ತೀರ್ಥಹಳ್ಳಿಯಲ್ಲಿ ಪ್ರತಿಮಾರ ಅಂತ್ಯಕ್ರಿಯೆ! ಅಮ್ಮನ ಚಿತೆಗೆ ಮಗನಿಂದ ಅಗ್ನಿಸ್ಪರ್ಶ!

Malenadu Today

KARNATAKA NEWS/ ONLINE / Malenadu today/ Nov 6, 2023 SHIVAMOGGA NEWS

Shivamogga | ಬೆಂಗಳೂರಿನಲ್ಲಿ ಮೃತಪಟ್ಟ ಡಿಡಿ ಪ್ರತಿಮಾರವರ ಅಂತ್ಯಕ್ರಿಯೆ ತೀರ್ಥಹಳ್ಳಿಯಲ್ಲಿ  ನಡೆದಿದೆ. ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ಪ್ರತಿಮಾರವರ ಮೃತದೇಹ ನಿನ್ನೆ ರಾತ್ರಿ ತೀರ್ಥಹಳ್ಳಿಗೆ ರವಾನೆ ಆಗಿತ್ತು. ಇವತ್ತು ಬೆಳಗ್ಗೆ ಅಂತ್ಯಕ್ರಿಯೆಯ ವಿಧಿವಿಧಾನಗಳು ಆರಂಭಗೊಂಡವು.   

READ : ತೀರ್ಥಹಳ್ಳಿ ಪ್ರತಿಮಾ ಕೊಲೆ ಕೇಸ್ | ಆರೋಪಿ ಸಿಕ್ಕಿದ್ದೇಗೆ? ಆತನಿಗದ್ದ ಸೇಡೇನು? ಆ ದಿನ ಏನಾಯ್ತು?

ಪಟ್ಟಣದ ಸಮೀಪದ ತುಡುಕಿಯಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನ ನಡೆಸಿ ನಂತರ ಕುರುವಳ್ಳಿಯ ಹಿಂದೂ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಿತು. 

ಪ್ರತಿಮಾ ಪುತ್ರ ಪಾರ್ಥ ತಾಯಿಯ ಮೃತದೇಹಕ್ಕೆ ಅಗ್ನಿ ಸ್ಪರ್ಶ ಮಾಡಿದ್ದಾನೆ. ಇನ್ನೂ ವೇಳೆ ತಮ್ಮ ಆಕ್ರಂದನವನ್ನು ಹೊರಹಾಕಿದ ಕುಟುಂಬಸ್ಥರು, ಪ್ರತಿಮಾರ ಸಾವಿಗೆ ಕಾರಣವಾದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದರು. ಅಲ್ಲದೆ  ಸರ್ಕಾರ ಮಹಿಳಾ ಅಧಿಕಾರಿಗಳಿಗೆ ಸೂಕ್ತ ಭದ್ರತೆ ಒದಗಿಸಲಿ ಎಂದ ಕುಟುಂಬಸ್ಥರು, 

READ : ಬೆಂಗಳೂರು ನಿಂದ ತೀರ್ಥಹಳ್ಳಿಗೆ DD ಪ್ರತಿಮಾರ ಮೃತದೇಹ ರವಾನೆ! ಕೊಲೆಯ ರಹಸ್ಯ ಇನ್ನೂ ನಿಗೂಢ

ಕೌಟುಂಬಿಕ ವಿಚಾರದಲ್ಲಿ ಹರಡಿರುವ ಸುದ್ದಿ ಸುಳ್ಳು, ಪ್ರತಿಮಾ ಸಂಸಾರ ಅನ್ಯೋನ್ಯವಾಗಿತ್ತು ಎಂದಿದ್ದಾರೆ. ಅಲ್ಲದೆ ಆಕೆಯನ್ನು ನಾವು ಕಳೆದುಕೊಂಡು ದುಃಖಿತರಾಗಿದ್ದೇವೆ ಎಂದಿದ್ದಾರೆ. 


Share This Article