ದ್ವಿತೀಯ PUC ಪಲಿತಾಶ | ಶಿವಮೊಗ್ಗಕ್ಕೆ ಹೆಮ್ಮೆ | ಮೂರು ವಿಭಾಗ, ಮೂರು RANK | ಹೊನ್ನಾಳಿ ಚಂದ್ರಣ್ಣನ ಮಗಳು ಚುಕ್ಕಿಗೆ ಶಹಬ್ಬಾಸ್‌

II PUC Result | Pride for Shimoga | Three Divisions, Three RANK | Honnali Chandranna's daughter Chukki gets a thumbs up

ದ್ವಿತೀಯ PUC ಪಲಿತಾಶ | ಶಿವಮೊಗ್ಗಕ್ಕೆ ಹೆಮ್ಮೆ | ಮೂರು ವಿಭಾಗ, ಮೂರು RANK | ಹೊನ್ನಾಳಿ ಚಂದ್ರಣ್ಣನ ಮಗಳು ಚುಕ್ಕಿಗೆ ಶಹಬ್ಬಾಸ್‌
2 PUC Result,Three RANK, Honnali Chandranna

Shivamogga  Apr 10, 2024  ಲೋಕಸಭಾ ಚುನಾವಣೆ  2024 ರ ವರ್ಷದಲ್ಲಿ ಶಿವಮೊಗ್ಗದ ದ್ವಿತೀಯ ಪಿಯುಸಿಯಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಶಿವಮೊಗ್ಗದ ವಿದ್ಯಾರ್ಥಿಗಳು ರ್ಯಾಂಕ್‌ ಪಡೆದು ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ. ಇವತ್ತು ಹೊರಬಿದ್ದ ದ್ವಿತೀಯ ಪಿಯುಸಿ ಪಲಿತಾಂಶದಲ್ಲಿ  ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಕುಮದ್ವತಿ  ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಯಾದ ಎಂ.ಎಸ್. ಪವನ್ ಅವರು ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. 

malenadutoday

ವಾಣಿಜ್ಯ ವಿಭಾಗದಲ್ಲಿ ಶಿಕಾರಿಪುರದ ಪವನ್ 596 ಅಂಕ ಗಳಿಸಿದ್ದಾರೆ. ಇವರ ತಂದೆ .ಮಂಜುನಾಥ್‌ ಕುಮದ್ವತಿ ಬಿ.ಇಡ್‌ ಕಾಲೇಜಿನಲ್ಲಿ ಎಫ್‌ಡಿಎ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಿ ಅನಿತಾ.ಎಂ.ಎಸ್‌. ಗೃಹಿಣಿಯಾಗಿದ್ದಾರೆ. ಇನ್ನೂ ಶಿವಮೊಗ್ಗದ ಪತ್ರಕರ್ತ ಹಾಗೂ ಕನ್ನಡ ಮೀಡಿಯಮ್‌ ಚಾನಲ್‌ನ ಸಂಪಾದಕ ಹೊನ್ನಾಳಿ ಚಂದ್ರಶೇಖರ್‌ ಮತ್ತು ವಕೀಲರಾದ ಪೂರ್ಣಮಾ ಹೆಚ್‌.ಎಂ ಅವರ ಮಗಳು ಚುಕ್ಕಿ ರಾಜ್ಯಕ್ಕೆ ನಾಲ್ಕನೇ ರ್ಯಾಂಕ್‌ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ರ್ಯಾಂಕ್‌ ಪಡೆದಿರುವ ಅವರು,593 ಅಂಕ ಗಳಿಸಿದ್ದು, ಡಿವಿಎಸ್‌ ಸ್ವತಂತ್ರ ಪಿಯು ಕಾಲೇಜಿನಲ್ಲಿ ಓದಿದ್ದಾರೆ. 

ಮತ್ತೊಂದೆಡೆ ಸೈನ್ಸ್‌ ವಿಭಾಗದಲ್ಲಿ ಸಾತ್ವಿಕ್‌ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ. ಪೇಸ್‌ ಕಾಲೇಜಿನ ವಿದ್ಯಾರ್ಥಿ ಸಾತ್ವಿಕ್‌ ರಾಜ್ಯಕ್ಕೆ 4 ನೇ ರ್ಯಾಂಕ್‌ ಪಡೆದಿದ್ದು 595 ಅಂಕ ಪಡೆದಿದ್ದಾರೆ. ಇವರು ಯೋಗೇಶ್‌ ಹಾಗೂ ಅಪರ್ಣಾ ದಂಪತಿಯ ಪುತ್ರ ಒಟ್ಟಾರೆ ಫಲಿತಾಂಶದಲ್ಲಿ ಜಿಲ್ಲೆಯು ಎಂಟನೇ ಸ್ಥಾನ ಪಡೆದಿದ್ದು ಶೇ.88.58ರಷ್ಟು ಫಲಿತಾಂಶ ಪಡೆದುಕೊಂಡಿದೆ