ತೆಯಾಗಲು ಎನ್​ಪಿಎಸ್​ ನೌಕರನಿಗೆ ಆದ ಕಿರುಕುಳವೇನು? ಸಾವಿನ ನಿರ್ಧಾರ ಬದಲಿಸಿದ ಆ ಘಟನೆಯಾವುದು? ಸ್ಟೇಷನ್​ ಮುಂದೆ ಪ್ರಭಾಕರ್​ ಹೇಳಿದ ಹುಟ್ಟುಹಬ್ಬದ ನೋವಿನ ಕಥೆ

The details of what Prabhakar, president of the Shimoga taluk unit of the NPS Employees' Association, said yesterday.ನಾಪತ್ತೆಯಾಗಿದ್ದಎನ್​ಪಿಎಸ್ ನೌಕರರ ಸಂಘದ ಶಿವಮೊಗ್ಗ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಭಾಕರ್ ನಿನ್ನೆ ಹೇಳಿದ ಮಾತಿನ ವಿವರ ಇಲ್ಲಿದೆ

ನಾಪತ್ತೆಯಾಗಲು ಎನ್​ಪಿಎಸ್​ ನೌಕರನಿಗೆ ಆದ ಕಿರುಕುಳವೇನು? ಸಾವಿನ ನಿರ್ಧಾರ ಬದಲಿಸಿದ ಆ ಘಟನೆಯಾವುದು? ಸ್ಟೇಷನ್​ ಮುಂದೆ ಪ್ರಭಾಕರ್​ ಹೇಳಿದ ಹುಟ್ಟುಹಬ್ಬದ ನೋವಿನ ಕಥೆ

KARNATAKA NEWS/ ONLINE / Malenadu today/ Jul 22, 2023 SHIVAMOGGA NEWS 

ಶಿವಮೊಗ್ಗದಲ್ಲಿ ಕಳೆದ 19 ರಂದು ವಾಟ್ಸ್ಯಾಪ್​ ಡೆತ್ ನೋಟ್ ಮೆಸೇಜ್ ಮಾಡಿ ನಾಪತ್ತೆಯಾಗಿದ್ದ ಎನ್​ಪಿಎಸ್​ ನೌಕರರ ಸಂಘದ ಶಿವಮೊಗ್ಗ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಭಾಕರ್ ನಿನ್ನೆ ಪತ್ತೆಯಾಗಿದ್ದಾರೆ ಅವರನ್ನು ಶಿವಮೊಗ್ಗದ ಕೋಟೆ ಪೊಲೀಸ್ ಸ್ಟೇಷನ್ (Kote Police Station) ಪೊಲೀಸರು ದಾವಣಗೆರೆಯಲ್ಲಿ ಪತ್ತೆ ಮಾಡಿ ಕರೆದುಕೊಂಡು ಬಂದಿದ್ದಾರೆ. 

ಏನಾಗಿತ್ತು ? ಯಾಕೆ ಹೋಗಿದ್ದರು ಪ್ರಭಾಕರ್?

ನಿನ್ನೆ ಕೋಟೆ ಪೊಲೀಸ್​  ಠಾಣೆಯ ಆವರಣದಲ್ಲಿ ಮಾತನಾಡಿದ ಪ್ರಭಾಕರ್​ ಕಳೆದ ಡಿಸೆಂಬರ್​ನಲ್ಲಿ ಬೆಂಗಳೂರು ನಲ್ಲಿ ಎನ್​ಪಿಎಸ್​ ಹೋರಾಟಕ್ಕೆ ಹೋದ ಸಂದರ್ಭದಲ್ಲಿ ನನಗೆ ಒಂದು ಫೋನ್ ಕರೆ ಬಂದಿತ್ತು. ಆತ ನಿಮ್ಮ ಹೋರಾಟ ಷಡಾಕ್ಷರಿಯವರ ವಿರುದ್ಧವಾ ಎಂದು ಕೇಳಿದ್ದರು. ಆತ ಬಾಗಲಕೋಟೆಯವನಾಗಿದ್ದ. ಅಲ್ಲಿಂದಲೇ ನನಗೆ ಕಿರುಕುಳ ಆರಂಭವಾಯ್ತು ಎಂದು ಆರೋಪಿಸಿದ್ದಾರೆ. 

ನಾನ್ ಟೀಚಿಂಗ್ ಹುದ್ದೆ 

ನನ್ನ ವೃತ್ತಿ ಬದುಕಿನ ಬಗ್ಗೆ ಆತ ವಾಟ್ಸ್ಯಾಪ್ ಗ್ರೂಪ್​ನಲ್ಲಿ ಮೆಸೇಜ್ ಹಾಕಿದ್ದ. ಮೇಲಾಗಿ ನಾನ್ ಟೀಚಿಂಗ್ ಪೋಸ್ಟ್ ಕೊಟ್ಟಿದ್ದನ್ನ ತಪ್ಪು ಎಂದು ಇವರೇ ತೀರ್ಪು ಕೊಡುತ್ತಾರೆ. ಅಲ್ಲದೆ  ಷಡಾಕ್ಷರಿಯವರೇ ನಿನಗೆ ಪೋಸ್ಟಿಂಗ್ ಕೊಡೋದಕ್ಕೆ ಬರುವುದಿಲ್ಲ ಎಂದಿದ್ದರು. ನಾನು ಪರಿಪರಿಯಾಗಿ ಹೇಳಿದರೂ ಕೇಳದಿದ್ದರಿಂದ ನನಗೆ ತೊಂದರೆಯಾಯ್ತು. ಅವರ ಪರವಾಗಿ ಸಹಕರಿಸುವ ಕೆಲವು ಅಧಿಕಾರಿಗಳು ನನ್ನ ವಿರುದ್ಧ  ನಡೆದುಕೊಂಡರು. ಇದೇ ರೀತಿ ಭದ್ರಾವತಿ, ಗುಲ್ಬರ್ಗಾ, ಚಿತ್ರದುರ್ಗದಲ್ಲಿಯು ಕೆಲವು ಅಧಿಕಾರಿಗಳಿಗೆ ಇದೇ ರೀತಿ ಕಿರುಕುಳ ಆಗಿದೆ. 

ಮಗಳ ಬರ್ತ್​ಡೇಗೆ ದುಡ್ಡಿರಲಿಲ್ಲ

20 ನೇ ತಾರೀಖು ಮಗಳ ಬರ್ತ್​​ಡೆ ಇತ್ತು 18 ನೇ ತಾರೀಖು ನನಗೆ ಬಹಳ ನೋವಾಯ್ತು, ಹುಟ್ಟುಹಬ್ಬ ಮಾಡಲು ಸಹ ದುಡ್ಡು ಇರಲಿಲ್ಲ ಹಾಗಾಗಿ 19 ರಂದು ಬೆಳಗ್ಗೆ ಸಾಯಬೇಕು ಎಂದೇ ತೀರ್ಮಾನಿಸಿ  ಹೋಗಿದ್ದೆ ಎಂದು ಪ್ರಭಾಕರ್ ತಿಳಿಸಿದ್ದಾರೆ. 

ಮನಸ್ಸು ಬದಲಿಸಿದ ಆ ಘಟನೆ

ತಮ್ಮ ಮಾತು ಮುಂದುವರಿಸುತ್ತಾ ಪ್ರಭಾಕರ್​ ರವರು ತಮ್ಮ ದಾರಿಯಲ್ಲಿ ನಡೆದ ಘಟನೆಯೊಂದನ್ನ ವಿವರಿಸಿದ್ಧಾರೆ. ಶೃಂಗೇರಿ-ಕಾರ್ಕಳ ರೋಡಿನಲ್ಲಿ ಸಣ್ಣದೊಂದು ಘಟನೆ ನಡೆದಿತ್ತು. ನನ್ನ ಕಾರನ್ನ ಓವರ್ ಟೇಕ್ ಮಾಡಿಕೊಂಡು ಲಾರಿಯೊಂದು ಮುಂದಕ್ಕೆ ಹೋಗಿತ್ತು. ಆ ಲಾರಿ ಮೇಲೆ ದೊಡ್ಡ ಮರವೊಂದು ಬಿದ್ದಿತ್ತು. ಅದರಿಂದ ಟ್ರಾಫಿಕ್​ ಜಾಮ್ ಆಯ್ತು. ಆ ಸಂದರ್ಭದಲ್ಲಿ ನಾನು ಏನೂ ತೀರ್ಮಾನಿಸಲಾಗಿಲ್ಲ. ಹಾಗಾಗಿ ಆತ್ಮಹತ್ಯೆ ಯೋಚನೆಯಿಂದ ಹೊರಬಂದು, ಅಲ್ಲಿಂದ ಧರ್ಮಸ್ತಳಕ್ಕೆ ಹೋಗಿದ್ದೆ. ಅಲ್ಲಿಂದ ಸಿದ್ದಾರೂಢ ಮಠಕ್ಕೆ ಹೋಗಿದ್ದೆ, ಅಲ್ಲಿ ನನ್ನ ಮಗಳು ನನ್ನ ಯೋಚನೆಗೆ ಬಂದಳು. ಅಷ್ಟರಲ್ಲಿ ನನ್ನ ಮೊಬೈಲ್ಗೆ ಸಾವಿರಾರು ಮೆಸೇಜ್ ಬಂದಿದ್ದವು. ನನ್ನ ಸಹೋದರರೊಬ್ಬರು ಕರೆ ಮಾಡಿ ಎಚ್ಚರಿಸಿದರು. ಅವರ ಮಾತು ಕೇಳಿದ ಬಳಿಕ ನಾನು ವಾಪಸ್ ಬಂದೆ. ಪೊಲೀಸರು ನನ್ನನ್ನು ಕರೆದುಕೊಂಡು ಬಂದರು ಎಂದು ತಿಳಿಸಿದ್ದಾರೆ. 

ನಡುರಸ್ತೆಯಲ್ಲಿ ಮಹಿಳೆಯ ಕೊಲೆ! ಸಾಬೀತಾಯ್ತು ಅಪರಾಧ! ಶಿಕಾರಿಪುರ ಗ್ರಾಮಾಂತರ ಠಾಣೆಯ ಕೇಸ್​ನಲ್ಲಿ ಕೋರ್ಟ್ ತೀರ್ಪು!

ಮಾಜಿ ಸಿಎಂ ಬಿಎಸ್​ವೈ ಇನ್ಮುಂದೆ ಡಾ.ಬಿಎಸ್​ ಯಡಿಯೂರಪ್ಪ! ಅಭಿಮಾನಿಗಳಿಗೂ ಅವಕಾಶ ನೀಡಿದ BYR

ಮಗ ಬೈಕ್​ ಓಡಿಸಿದ ತಪ್ಪಿಗೆ 25 ಸಾವಿರ ರೂಪಾಯಿ ದಂಡ ಕಟ್ಟಿದ ತಂದೆ! ಕಾರಣವೇನು ಗೊತ್ತಾ?

ವೈದ್ಯರೊಬ್ಬರ ಸಮಯ ಪ್ರಜ್ಞೆಯಿಂದ ಬಯಲಾಯ್ತು ದುಷ್ಕೃತ್ಯ! ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾಯ್ತು ಮತ್ತೊಂದು ಪೋಕ್ಶೋ ಕೇಸ್!

 ​