Bhadravathi Old town theft case 8 ವರ್ಷಗಳ ನಂತರ ಭದ್ರಾವತಿಯಲ್ಲಿ ನಡೀತು, ರೋಚಕ ಕನ್ನ!

Bhadravathi Old Town theft case took place in Bhadravathi after 8 years, jp exclusive

Bhadravathi Old town theft case 8 ವರ್ಷಗಳ ನಂತರ ಭದ್ರಾವತಿಯಲ್ಲಿ ನಡೀತು, ರೋಚಕ ಕನ್ನ!
Bhadravathi Old Town theft case took place in Bhadravathi after 8 years, jp exclusive

Bhadravathi Old town theft case 8 ವರ್ಷಗಳ ನಂತರ ಭದ್ರಾವತಿಯಲ್ಲಿ ನಡೀತು, ರೋಚಕ ಕನ್ನ! ಕೋಟಿ ಮೌಲ್ಯಕ್ಕೂ ಮಿಗಿಲಾದ ಚಿನ್ನಾಭರಣ ದೋಚಿದ್ದು ಹೇಗೆ ಕಳ್ಳರು! ಹಾಲ್ಮಂಜನನ್ನ ನೆನಪಿಸಿದ ಕಳ್ಳತನ, ಟ್ವಿಸ್ಟ್ ಪಡೆದಿದ್ದು ಹೇಗೆ? ಮಾಚೇನಹಳ್ಳಿ ಬ್ಯಾಂಕ್​ ಕನ್ನಕ್ಕೂ ಜ್ಯುವೆಲರಿ ಕಳ್ಳತನಕ್ಕೇನಿತ್ತು ಲಿಂಕ್​!? ನೇಪಾಳಿ ಗ್ಯಾಂಗ್​ ಸಿಕ್ಕಿದ್ದೇಗೆ? JP EXCLUSIVE

ಭದ್ರಾವತಿ ತಾಲ್ಲೂಕು ಓಲ್ಡ್​ ಟೌನ್​ ಪೊಲೀಸ್​ ಸ್ಟೇಷನ್​ ಲಿಮಿಟ್​. ಸರ್ಕಾರಿ ಆಸ್ಪತ್ರೆ ಸಮೀಪ ಇರುವ ಎಸ್​ಎಸ್​ ಜ್ಯುವೆಲರ್ಸ್​ನಲ್ಲಿ ಕಳೆದ ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ನಡೆದಿರೋ ಚಿನ್ನಾಭರಣ ಕಳ್ಳತನದ ಪ್ರಕರಣದ ಈಗಾಗಲೇ ನಿಮಗೆಲ್ಲಾ ಸುದ್ದಿ ಮುಟ್ಟಿರಬಹುದು. ಈ ಸುದ್ದಿ, ಅದರ ಆಚೆಗಿದ್ದು ಹಾಗೂ ವಿಷಯದ ಆಳಕ್ಕೆ ಸಂಬಂಧಿಸಿದ್ದಾಗಿದೆ.

ಶನಿವಾರ ನಡೆಯಿತು ಜ್ಯುವೆಲರಿ ಶಾಪ್​ನಲ್ಲಿ ಕಳ್ಳತನ

ಕಳೆದ ಶನಿವಾರ ನಡೆದ ಘಟನೆ ಸಂಬಂಧ ಭಾನುವಾರ ದಾಖಲಾದ ಎಫ್​ಐಆರ್​ನಲ್ಲಿ ಒಟ್ಟಾರೆ, ಒಂದು ಕೋಟಿ 34 ಲಕ್ಷದ 73 ಸಾವಿರದ ನಾನೂರು ರೂಪಾಯಿ ಮೌಲ್ಯ ಚಿನ್ನ, ಬೆಳ್ಳಿ, ಹರಳು ಹಾಗೂ ದುಡ್ಡು ಕಳ್ಳತನವಾಗಿದೆ ಎಂದು ದಾಖಲಿಸಲಾಗಿದೆ. ಸಾಮಾನ್ಯವಾಗಿ ಅಂಗಡಿಗಳಲ್ಲಿ ಕಳ್ಳತನವಾಗುವಾಗ ಸಿಸಿ ಕ್ಯಾಮರಾ ಇರಲಿಲ್ವೇ!? ಅದನ್ನ ಮೊಬೈಲ್​ನಲ್ಲಿ ಮಾನಿಟರಿಂಗ್ ಮಾಡ್ತಿರಲಿಲ್ವೇ ಎಂಬುದು ಈಗ ಎಂತವರಾದರೂ ಕೇಳುವ ಪ್ರಶ್ನೆ! . ಆದರೆ ಘಟನೆ ನಡೆದ ಸಮಯ ಹಾಗೂ ಸಿಸಿ ಕ್ಯಾಮರಾದ ಡಿವೈಸ್​ನ್ನ ಕಳ್ಳರೇ ಕದ್ದುಕೊಂಡು ಹೋಗಿರುವುದು ಈ ಪ್ರಶ್ನೆಗೆ ಸಿಗುತ್ತಿರುವ ಉತ್ತರ

ಅಂಗಡಿ ಬಾಗಿಲು ಮುಚ್ಚಿಕೊಂಡು ಮನೆಗೆ ಹೋಗಿ, ವಿಶ್ರಾಂತಿ ತೆಗೆದುಕೊಳ್ಳುವ ಹೊತ್ತಿಗಾಗಲೇ ಕಳ್ಳತನ ನಡೆದಿದೆ ಎಂಬ ಮಾಹಿತಿಯಿದೆ. ಅದಕ್ಕಿಂತ ಹೆಚ್ಚಾಗಿ ಇಲ್ಲಿ ಕಳ್ಳತನ ನಡೆದ ರೀತಿ , ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಅತಿದೊಡ್ಡ ದೊಡ್ಡ ಕಳ್ಳತನದ ಕೇಸ್​ಗಳನ್ನು ನೆನಪಿಸುತ್ತದೆ. ಆ ವಿಚಾರಕ್ಕೆ ಮುಂದಿನ ಪ್ಯಾರಾದಲ್ಲಿ ಹೇಳುತ್ತೇನೆ. ಅದಕ್ಕಿಂತ ಮೊದಲು ನಡೆದ ಘಟನೆ ಹೇಗಾಯ್ತು ಎಂಬುದರ ಬಗ್ಗೆ ಸಿಕ್ಕ ವಿಷಯಗಳ ಬಗ್ಗೆ ತಿಳಿಸುತ್ತೇನೆ.

ಹೋಲಿಕೆ...ಹೋಲಿಕೆ..ಹೋಲಿಕೆ ಕ್ರೈಂ ಹೋಲಿಕೆ

ಸಾಮಾನ್ಯವಾಗಿ ಕಳ್ಳತನ ನಡೆದಾಗ ಅದಕ್ಕೆ ಹೋಲಿಕೆಯಾಗುವ ಮಾದರಿಯನ್ನು ಪೊಲೀಸರು ಪರಿಶೀಲಿಸುತ್ತಾರೆ. ಅಂದರೆ, ಕಳ್ಳ ಯಾವ ರೀತಿಯಲ್ಲಿ ಕಳ್ಳತನ ಮಾಡಿದ್ದಾನೆ. ಆ ರೀತಿಯಲ್ಲಿ ಕಳ್ಳತನ ಮಾಡುವ ಈ ಹಿಂದಿನ ಆರೋಪಿಗಳು ಯಾರಿದ್ದಾರೆ.

ಯಾವ ರೀತಿಯಲ್ಲಿ ಒಳಕ್ಕೆ ನುಗ್ಗಿದ್ರು, ಆನಂತರ ಏನು ಮಾಡಿದ್ರು, ತದನಂತರ ಏನುಮಾಡಿದ್ರು. ಹೀಗೆ ಕೇಸ್​ ಸ್ಟಡಿಯಲ್ಲಿ ಪೊಲೀಸರಿಗೆ ಒಂದು ಸುಳಿವು ತಕ್ಷಣವೇ ಸಿಕ್ಕಿರುತ್ತದೆ. ಏಕೆಂದರೆ, ವೃತ್ತಿ ಪರ ಕಳ್ಳರು ಕಳ್ಳತನ ಮಾಡುವಾಗ ತಮ್ಮದೇ ಆದ ಶೈಲಿಯಲ್ಲಿ ಕಳ್ಳತನ ಮಾಡಿರುತ್ತಾರೆ ಎಂಬುದು ಕ್ರೈಂ ಇನ್ವೇಸ್ಟಿಗೇಷನ್​ನ ಬಲವಾದ ನಂಬಿಕೆ.

ಅವತ್ತು ರಾತ್ರಿ ನಡೆದಿದ್ದು

ಇದೇ ರೀತಿಯಲ್ಲಿ ಭದ್ರಾವತಿ ಜ್ಯುವೆಲರ್ಸ್​ನ ಕಳ್ಳತನ ಪ್ರಕರಣವನ್ನು ಗಮನಿಸಿದಾಗ, ಅದು ಮುಂದೆ ಅಂಗಡಿಯಿದ್ದು ಹಿಂದೆ ಕನ್ಸರ್​ವೆನ್ಸಿ ಇದೆ. ಅಂಗಡಿಯ ಒಳಭಾಗದಲ್ಲಿ ಮನೆಯ ಮಾದರಿಯಲ್ಲಿದ್ದು, ಅಲ್ಲಿ ಬಳಕೆ ಮಾಡದ ರೂಮ್​ಗಳಿವೆ.

ಇದರ ಬಗ್ಗೆ ಮಾಹಿತಿ ಪಡೆಯೋದಕ್ಕೆ ಅಂತಾನೇ ಕಳ್ಳರು ಸ್ಕೆಚ್​ ಹಾಕಿದ್ದಾರೆ. ಕಳೆದ ಶುಕ್ರವಾರ ಅಂಗಡಿಯನ್ನು ಹಗಲು ರಾತ್ರಿ ವಾಚ್ ಮಾಡಿದ್ದ ಕಳ್ಳರು, ನಂತರ , ಕನ್ನ ಹಾಕಲು ಬೇಕಿರುವ ಹ್ಯಾಮರ್​, ಡ್ರಿಲ್ಲರ್​, ರಾಡ್​, ಗ್ಯಾಸ್​ ಕಟ್ಟರ್, ಹೀಗೆ ಟೂಲ್ಸ್​ಗಳನ್ನು ಒಂದು ಕಡೆ ಇಟ್ಟು ಹೋಗಿದ್ದಾರೆ.

ಅದಾದ ಬಳಿಕ, ಶನಿವಾರ ರಾತ್ರಿ ಸ್ಥಳಕ್ಕೆ ಬಂದು ನಿಗದಿಯಂತೆ ಅಂಗಡಿಯ ಹಿಂದುಗಡೆಯಿಂದ ಗೋಡೆಯನ್ನು ಒಡೆದು ಒಳಕ್ಕೆ ಬಂದಿದ್ದಾರೆ. ನಂತರ, ಅಲ್ಲಿಂದ ಅಂಗಡಿಯಲ್ಲಿದ್ದ ಬೀರುವೊಂದನ್ನ ಒಡೆಯಲು ಪ್ರಯತ್ನಿಸಿದ್ದಾರೆ.

ಆದರೆ ಅದು ಆ ಕ್ಷಣಕ್ಕೆ ಸಾಧ್ಯವಾಗಿಲ್ಲ. ಹೀಗಾಗಿ ಇನ್ನೊಂದು ಅಲ್ಮೇರಾ ಒಡೆದು ಅದರಲ್ಲಿದ್ದ ಬೆಳ್ಳಿ ಕದ್ದಿದ್ದಾರೆ. ಅದಾದನಂತರ ಶೋಕೇಸ್​ನಲ್ಲಿದ್ದ ಚಿನ್ನ, ಕ್ಯಾಶ್​ನಲ್ಲಿದ್ದ ಹಣ, ಹಾಗೂ ಇತರೇ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.

ನೆನಪಾದ ಹಾಲ್ಮಂಜ

ಪೊಲೀಸ್​ ತನಿಖೆಯಲ್ಲಿ ಇಷ್ಟು ತಿಳಿದು ಬರುತ್ತಲೇ ನೆನಪಾಗಿದ್ದು ಹಾಲ್ಮಂಜ! ರವಿ ಚೆನ್ನಣ್ಣವರ್​ ಶಿವಮೊಗ್ಗದಲ್ಲಿ ಎಸ್​ಪಿಯಾಗಿದ್ದ ಮಹತ್ವದ ಪ್ರಕರಣಗಳನ್ನು ಭೇದಿಸಿದ್ದರು. ಆ ಪೈಕಿ ವಿವಿದೆಡೆ ಕನ್ನ ಹಾಕಿ ಕಳ್ಳತನ ಮಾಡುತ್ತಿದ್ದ ಹಾಲ್ಮಂಜನ ಕೇಸ್​ ಕೂಡ ಒಂದಾಗಿತ್ತು.

ಈತನಿಂದ ಬರೋಬ್ಬರಿ 12 ಕೆಜಿಯಷ್ಟು ಚಿನ್ನ ಆ ಕಾಲದಲ್ಲಿ ಜಪ್ತಿ ಮಾಡಲಾಗಿತ್ತು , ಆತನ ಮೇಲೆ 90 ಕೇಸ್​ಗಳಿದ್ದವು! ಹಾಲ್ಮಂಜನ ಪರಿಚಯ ಸದ್ಯಕ್ಕೆ ಇಷ್ಟೆ. ಈತನ ಬಗ್ಗೆ ಸದ್ಯದಲ್ಲಿಯೇ ಇನ್ನೊಂದು ಸ್ಟೋರಿ ಎಕ್ಸ್​ಕ್ಲ್ಯೂಸಿವ್ ಆಗಿ ನಿಮ್ಮ ಮುಂದಿಡುತ್ತೇನೆ.

ಹಾಲ್ಮಂಜ ಕದಿಯುತ್ತಿದ್ದ ಶೈಲಿಯು , ಜ್ಯುವೆಲರಿ ಕಳ್ಳತನದ ಶೈಲಿಯು ಹೆಚ್ಚುಕಮ್ಮಿ ಒಂದೇ ರೀತಿಯಾದ್ದರಿಂದ ಪೊಲೀಸರು ಹಾಲ್ಮಂಜನ ಬಗ್ಗೆಯು ಯೋಚಿಸಿದ್ದಾರೆ. ಹಾಗಿದ್ದರೂ ಉಳಿದ ಅನುಮಾನಗಳನ್ನು ತಮ್ಮ ಬೆನ್ನಿಗೆ ಕಟ್ಟಿಕೊಂಡು ಭದ್ರಾವತಿ ಪೊಲೀಸರು ಆರೋಪಿಗಳ ಬೇಟೆಗೆ ಬಲೆ ಬೀಸಿದ್ದಾರೆ . ಆಗ ಪ್ರಕರಣಕ್ಕೆ ಸಿಕ್ಕಿತ್ತು ರೋಚಕ ಟ್ವಿಸ್ಟ್​

2014 ರಲ್ಲಿ ನಡೆದಿತ್ತು ಮಾಚೇನಹಳ್ಳಿ ಬ್ಯಾಂಕ್​ ಕಳ್ಳತನ

ನಿಮಗೆ ನೆನಪಿರಬಹುದು, ಶಿವಮೊಗ್ಗದ ಮಾಚೇನ ಹಳ್ಳಿಯಲ್ಲಿ ಪ್ರತಿಷ್ಟಿತ ಬ್ಯಾಂಕ್​ವೊಂದರಲ್ಲಿ 2014 ಸೆಪ್ಟಂಬರ್ ತಿಂಗಳಲ್ಲಿ ಬಹುದೊಡ್ಡ ಕನ್ನದ ಪ್ರಕರಣ ನಡೆದಿತ್ತು. ಆಗ ಎಸ್​ಪಿ ಕೌಶಲೇಂದ್ರ ಕುಮಾರ್ ಇದ್ದರು. 36 ಲಕ್ಷ ಚಿನ್ನ ಆರು ಕೆಜಿ ಚಿನ್ನ ಕಳ್ಳತನವಾಗಿತ್ತು ಎಂಬ ಮಾಹಿತಿ ಅಂದು ಹೊರಬಿದ್ದಿತ್ತು.

ಅಲ್ಲದೆ, ಅದು ಕೂಡ ಗೋಡೆಗೆ ಕನ್ನ ಕೊರೆದು ಒಳಕ್ಕೆ ನುಗ್ಗಿದ್ದ ಕಳ್ಳರು, ಸಿಸಿ ಕ್ಯಾಮರಾಗಳನ್ನು ಧ್ವಂಸ ಮಾಡಿ, ನಂತರ ಅಲ್ಲಿದ್ದ ಲಾಕರ್​ಗಳನ್ನು ಓಪನ್​ ಮಾಡಿ, ಹಣ ಒಡವೆ ಕದ್ದೊಯ್ದಿದ್ದರು. ಈ ಪ್ರಕರಣ ಇದುವರೆಗೂ ತಾರ್ಕಿಕ ಅಂತ್ಯ ಕಂಡಿಲ್ಲ.

8 ವರ್ಷಗಳ ಬಳಿಕ ಭದ್ರಾವತಿಯಲ್ಲಿ ಇದೇ ಮಾದರಿಯಲ್ಲಿ ಕಳ್ಳತನವೊಂದು ನಡೆದಿದೆ. 2 ಕಳ್ಳತನದ ಮಾದರಿ ಹೆಚ್ಚುಕಮ್ಮಿ ಒಂದೆ ರೀತಿಯಲ್ಲಿತ್ತು. ಹೀಗಾಗಿ ಪೊಲೀಸ್ ಇಲಾಖೆ ಇದೆಲ್ಲಾ ಹಿಸ್ಟರಿ ಹಾಗೂ ಕ್ರೈಂ ರೆಕಾರ್ಡ್​ಗಳನ್ನು ತಡಕಾಡಿ ಆರೋಪಿಗಳ ಬೇಟೆಗೆ ಹೊರಟಿತ್ತು. ಅವರ ಬೇಟೆ ಸಿಗೋದ್ರಲ್ಲಿ ಅನುಮಾನವೇ ಇರಲಿಲ್ಲ!

ನೈಟ್​ ಪೆಟ್ರೋಲಿಂಗ್ ಪೊಲೀಸರ ಕೈಗೆ ಸಿಕ್ಕಿಬಿದ್ದ ಆರೋಪಿಗಳು

ಯೆಸ್​..ಯೆಸ್​..ಯೆಸ್​.. ಪೊಲೀಸರು ಹಳ್ಳ ಕಳ್ಳರ ಲಿಸ್ಟ್​ ಹುಡುಕುತ್ತಿರುವಾಗಲೇ ಪೊಲೀಸ್​ ಪೆಟ್ರೋಲಿಂಗ್​ನ ಸಮಯದಲ್ಲಿ ಅನುಮಾನಸ್ಪದವಾಗಿ ಓಡಾಡುತ್ತಿದ್ದವರು ಕಾಣಿಸಿಕೊಂಡಿದ್ದಾರೆ. ಅವರನ್ನ ತಕ್ಷಣ ಹಿಡಿದು ಸ್ಟೇಷನ್​ಗೆ ಕರೆದುಕೊಂಡು ಬಂದ ಪೊಲೀಸರಿಗೆ ಕಳ್ಳತನ ಕ್ಲೂ ಸಿಕ್ಕಿದೆ.

ಅಂದರೆ, ಆರೋಪಿಗಳು ಮಾಲ್ ಸಮೇತ ಎಸ್ಕೇಪ್​ ಆಗುವುದಕ್ಕೆ ಟ್ರೈ ಮಾಡುತ್ತಿದ್ದರು. ಅಂತಹದ್ದೊಂದು ಯೋಚನೆ ಪೊಲೀಸರಲ್ಲಿ ಮೊದಲೇ ಇತ್ತು. ಇಷ್ಟೊಂದು ಮಾಲ್​ನ್ನು ಕದ್ದ ಆರೋಪಿಗಳು ಮೊದಲು ಊರು ಬಿಡುತ್ತಾರೆ. ಹಾಗಾಗಿ ಊರಿಂದ ಹೊರಕ್ಕೆ ಹೋಗುವವರ ಮೇಲೆ ಕಣ್ಣಿಟ್ಟಿದ್ದರು ಪೊಲೀಸರು.

ಸಿಕ್ಕಿಬಿದ್ದವರು ಲೋಕಲ್ ಅಲ್ಲ ನೇಪಾಳಿ ಗ್ಯಾಂಗ್​!

ಆ ಪೈಕಿ ಅನುಮಾನಕ್ಕೆ ಎಡೆಮಾಡಿಕೊಟ್ಟ ಮೂವರನ್ನು ಕರೆದು ತಂದು ಪೊಲೀಸರು ವಿಚಾರಿಸಿದ್ದಾರೆ. ಪೊಲೀಸ್ ಭಾಷೆಯಲ್ಲಿ ಕೇಳಿದ ಮೇಲೆ, ಏನಾದರೂ ಸತ್ಯ ಬಂದೆ ಬರುತ್ತದೆ. ಹಾಗೆಯೇ ಇಲ್ಲಿಯು ಆಗಿದೆ. ಸದ್ಯಕ್ಕೆ ಆರೋಪಿಗಳು ಭದ್ರಾವತಿ ಲೋಕಲ್​ನವರಲ್ಲ, ಅವರು ಮೂಲತಃ ನೇಪಾಳದವರು ಎಂಬುದು ಗೊತ್ತಾಗಿದೆ.

ಅವರಿಂದ ಒಂದಿಷ್ಟು ಬೆಳ್ಳಿ ವಶಕ್ಕೆ ಪಡೆದಿದ್ದಾರೆ. ಆದರೆ ಚಿನ್ನ ಮತ್ತೊಬ್ಬ ಊರಿಂದಾಚೆಗೆ ಸಾಗಿಸಿದ್ದಾನೆ ಎನ್ನುವ ಮಾಹಿತಿಯಿದೆ. ಆತನ ಬೇಟೆಗೆ ಪೊಲೀಸರು ಬಲೆ ಬೀಸಿದ್ದಾರೆ. ಬಾರ್ಡರ್ ಕ್ರಾಸ್ ಮಾಡುವ ಮೊದಲೇ ಆತನನ್ನು ಹಿಡಿಯುವ ಇರಾದೆ ಇದೆ.

ಇನ್ನೂ ಈ ನೇಪಾಳಿ ಗ್ಯಾಂಗ್​ ಯಾವುದು ಎಂಬುದು ಇನ್ನಷ್ಟೆ ಹೊರಕ್ಕೆ ಬರಬೇಕಿದೆ. ಎಸ್​ಪಿ ಲಕ್ಷ್ಮೀಪ್ರಸಾದ್​ರವರು ಹೇಳುವಂತೆ, ಅವರೆಲ್ಲ ಇಲ್ಲಿಗೆ ಕೆಲಸಕ್ಕೆ ಬಂದವರು ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರಂತೆ. ಆದರೆ ಯಾವಾಗ ಬಂದರು, ಅವರ ಮೋಟೋ ಏನಾಗಿತ್ತು! ಹಿನ್ನೆಲೆ ಏನು? ಇನ್ಯಾರಿದ್ದಾರೆ ಇತ್ಯಾದಿ ಇತ್ಯಾದಿ ಪ್ರಶ್ನೆಗಳಿಗೆ ಇನ್ನಷ್ಟೆ ಉತ್ತರ ಸಿಗಲಿದೆ.

ಲಾಸ್ಟ್ ಬೈಟ್​

ಶಿವಮೊಗ್ಗ ಜಿಲ್ಲೆ ಕೇವಲ ಜಿಲ್ಲೆಯಲ್ಲ, ಇದೊಂದು ಸಕಲ ವಿಚಾರಗಳು ತುಂಬಿರುವ ಕಾರ್ಖಾನೆ. ಇಲ್ಲಿ ಪೊಲೀಸ್​ ಇಲಾಖೆಗೆ ದೊಡ್ಡ ಶ್ರಮದ ದುಡಿಮೆ ಸದಾ ಕಾಯುತ್ತಿರುತ್ತದೆ. ರಾಜ್ಯಮಟ್ಟದಲ್ಲಿ ಹೆಸರು ಮಾಡಿದ ಖಡಕ್​ ಅಧಿಕಾರಿಗಳಲ್ಲಿ ಹಲವಾರು ಮಂದಿ ಶಿವಮೊಗ್ಗದಲ್ಲಿ ನಿತ್ಯ ನೂತನ ಸವಾಲುಗಳನ್ನ ಎದುರಿಸಿದವರೇ!. ಸದ್ಯ ಎಸ್​ಪಿ ಲಕ್ಷ್ಮೀಪ್ರಸಾದ್​ ರವರಿಗೂ ಅಂತಹುದೆ ಸವಾಲುಗಳು ಭೇಟಿಮಾಡುತ್ತಿವೆ. ಇದರಲ್ಲಿ ಅವರ ಟೀಂ ಕೂಡ