ಭದ್ರಾ ಹಿನ್ನೀರಿನಲ್ಲಿ ಮುಳುಗಿದ್ದ ಶಿವಮೊಗ್ಗದ ಮೂವರ ಮೃತದೇಹ ಪತ್ತೆ | ಶವಗಳನ್ನ ಹುಡುಕಿದ ಈಶ್ವರ್‌ ಮಲ್ಪೆ

young men from Shivamogga drowned in the Bhadra backwaters near Byrapura villaģe bodies found

ಭದ್ರಾ ಹಿನ್ನೀರಿನಲ್ಲಿ ಮುಳುಗಿದ್ದ ಶಿವಮೊಗ್ಗದ ಮೂವರ ಮೃತದೇಹ ಪತ್ತೆ | ಶವಗಳನ್ನ ಹುಡುಕಿದ ಈಶ್ವರ್‌ ಮಲ್ಪೆ
Bhadra backwater

SHIVAMOGGA | MALENADUTODAY NEWS | Jun 21, 2024  ಮಲೆನಾಡು ಟುಡೆ

ಭದ್ರಾ ಹಿನ್ನೀರಿನಲ್ಲಿ ಮುಳುಗಿದ್ದ ಮೂವರು ಯುವಕರ ಶವ ಪತ್ತೆಯಾಗಿದೆ. ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಯ ಬೈರಾಪುರದ ಭದ್ರಾ ಹಿನ್ನೀರಿನಲ್ಲಿ ಬುಧವಾರ ಮುಳುಗಿದ್ದ ಶಿವಮೊಗ್ಗದ 3 ಮೊಗ್ಗದ 3 ಯುವಕರ ಶವ ನಿನ್ನೆ ಗುರುವಾರ ಬೆಳಿಗ್ಗೆ 8.30 ಗಂಟೆಗೆ ಪತ್ತೆಯಾಗಿದೆ . 

ಮೃತ ಯುವಕರನ್ನು ಶಿವಮೊಗ್ಗದ ವಿದ್ಯಾನಗರದ 4 ನೇ ಕ್ರಾಸಿನ ಆಪ್ತಾಬ್ ( 21) ಆದಿಲ್ (21) ಹಾಗೂ ಸಾಜದ್ (26) ಎಂದು ಗುರುತಿಸಲಾಗಿದೆ. ಇವರಲ್ಲಿ ಆಪ್ತಾಬ್ ಹಾಗೂ ಆದಿಲ್ ಸಹೋದರರಾಗಿದ್ದಾರೆ. ಸಾಜದ್ ಸಂಬಂಧಿಕರಾಗಿದ್ದಾರೆ. ಗುರುವಾರ ಬೆಳಿಗ್ಗೆ 6 ರ ಸುಮಾರಿಗೆ ಒಬ್ಬ ಯುವಕನ ಶವ ತೇಲಿ ಬಂದಿತ್ತು. ಉಳಿದ ಇಬ್ಬರ ಶವವನ್ನು ಬೆಳಿಗ್ಗೆ 8.30 ಗಂಟೆಗೆ ಪತ್ತೆಮಾಡಲಾಗಿದೆ. 

ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದ ನೀರಿದ್ದರಿಂದ ಮೃತದೇಹ ಹುಡುಕುವುದು ವಿಳಂಬವಾಗಿತ್ತು. ಇನ್ನೂ ಉಡುಪಿಯಿಂದ ಬಂದಿದ್ದ ಈಶ್ವರ್ ಮಲ್ಪೆ ಅವರು ಶವ ಪತ್ತೆ‌ ಹಚ್ಚುವಲ್ಲಿ ವಿಶೇಷವಾಗಿ ಶ್ರಮಿಸಿದ್ದಾರೆ. 

ಅವರ ಪ್ರಯತ್ನ ಯಶಸ್ವಿಯಾಗಿದ್ದು ಮೃತದೇಹಗಳು ಪತ್ತೆಯಾಗಿವೆ. ಇನ್ನೂ  ನರಸಿಂಹರಾಜಪುರ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಯಿತು. ನಂತರ ಮೃತ ದೇಹವನ್ನು ಸಂಬಂಧಿಕರು ಶಿವಮೊಗ್ಗಕ್ಕೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ನಡೆಸಿದರು. ನರಸಿಂಹರಾಜಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Three young men from Shivamogga drowned in the Bhadra backwaters near Bairapura village. The bodies of the victims, identified as Aptab (21), Adil (21), and Sajid (26), were recovered on Thursday morning. Aptab and Adil were brothers, and Sajid was their relative.  Narasimharajapura police station