ಜಿಂಕೆ ಶಿಕಾರಿ! ಮೂವರು ಎಸ್ಕೇಪ್ ! ಮಂಡಗದ್ದೆ ರೇಂಜ್​ನಲ್ಲಿ ತಮಿಳುನಾಡು ಮೂಲದವನ ಬಂಧನ!

The forest staff of Mandagadade range, who conducted a raid on charges of poaching deer, arrested a man from Tamil Nadu

ಜಿಂಕೆ ಶಿಕಾರಿ! ಮೂವರು ಎಸ್ಕೇಪ್ ! ಮಂಡಗದ್ದೆ ರೇಂಜ್​ನಲ್ಲಿ ತಮಿಳುನಾಡು ಮೂಲದವನ ಬಂಧನ!

SHIVAMOGGA|  Dec 18, 2023  | ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಮಂಡಗದ್ದೆ ಅರಣ್ಯ ವಲಯದ ಅಧಿಕಾರಿಗಳು ಜಿಂಕೆಯನ್ನು ಶಿಕಾರಿ ಮಾಡಿದ್ದ ಆರೋಪದ ಮೇರೆ ಓರ್ವನನ್ನ ಅರೆಸ್ಟ್ ಮಾಡಿದ್ದಾರೆ. ಈ ವೇಳೆ ಮೂವರು ಆರೋಪಿಗಳು ನಾಪತ್ತೆಯಾಗಿದ್ದಾರೆ. 

ಮಂಡಗದ್ದೆ ವಲಯದ ಗ್ರಾಮವೊಂದರಲ್ಲಿ ಜಿಂಕೆ ಶಿಕಾರಿಯಾಗಿದೆ ಎಂಬ ಮಾಹಿತಿಯನ್ನ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಅಪರಿಚಿತ ವ್ಯಕ್ತಿಗಳು ಹಾಕಿಕೊಟ್ಟಿದ್ದಾರೆ. ಮಾಹಿತಿ ಮೂಲ ಆಧರಿಸಿ ಹೊರಟ ಅರಣ್ಯ ಅಧಿಕಾರಿಗಳು, ನಿಗದಿತ ಸ್ಥಳದಲ್ಲಿ ದಾಳಿ ನಡೆಸಿದ್ದಾರೆ. 

READ  : ಶಿವಮೊಗ್ಗಕ್ಕೆ ನಿತಿನ್ ಗಡ್ಕರಿ! ಸಿಗಂದೂರು ಸೇತುವೆ, ನೆಲ್ಲಿಸರ ಕ್ಯಾಂಪ್‌-ತೀರ್ಥಹಳ್ಳಿ, ತ್ಯಾವರೆಕೊಪ್ಪ- ತಾಳಗುಪ್ಪ ಚತುಷ್ಪಥ ರಸ್ತೆ ಬಗ್ಗೆ ಸಂಸದರ ಮಹತ್ವದ ಹೇಳಿಕೆ

ಈ ವೇಳೆ ಮೂವರು ಆರೋಪಿಗಳು ನಾಪತ್ತೆಯಾಗಿದ್ದು, ಓರ್ವ ಅರಣ್ಯ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದಾರೆ. ಈತ ತಮಿಳುನಾಡು ಮೂಲದವರು ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನೂ ಈ ಸಂಬಂಧ  ಮಂಡಗದ್ದೆ ವಲಯಾರಣ್ಯ ವಿಭಾಗದಲ್ಲಿ ಪ್ರಕರಣ ದಾಖಲಾಗಿದೆ. 

ಡಿಸಿಎಫ್ ಶಿವಶಂಕರ್, ಎಸಿಎಫ್ ಪ್ರಕಾಶ್ ಮಾರ್ಗದರ್ಶನದಲ್ಲಿ ತಂಡ ಕಾರ್ಯಾಚರಣೆ ನಡೆಸಿದೆ. ಡಿಆರ್ ಎಫ್ಓ ಸುಹಾಸ್, ಗಸ್ತು ಅರಣ್ಯ ಪಾಲಕರಾದ ದುರುಗಪ್ಪ, ಮಹಾದೇವ ಕಣ್ಣೂರ, ವಾಹನ ಚಾಲಕ ನವೀನ್ ಮುಂತಾದವರು ಇದ್ದರು.