ತೀರ್ಥಹಳ್ಳಿ ಪ್ರತಿಮಾ ಕೊಲೆ ಕೇಸ್ | ಆರೋಪಿ ಸಿಕ್ಕಿದ್ದೇಗೆ? ಆತನಿಗದ್ದ ಸೇಡೇನು? ಆ ದಿನ ಏನಾಯ್ತು?

What was revealed in the investigation of the Tirthahalli Pratima murder case? ತೀರ್ಥಹಳ್ಳಿ ಪ್ರತಿಮಾ ಕೊಲೆ ಪ್ರಕರಣದ ತನಿಖೆಯಲ್ಲಿ ಬಯಲಾಗಿದ್ದೇನು?

ತೀರ್ಥಹಳ್ಳಿ ಪ್ರತಿಮಾ ಕೊಲೆ ಕೇಸ್ |  ಆರೋಪಿ ಸಿಕ್ಕಿದ್ದೇಗೆ? ಆತನಿಗದ್ದ ಸೇಡೇನು? ಆ ದಿನ ಏನಾಯ್ತು?
Tirthahalli, Kondluru, Pratima

KARNATAKA NEWS/ ONLINE / Malenadu today/ Nov 6, 2023 SHIVAMOGGA NEWS

Bangalore |  ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಪ್ರತಿಮಾ ಬೆಂಗಳೂರಿನಲ್ಲಿ ಕೊಲೆಯಾದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನ ಅರೆಸ್ಟ್ ಮಾಡಿದ್ದಾರೆ. ಫೋನ್ ಕರೆಗಳು ಹಾಗೂ ಅನುಮಾನಸ್ಪದ ವಿಷಯಗಳ ಬಗ್ಗೆ ಮಾಹಿತಿ ಕಲೆಹಾಕಿದ್ದ ಪೊಲೀಸರಿಗೆ ಪ್ರತಿಮಾರ ಈ ಹಿಂದಿನ ಕಾರು ಚಾಲಕ ಕಿರಣ್ ಮೇಲೆ ಸಂಶಯ ಮೂಡಿತ್ತು. 

READ : ಬೆಂಗಳೂರಲ್ಲಿ DD ಪ್ರತಿಮಾ ಹತ್ಯೆ! ಇಲಾಖೆಯಲ್ಲಿ ಏನಿದೆ ಮಾತು? ಕುಟುಂಬಸ್ಥರು ಹೇಳೋದೆನು? ನಡೆದಿದ್ದೇನು?

 

ಆದಾಗ್ಯು ಪೊಲೀಸರು ಮೃತದೇಹದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದ್ದರು. ಘಟನಾ ಸ್ಥಳದಲ್ಲಿ ತನಿಖಾ ವಿಚಾರವನ್ನು ತೋರಿಸಿಕೊಳ್ಳದ ಪೊಲೀಸ್ ಅಧಿಕಾರಿಗಳು, ಸೀಕ್ರೆಟ್ ಆಗಿ ಅದಾಗಲೇ ತನಿಖೆಯನ್ನು ಆರಂಭಿಸಿದ್ದರು. ಜನರ ನಡುವೆ ನಡೆಯುತ್ತಿದ್ದ ಸಂಶಾಯಸ್ಪದ ಚರ್ಚೆಯ ವಿಚಾರವನ್ನ ಬೆನ್ನಟ್ಟಿದ ಪೊಲೀಸರಿಗೆ ಕಿರಣ್ ಸುಲಭವಾಗಿ ಸಿಕ್ಕಿಬಿದ್ದಿದ್ದ 



READ : ಬೆಂಗಳೂರಲ್ಲಿ DD ಪ್ರತಿಮಾ ಹತ್ಯೆ! ಇಲಾಖೆಯಲ್ಲಿ ಏನಿದೆ ಮಾತು? ಕುಟುಂಬಸ್ಥರು ಹೇಳೋದೆನು? ನಡೆದಿದ್ದೇನು?

 

ಸಂಶಯಕ್ಕೆ ಸಿಕ್ಕ ಕಿರಣ್​ನನ್ನ ಹುಡುಕಾಡಲು ಆರಂಭಿಸಿದ್ದ ಪೊಲೀಸರಿಗೆ ಆತ ಟ್ರಾವೆಲಿಂಗ್ ಮಾಡುತ್ತಿರುವುದು ಗೊತ್ತಾಗಿದೆ. ಮಲೆ ಮಹದೇಶ್ವರದ ಬೆಟ್ಟದಲ್ಲಿದ್ದ ಆತನನ್ನ  ಪೊಲೀಸ್ ನೆಟ್​ವರ್ಕ್​​ನ್ನ  ಬಳಸಿಕೊಂಡು ಅಧಿಕಾರಿಗಳು ಲಿಫ್ಟ್ ಮಾಡಿದ್ದಾರೆ. ಪ್ರತಿಮಾ ಹಾಗೂ ಕಾರು ಚಾಲಕ ಕಿರಣ್​ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದು, ಅದೇ ಕಾರಣಕ್ಕೆ ಆತನನ್ನು ಕೆಲಸದಿಂದ ಕಿತ್ತು ಹಾಕಿದ್ದರಂತೆ. 

ಸದ್ಯ ಪೊಲೀಸರ ಪ್ರಕಾರ, ಪ್ರತಿಮಾ ಕೆಲಸದಿಂದ ತೆಗೆದುಹಾಕಿದರು ಎಂಬ ದ್ವೇಷಕ್ಕೆ ಅವರನ್ನೆ ಮುಗಿಸುವ ಹುನ್ನಾರ ಮಾಡಿದ ಕಿರಣ್ ಈ ಕೃತ್ಯವನ್ನ ಎಸೆಗಿದ್ದಾನೆ. ಎರಡು ತಿಂಗಳ ಹಿಂದೆ ಕೆಲಸ ಕಳೆದುಕೊಂಡಿದ್ದ ಕಿರಣ್​ನ ಸಂಸಾರ ಕೂಡ ತಾಪತ್ರಯಕ್ಕೆ ಸಿಲುಕಿತ್ತು. ಎಂಟು ವರ್ಷದಿಂದ ಕೆಲಸ ಮಾಡುತ್ತಿದ್ದ ಕಿರಣ್​ ನಾಲ್ಕು ವರ್ಷ ಪ್ರತಿಮಾರ ಬಳಿಯೇ ಡ್ರೈವರ್ ಆಗಿದ್ದ. ಇಲಾಖೆಯ ವಿಚಾರದಲ್ಲಿ ಕಿರಣ್ ಎರಡು ತಿಂಗಳ ಹಿಂದೆ ಕೆಲಸ ಕಳೆದುಕೊಂಡಿದ್ದ. ಇದರ ಬೆನ್ನಲ್ಲೆ ಈತನ ಪತ್ನಿ ಕೂಡ ತವರಿಗೆ ಹೋಗಿದ್ದರು. ಹೀಗಾಗಿ ಸಂಪೂರ್ಣವಾಗಿ ಕುಸಿದು ಹೋಗಿದ್ದ ಕಿರಣ್ ಪ್ರತಿಮಾರ ಬಳಿಗೆ ಬಂದಿದ್ದಾನೆ. ಆತನ ಉದ್ದೇಶವೇ ಕೊಲೆ ಮಾಡುವುದಾಗಿತ್ತಾ? ಈ ಬಗ್ಗೆ ಇನ್ನಷ್ಟು ತನಿಖೆಯಿಂದ ವಿಚಾರ ತಿಳಿಯಬೇಕಿದೆ. ಮೂಲಗಳ ಪ್ರಕಾರ, ಕಿರಣ್ ತನ್ನ ಕೆಲಸ ವಾಪಸ್ ಕೊಡಿಸುವಂತೆ ಕೇಳಿದ್ದ ಆದರೆ ಪ್ರತಿಮಾ ಅದಕ್ಕೆ ಒಪ್ಪದಿದ್ದಾಗ, ಅಲ್ಲಿಯೇ ಇದ್ದ ಪ್ರತಿಮಾರ ಶಾಲು ಹಾಗೂ ಮನೆಯಲ್ಲಿ ಸಿಕ್ಕ ಚಾಕುವನ್ನ ಬಳಸಿಕೊಂಡು ಕೃತ್ಯವೆಸಗಿದ್ಧಾನೆ ಎನ್ನಲಾಗಿದೆ