ಶಿವಮೊಗ್ಗದ ಪೊಲೀಸರೇ ಎಚ್ಚರಿಕೆ ! ಹುಷಾರ್‌ ತಪ್ಪಿದರೇ ನೀವೇ ಅಂದರ್? ಮಲೆನಾಡಲ್ಲಿ ಸುಪ್ರೀಂ ಆಯ್ತಾ ಮಾಫಿಯಾ? JP ಬರೆಯುತ್ತಾರೆ

Shimoga police are on alert! Is the mafia supreme in Malenadu

ಶಿವಮೊಗ್ಗದ ಪೊಲೀಸರೇ ಎಚ್ಚರಿಕೆ ! ಹುಷಾರ್‌ ತಪ್ಪಿದರೇ ನೀವೇ ಅಂದರ್?  ಮಲೆನಾಡಲ್ಲಿ ಸುಪ್ರೀಂ ಆಯ್ತಾ ಮಾಫಿಯಾ? JP ಬರೆಯುತ್ತಾರೆ
Shimoga police

Shivamogga  Apr 10, 2024  Shimoga police  ಪೊಲೀಸರಿಗೆ ಖೆಡ್ಡಾ..,ಮಾಫೀಯದ ಕರಿ ನೆರಳಿನಲ್ಲಿ ಕ್ರೈಂ ಕಂಟ್ರೋಲ್ ಮಾಡೋ ಪೊಲೀಸ್ರು..ಮುಂದಿನ ಟಾರ್ಗೇಟ್ ಯಾರು?

ಶಿವಮೊಗ್ಗದಲ್ಲಿ ಇತ್ತಿಚ್ಚೆಗೆ ಓಸಿ ಇಸ್ಪೀಟು ದಂಧೆಗೆ ಕಡಿವಾಣ ಬೀಳುತ್ತಿದ್ದಂತೆ ಮಾಫೀಯದ ದೊರೆಗಳು ಕ್ರೈಂ ಪೊಲೀಸರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಅದರಲ್ಲೂ ಕ್ರೈಂ ತಡೆಗಟ್ಟುವಲ್ಲಿ ಮಂಚೂಣಿಯಲ್ಲಿರುವ ಪೊಲೀಸ್  ಅಧಿಕಾರಿ ಸಿಬ್ಬಂದಿಗಳನ್ನೇ ನೇರವಾಗಿ ಟಾರ್ಗೆಟ್ ಮಾಡುತ್ತಿದೆ. ಇತ್ತೀಚೆಗೆ ಸೆನ್ ಠಾಣೆಯ ಎಎಸ್ಸೈ ರೆಹಮಾನ್ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುವ  ಹಿಂದೆ ಓಸಿ ಮಾಫೀಯ ವ್ಯವಸ್ಥಿತವಾಗಿ ಕೆಲಸ ಮಾಡಿರುವ ವಿಚಾರ ಮಲೆನಾಡು ಟುಡೆಗೆ ಲಭ್ಯವಾಗಿದೆ.  

ದಾವಣಗೆರೆಯಿಂದ ಲೋಕಾಯುಕ್ತ ಎಸ್ಪಿ ಖುದ್ದು ಬಂದು ರೆಹಮಾನ್ ಒಂದು ಲಕ್ಷ ಹಣ ಪಡೆಯುತ್ತಿರುವ ಸಂದರ್ಭದಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಅಷ್ಟಕ್ಕೂ ಈ ಟ್ರಾಪ್ ಗೆ ಖುದ್ದು ಎಸ್ಪಿಯವರೆ ಬಂದು ಟ್ರಾಪ್ ಮಾಡುವಂತ ಉದ್ದೇಶದ ಹಿಂದೆ ಯಾವ ವ್ಯವಸ್ಥೆ ಕೆಲಸ ಮಾಡಿದೆ. ದೂರುದಾರರ ಹಿನ್ನಲೆ ಏನು..ಅವರ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ಎಷ್ಟು ಕೇಸುಗಳಿವೆ ಎಂಬುದನ್ನು ತಿಳಿಯಬೇಕಾಗುತ್ತದೆ. 

ಹಣ ಹೆಂಡ ಹೆಣ್ಣಿನ ಆಮೀಷದ ಮುಂದೆ ಎಂತವರೂ ವೀಕ್ ಆಗುತ್ತಾರೆ ಎಂಬುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ ಅದರಂತೆ ರೆಹಮಾನ್ ಕೂಡ ವ್ಯವಸ್ಥಿತವಾಗಿ ಟ್ರಾಪ್ ಆಗಿದ್ದಾರೆ. ಮೊದಲಿನಿಂದಲೂ ಮುಸ್ಲಿಂ ಅಂಡರ್ ವರ್ಡ್ಸ್ ನ ಪ್ರಮುಖರವ್ನ ರೆಹಮಾನ್ ಎದುರು ಹಾಕಿಕೊಂಡಿದ್ರು. 

ಸಿನಿಯರ್ ರೌಡಿಗಳಿಂದ ಹಿಡಿದು ಬಡ್ಡಿಂಗ್ ರೌಡಿಗಳಿಗೆ ರೆಹಮಾನ್ ಟಾರ್ಗೇಟ್ ಆಗಿದ್ದರು. ಜೊತೆಯಲ್ಲಿ  ಓಸಿ ಮಾಫೀಯದ ವ್ಯಕ್ತಿಗಳು ರೆಹಮಾನ್ ಗೆ ಖೆಡ್ಡಾ ತೋಡಲು ಸಂಚು ರೂಪಿಸಿದ್ರು. ಈ ವಿಷಯ ಪೊಲೀಸ್ ಇಲಾಖೆಗೆ ಗೊತ್ತಿತ್ತು. ಇಲಾಖೆಯ ಕೆಲವು ಸ್ನೇಹಿತರು ರೆಹಮಾನ್ ಗೆ ಟ್ರಾಪ್ ಮಾಡಿಸುವ ವಿಚಾರವನ್ನು ಗಮನಕ್ಕೆ ತಂದಿದ್ದರು. ಆದರೆ ಉದಾಸೀನ ಮಾಡಿದ ರೆಹಮಾನ್ ಈಗ ಜೈಲುವಾಸ ಅನುಭವಿಸುವಂತಾಗಿದೆ. 

ಅಪರಾಧ ಲೋಕದ ಜನರ ಸಂಪರ್ಕದಲ್ಲಿರುವ ಕ್ರೈಂ ಪೊಲೀಸರು ವ್ಯವಸ್ಥಗೆ ಬಲಿಯಾಗೋದು ಸಹಜ ಎಂಬಂತಾಗಿದೆ. ಅಪರಾಧವನ್ನು ಮಟ್ಟಹಾಕಲೇಬೇಕಾದರೆ, ಮಾಹಿತಿಗಾಗಿ ಅಪರಾಧ ಮಾಡುವ ವ್ಯಕ್ತಿಗಳ ಜೊತೆಯೂ ಸ್ನೇಹ ಸಂಪರ್ಕ ಇಟ್ಟುಕೊಳ್ಳಬೇಕಾಗುತ್ತದೆ. ಇಂತಹ ವ್ಯಕ್ತಿಗಳು ಪೊಲೀಸರಿಗೆ ಪಕ್ಕಾ ಇನ್ಪರ್ಮರ್ ಗಳಾಗಿರ್ತಾರೆ..ನಂತರ ಇವರುಗಳೇ ಪೊಲೀಸರಿಗೆ ಖೆಡ್ಡಾ ತೋಡಿಬಿಡುತ್ತಾರೆ. ಅದಕ್ಕೆ ಪ್ರಮುಖ ಅಸ್ತ್ರವಾಗಿ ಲೋಕಾಯುಕ್ತ ಟ್ರಾಪ್ ಮಾಡಿಸೋದು ಪಾತಕ ಲೋಕಕ್ಕೆ ತುಂಬಾ ಸರಳವಾದ ಕೆಲಸವಾಗಿದೆ. ಇಲ್ಲಿ ನಂಬಿದ ವ್ಯಕ್ತಿಗಳೇ ಪೊಲೀಸರ ಕುತ್ತಿಗೆ ಕೊಯ್ದು ಬಿಡುತ್ತಾರೆ.

ಕ್ರೈಂ ವಿಚಾರದಲ್ಲಿ ಒಂದೋ ಪೊಲೀಸರು ದಿಟ್ಟ ಕ್ರಮ ಕೈಗೊಳ್ಳಬೇಕು.ಇಲ್ಲವೇ ಕ್ರಿಮಿನಲ್ ಗಳಿಗೆ ಕೈಜೋಡಿಸಬೇಕು.  ಪಾತಕ ಲೋಕಕ್ಕೆ ಹೆಡೆಮುರಿ ಕಟ್ತಿನಿ ಅಂದ್ರೆ ಅದು ಪೊಲೀಸ್ರಿಗೆ ಸಾಧ್ಯವಾಗದ ವಿಷಯ.ಯಾಕೆಂದ್ರೆ ಕ್ರೈಂ ನೊಂದಿಗೆ ಶಾಮೀಲಾಗೋ ಕೆಲವು ರಾಜಕೀಯ ವ್ಯವಸ್ಥೆ ಪೊಲೀಸ್ರಿಗೆ ಖೆಡ್ಡಾ ತೋಡುತ್ತೆ. 

ಕೆಲ ವರ್ಷಗಳ ಹಿಂದೆ ಹೊಸಮನೆ ಠಾಣೆಯಲ್ಲಿ ಎಸ್ಸೈ ಆಗಿ ಕರ್ತವ್ಯ ನಿರ್ವಹಿಸಿದ ಕುಮಾರ್ ,,ಮೊಬೈಲ್ ಕಳ್ಳರಿಗೆ ಸಿಂಹಸ್ವಪ್ನವಾಗಿದ್ರು..ಆದ್ರೆ ಅದೇ ಕಳ್ಳರು ಲೋಕಾಯುಕ್ತ ಟ್ರಾಪ್ ಮಾಡಿಸಿ, ಪೊಲೀಸ್ ಅಧಿಕಾರಿಯನ್ನೇ ಅಮಾನತ್ತುಗೊಳಿಸಿ ವಿಕೃತಿ ಮರೆದಿದ್ದರು 

ಇದಾದ ನಂತ್ರ ಚಿನ್ನದ ಕಳ್ಳರಿಗೆ ಹೆಡೆಮುರಿ ಕಟ್ಟಿದ ಅಂದಿನ ಇನ್ಸ್ ಪೆಕ್ಟರ್ ತಿರುಮಲೇಶ್ ವಿರುದ್ಧ ಕಳ್ಳನೊಬ್ಬ ಕೋರ್ಟ್ ನಲ್ಲಿ ದೂರು ನೀಡಿದ.ನನ್ನಿಂದ 100 ಗ್ರಾಂ ಪಡೆದಿದ್ದು ಇನ್ಸ್ ಪೆಕ್ಟರ್ ತಿರುಮಲೇಶ್ 37 ಗ್ರಾಂ ಚಿನ್ನವನ್ನಷ್ಟೆ ರಿಕವರಿ ತೋರಿಸಿದ್ದಾರೆಂದು ಸುಳ್ಳು ದೂರು ನೀಡಿ ಅಧಿಕಾರಿಯನ್ನು ಎತ್ತಂಗಡಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದ..,ಇಲ್ಲಿ ಕಳ್ಳರನ್ನು ಎದುರಾಕೊಂಡ್ರೆ..,ಪೊಲೀಸ್ರಿಗೆ ಉಳಿಗಾಲವಿಲ್ಲ ಅನ್ನೋ ವಾತಾವರಣ ಭದ್ರಾವತಿಯಲ್ಲಿ ಸೃಷ್ಟಿಯಾಗಿದೆ.

ಟಾರ್ಗೇಟ್ ಅಂತೋಣಿ

ಅಪರಾಧ ಲೋಕದಲ್ಲಿ ಸದ್ಯಕ್ಕೆ ಮಾಫೀಯಕ್ಕೆ ಬಿಗ್ ಟಾರ್ಗೇಟ್ ಆಗಿರುವುದು ದೊಡ್ಡಪೇಟೆ ಪೊಲೀಸ್ ಠಾಣೆಯ ಎಎಸ್ಸೈ ಅಂತೋಣಿ. ಕೇವಲ ಒಬ್ಬ ವ್ಯಕ್ತಿ ಹಳೆ ಶಿವಮೊಗ್ಗ ನಗರವನ್ನೇ ನಿಯಂತ್ರಿಸುವಷ್ಟು ಗಟ್ಟಿತನ ಹೊಂದಿದ್ದಾರೆ.  ಕ್ಲಬ್ ಒಂದನ್ನ ಬಂದ್ ಮಾಡಿಸಿದ ಸಿಟ್ಟು ಮಾಫಿಯದವರನ್ನು ಕಂಗೆಡಿಸಿದೆ. 

ತಮ್ಮ ವ್ಯಾಪ್ತಿಯಲ್ಲಿ ಮೇಲಾಧಿಕಾರಿಗಳ ಆದೇಶದಂತೆ ಕ್ರೈಂ ಗಳಿಗೆ ಅವಕಾಶ ಕೊಡದ ಅಂತೋಣಿ ಪಾತಕ ಲೋಕಕ್ಕೆ ಸೆಟ್ ಬ್ಯಾಕ್ ಆಗಿದ್ದಾರೆ. ಇವರನ್ನು ಯಾವುದಾದರೂ ರೂಪದಲ್ಲಿ ಕರ್ತವ್ಯಕ್ಕೆ ಧಕ್ಕೆ ತರುವ ಇಲ್ಲವೇ ಹಲ್ಲೆ ನಡೆಸುವ ಅಥವಾ ಹೆಸರಿಗೆ ಕಳಂಕ ತರುವ ಉದ್ದೇಶವನ್ನು  ಮಾಫೀಯ ಹೊಂದಿದೆ ಎಂಬ ಮಾತು ಬಹಿರಂಗವಾಗಿಯೇ ಚರ್ಚೆಯಾಗುತ್ತಿದೆ. ಅದೇ ರೀತಿ ದೊಡ್ಡಪೇಟೆಯ ಎಎಸ್ಸೈ ಶೇಖರ್ ಹಾಗು ತುಂಗಾ ನಗರ ಠಾಣೆಯ ಪೊಲೀಸ್ ಹೆಡ್ ಕಾನ್ ಸ್ಟೆಬಲ್ ಕಿರಣ್ ಮೇಲೂ ಕ್ರಿಮಿನಲ್ ಗಳ ಕಣ್ಣು ನೆಟ್ಟಿದೆ. 

ಚುನಾವಣೆ ಸಂದರ್ಭ ಬಳಕೆ

ಇದರ ಮುಂದುವರೆದ ಭಾಗವಾಗಿಯೇ ಓಸಿ ಮಾಫಿಯದ ಟೀಂ ಶಿವಮೊಗ್ಗದಲ್ಲಿ 28 ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ವರ್ಗಾವಣೆಗೆ ರಾಜಕೀಯ ಶಕ್ತಿ ಬಳಸಿಕೊಂಡು ಎತ್ತಂಗಡಿ ಮಾಡಿಸಲು ಸಜ್ಜಾಗಿದೆ. ಇದರ ಮೊದಲ ಪಟ್ಟಿಯಲ್ಲಿ ಅಂತೋಣಿ ಹೆಸರು ಇರುವುದು ಅಚ್ಚರಿಯಾಗಿದೆ. 

ಈ ಅಧಿಕಾರಿ ಸಿಬ್ಬಂದಿಗಳಿಂದ ಶಿವಮೊಗ್ಗದ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆ. ಕೋಮುಗಲಭೆಗಳಾಗುತ್ತೆ. ಬಾಂಬ್ ಬ್ಲಾಸ್ಟ್ ಅಂತೆಲ್ಲಾ ಕಥೆಗಳನ್ನು ಕಟ್ಟಿ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಇವರುಗಳಿಂದ ಶಾಂತಿಯುತ ಚುನಾವಣೆ ನಡೆಯಲು ಸಾಧ್ಯವಿಲ್ಲ ಎಂಬ ರೀತಿಯಲ್ಲಿ ಮಾಫೀಯ ಬಿಂಬಿಸಿದೆ. ಚುನಾವಣೆ ಹೊತ್ತಿನಲ್ಲಿಯೇ ಈ ಅಧಿಕಾರಿ ಸಿಬ್ಬಂದಿಗಳನ್ನು ಟಾರ್ಗೇಟ್ ಮಾಡಲು ಮಾಫೀಯಕ್ಕೆ ಸಂಚು ರೂಪಿಸಿಕೊಟ್ಟವರು ಎಂಬುದು ಇಲಾಖೆಗೆ ಗೊತ್ತಿದೆ. ಅದ್ಯಾರು ಎಂದು ಕೇಳಿದರೆ ಸಧ್ಯಕ್ಕೆ ಉತ್ತರವಿಲ್ಲ. ಆದರೆ ಭವಿಷ್ಯದಲ್ಲಿ ಸಮಾಜದ ಪ್ರತಿಷ್ಟಿತ ವೇದಿಕೆಯಲ್ಲಿರುವ ಅಂತಹ ಸಂಚುಕೋರರ ಹೆಸರು ಬೆಳಕಿಗೆ ಬಂದರೆ ಅಚ್ಚರಿಯಿಲ್ಲ.

ಒಟ್ಟಾರೆ, ಶಿವಮೊಗ್ಗ ಪೊಲೀಸರು ಓಸಿ, ಮಟ್ಕಾ, ಮಾಫಿಯಾದ ಬೂತುಗನ್ನಡಿಯಲ್ಲಿದ್ದಾರೆ. ಇದಕ್ಕೆ ಕಾರಣ ಪೊಲೀಸ್‌ ಇಲಾಖೆಯಲ್ಲಿಯೇ ಕೆಲವು ಅಧಿಕಾರಿಗಳು ನೀಡಿರುವ ಸದರ. ಮಾಫಿಯಾದ ಜೊತೆಗಿನ ನಂಟು ಬೆನ್ನಿಗೆ ಎಣ್ಣೆಹಚ್ಚಿಕೊಂಡಂತೆ ಇರಬೇಕು. ಅದಕ್ಕಿಂತ ಹೆಚ್ಚಾದರೆ ಅದರ ಪರಿಣಾಮ ಇಲಾಖೆಯ ಎಲ್ಲಾ ಸಿಬ್ಬಂದಿಗಳು ಅನುಭವಿಸಬೇಕಾಗುತ್ತದೆ.  ಏನೆ ಆಗಲಿ ಕ್ರೈಂ ನಲ್ಲಿ ಕೆಲಸ ಮಾಡುವ ಅಧಿಕಾರಿ ಸಿಬ್ಬಂದಿಗಳು ಎಚ್ಚರದಿಂದ ಕರ್ತವ್ಯ ಪ್ರಜ್ಞರಾಗಿ ಕೆಲಸ ಮಾಡಿದರೆ ಒಳಿತು. ಪ್ರೀತಿ ವಿಶ್ವಾಸ ನಂಬಿಕೆ ಅಂತೆಲ್ಲಾ ಕ್ರೈಂ ಲೋಕದ ಜೊತೆ ನಂಟು ಇಟ್ಟುಕೊಂಡರೆ,ಖೆಡ್ಡಾಗೆ ಬೀಳುವುದು ಗ್ಯಾರಂಟಿ.