KARNATAKA NEWS/ ONLINE / Malenadu today/ May 1, 2023 GOOGLE NEWS
ಶಿವಮೊಗ್ಗ/ ಇಲ್ಲಿನ ಪ್ರತಿಷ್ಟಿತ ಸುಬ್ಬಯ್ಯ ಕಾಲೇಜಿನ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ಧಾನೆ.ನಿನ್ನೆ ಈ ಘಟನೆ ನಡೆದಿದ್ದು ಹಾಸ್ಟೆಲ್ನಲ್ಲಿಯೇ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ಧಾನೆ. ಸದ್ಯ ಈತನ ಸಾವು ನಿಗೂಢವಾಗಿದ್ದು, ಈತ ಬರೆದಿದ್ಧಾನೆ ಎನ್ನಲಾದ ಡೆತ್ ನೋಟ್ವೊಂದು ಇಡೀ ರಾಜ್ಯವೇ ಬೆಚ್ಚಿಬೀಳಿಸುವ ವಿಚಾರವನ್ನು ಹೊಂದಿದೆ.
ಏನಾಗಿತ್ತು?
ಸುಬ್ಬಯ್ಯ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ವಿದ್ಯಾರ್ಥಿ, ಅಭಯ್ ರೆಡ್ಡಿ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ. ಈತನ ವಯಸ್ಸು 22 . ಈತನು ಬರೆದಿದ್ದಾನೆ ಎನ್ನವ ಡೆತ್ನೋಟ್ನ ಬರಹ ಕಾಲೇಜಿನ ಗೋಡೆ ಮೇಲೆ ಪತ್ತೆಯಾಗಿದೆ. ಇನ್ನೊಂದು ಡೆತ್ ನೋಟ್ ಕೂಡ ಪತ್ತೆಯಾಗಿದ್ದು, ಅದರಲ್ಲಿ ಮಾನವ ಅಕ್ರಮ ಮಾರಾಟದ ಬಗ್ಗೆ ಪ್ರಸ್ತಾಪಿಸಿದ್ಧಾನೆ ಎನ್ನಲಾಗುತ್ತಿದೆ.
ಅಭಯ್ ರೆಡ್ಡಿ ಸಾವು ಕೇವಲ ಆತ್ಮಹತ್ಯೆಯಲ್ಲ, ಅದರ ಹಿಂದೆ ಕಿರುಕುಳವಿದೆ. ಈತನ ಸಾವಿಗೆ ಕಾರಣ ಯಾರು ಎಂಬುದು ಸದ್ಯಕ್ಕೆ ನಿಗೂಢವಾದರೂ ನಾನು ಸಾಯುವಂತಹ ವ್ಯಕ್ತಿಯಲ್ಲ, ನನ್ನ ಮನೆ ನನ್ನ ನಂಬಿದ ಸ್ನೇಹಿತರನ್ನು ಉಳಿಸಿಕೊಳ್ಳುವಂತವನು ನನ್ನ ಸಾವು ತಮಾಷೆಯದ್ದಲ್ಲ ಎಂದು ಗೋಡೆ ಮೇಲೆ ಬರೆದಿದ್ಧಾನೆ.
ಇದನ್ನ ಓದಿ/ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಶಿವಮೊಗ್ಗ ಕೋರ್ಟ್ ನೀಡಿತು ಭಾರೀ ಶಿಕ್ಷೆ
ಬೆಂಗಳೂರಿನ ಬೊಮ್ಮಸಂದ್ರ ನಿವಾಸಿಯಾಗಿರುವ ಅಬಯ್ ರೆಡ್ಡಿ ಬರೆದಿರುವ ಇನ್ನೊಂದು ಡೆತ್ನೋಟ್ ನಲ್ಲಿ ಅಭಯ್ ರೆಡ್ಡಿ ತನಗಾಗುತ್ತಿರುವ ಕಿರುಕುಳದ ಜೊತೆ ಪ್ರಮುಖ ಆರೋಪಗಳನ್ನು ಮಾಡಿದ್ದಾನೆ. ಶಿವಮೊಗ್ಗ ಪೊಲೀಸ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ, ನಿಗೂಢ ಸತ್ಯಗಳು ಆಚೆ ಬರುವ ಸಾಧ್ಯತೆ ಇದೆ.
