ಬೆಂಗಳೂರು ನಿಂದ ತೀರ್ಥಹಳ್ಳಿಗೆ DD ಪ್ರತಿಮಾರ ಮೃತದೇಹ ರವಾನೆ! ಕೊಲೆಯ ರಹಸ್ಯ ಇನ್ನೂ ನಿಗೂಢ
DD Pratimara body shift from Bangalore to Tirthahalli! ಬೆಂಗಳೂರುನಿಂದ ತೀರ್ಥಹಳ್ಳಿಗೆ DD ಪ್ರತಿಮಾರ ಮೃತದೇಹ ರವಾನೆ ಮಾಡಲಾಗಿದೆ

KARNATAKA NEWS/ ONLINE / Malenadu today/ Nov 6, 2023 SHIVAMOGGA NEWS
SHIVAMOGGA | ಬೆಂಗಳೂರು ಸುಬ್ರಮಣ್ಯಪುರಂ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದ ಬೂ ವಿಜ್ಞಾನ ಇಲಾಖೆಯ ಡಿಡಿ ಪ್ರತಿಮಾರ ಕೊಲೆ ಪ್ರಕರಣದ ತನಿಖೆ ಆರಂಭವಾಗಿದೆ. ಇನ್ನೊಂದೆಡೆ ಪ್ರತಿಮಾರ ಮೃತದೇಹ ನಿನ್ನೆ ರಾತ್ರಿ ತೀರ್ಥಹಳ್ಳಿಯ ಸಹ್ಯಾದ್ರಿ ಸ್ಕೂಲ್ ಪಕ್ಕದಲ್ಲಿರುವ ಇರುವ ಅವರ ಪತಿಯ ನಿವಾಸಕ್ಕೆ ರವಾನೆಯಾಗಿದೆ.
ರಾತ್ರಿ 10 ಗಂಟೆ ಸುಮಾರಿಗೆ ಮೃತಹದೇಹ ತೀರ್ಥಹಳ್ಳಿ ರವಾನೆ ಮಾಡಲಾಗಿದ್ದು ಇವತ್ತು ಬೆಳಗ್ಗೆ 10 ಗಂಟೆ ಸುಮಾರಿಗೆ ಅಂತ್ಯಕ್ರಿಯೆ ನಡೆಯಲಿದೆ. ಕುರುವಳ್ಳಿ ಸೇತುವೆ ಪಕ್ಕದಲ್ಲಿರುವ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ
READ : ಬೆಂಗಳೂರಲ್ಲಿ DD ಪ್ರತಿಮಾ ಹತ್ಯೆ! ಇಲಾಖೆಯಲ್ಲಿ ಏನಿದೆ ಮಾತು? ಕುಟುಂಬಸ್ಥರು ಹೇಳೋದೆನು? ನಡೆದಿದ್ದೇನು?
ಮೂಲಗಳ ಪ್ರಕಾರ, ಪ್ರತಿಮಾರವರು ಘಟನೆ ನಡೆದ ದಿನ ಮನೆಯ ಬಾಗಿಲು ತೆರೆಯುತ್ತಲೇ ಅವರನ್ನ ಕುತ್ತಿಗೆ ಬಿಗಿದು ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಪ್ರತಿಮಾ ತಂದಿದ್ದ ಊಟದ ಬಾಕ್ಸ್ ಹಾಗೂ ಕನ್ನಡಕ ಮನೆ ಬಾಗಿಲ ಬಳಿಯಲ್ಲಿಯೇ ಬಿದ್ದಿದ್ದವು ಎನ್ನಲಾಗುತ್ತಿದೆ.
ಘಟನೆಯಲ್ಲಿ ಮನೆಯಲ್ಲಿದ್ದ ಯಾವೊಂದು ವಸ್ತುವು ಸಹ ಕಳೆದುಹೋಗಿಲ್ಲ. ಹಾಗಾಗಿ ಕೊಲೆಯು ದ್ವೇಷದ ಕಾರಣಕ್ಕಾಗಿಯೇ ನಡೆದಿರಬಹುದು ಎಂದು ಅನುಮಾನಿಸಲಾಗುತ್ತಿದೆ.
READ : ಬೆಂಗಳೂರಲ್ಲಿ DD ಪ್ರತಿಮಾ ಹತ್ಯೆ! ಇಲಾಖೆಯಲ್ಲಿ ಏನಿದೆ ಮಾತು? ಕುಟುಂಬಸ್ಥರು ಹೇಳೋದೆನು? ನಡೆದಿದ್ದೇನು?