SHIVAMOGGA NEWS / Malenadu today/ Dec 1, 2023 | MALENADU TODAY | MALNAD NEWS
CHIKKAMAGALURU | ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆಪಕ್ಕದಲ್ಲಿದ್ದ ಮನೆಗೆ ನುಗ್ಗಿದ ಘಟನೆ ನಡೆದಿದೆ.
ಮನೆಗೆ ನುಗ್ಗಿದ ಕಾರು
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕು ಕೊಟ್ಟಿಗೆ ಹಾರದ ಸಮೀಪದಲ್ಲಿ ಘಟನೆ ನಡೆದಿದೆ. ಇಲ್ಲಿನ ಬಿದರಹಳ್ಳಿ ಗ್ರಾಮದಲ್ಲಿ ಕಾರೊಂದು ಮನೆಗೆ ನುಗ್ಗಿದೆ.
.
ಮಂಗಳೂರು-ವಿಲ್ಲೂಪುರಂ ರಾಷ್ಟ್ರೀಯ ಹೆದ್ದಾರಿಯಲ್ಲಿ (manglore villupuram highway) ಕಾರೊಂದು ಚಿತ್ರದುರ್ಗದಿಂದ ಧರ್ಮಸ್ಥಳಕ್ಕೆ ಹೋಗುತ್ತಿತ್ತು.
ಈ ಮಧ್ಯೆ ಕೊಟ್ಟಿಗೆ ಹಾರದ ಬಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆಬದಿಗೆ ವಾಲಿದೆ, ಅಲ್ಲದೆ ರಸ್ತೆ ಪಕ್ಕದಲ್ಲಿದ್ದ ಮನೆಯ ಗೋಡೆಗೆ ಗುದ್ದಿ, ಅಲ್ಲಿಯೆ ಮಗ್ಗುಲಲ್ಲಿದ್ದ ಕರೆಂಟ್ ಕಂಬಗಳು ಹಾಗೋ ಮನೆ ಗೋಡೆ ನಡುವೆ ಮುಂದಕ್ಕೆ ಸಾಗಿ ಜಖಂ ಆಗಿ ನಿಂತಿದೆ.
ಘಟನೆಯಲ್ಲಿ ಮನೆಗೋಡೆ ಕುಸಿದಿದ್ದು, ಕರೆಂಟ್ ಕಂಬವೂ ತುಂಡಾಗಿದೆ. ತಡರಾತ್ರಿ ಡ್ರೈವರ್ಗೆ ನಿದ್ರೆ ಮಂಪರು ಬಂದು ಈ ಘಟನೆ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.