ಶಿವಮೊಗ್ಗದಲ್ಲಿ ನಿಜವಾಗಿ ನಡೆಯಿತು ದೊಡ್ಡಣ ನಟನೆಯ ಈ ಸಿನಿಮಾ ದೃಶ್ಯ! ಏನು ಗೊತ್ತಾ!?

ಹಂಚಿಕೊಳ್ಳಿ
WhatsApp Facebook X Telegram

SHIVAMOGGA NEWS / Malenadu today/ Dec 1, 2023 | MALENADU TODAY | MALNAD NEWS 

SHIVAMOGGA  |  ಗೋಪೂಜೆ ವೇಳೆ ಪೂಜೆಗಿಟ್ಟಿದ್ದ ಬಂಗಾರದ ಸರವನ್ನು ಹಸುವೊಂದು ನುಂಗಿದ ಘಟನೆ ಶಿವಮೊಗ್ಗದಲ್ಲಿ ಸಿನಿಮಾದ ಕಥೆಯೊಂದನ್ನ ನೆನಪಿಸುತ್ತಿದೆ. 

ನಟ ದೊಡ್ಡಣರ ಹಾಸ್ಯ ದೃಶ್ಯ

ಸಿನಿಮಾವೊಂದರಲ್ಲಿ ನಟ ದೊಡ್ಡಣ್ಣ ಚಿನ್ನದ ಸರವೊಂದನ್ನ ಕದ್ದು ಸಿಕ್ಕಿಬೀಳುವ ಬರದಲ್ಲಿ ಅದನ್ನು ಕಲಗಚ್ಚಿರುವ ಬಾಣಿಗೆ ಹಾಕುತ್ತಾರೆ. ಕೆಲಹೊತ್ತು ಬಿಟ್ಟು ಬಂದು ನೋಡುವಾಗ ಬಾಣಿಯಲ್ಲಿರುವ ಕಲಗಚ್ಚಿನ ಜೊತೆ ರಾಸು ಚಿನ್ನದ ಸರವನ್ನು ಕೂಡ ನುಂಗಿಬಿಟ್ಟಿರುತ್ತದೆ. ಈ ಸೀನ್​ನ ಬಳಿಕ ದೊಡ್ಡಣ್ಣ ದೊಡ್ಡ ಬುಟ್ಟಿ ಹಿಡಿದು ದನ, ಎಮ್ಮೆ, ಕರ ಸಗಣಿ ಹಾಕುವುದನ್ನ ಕಾಯುತ್ತಿರುತ್ತಾರೆ. 

ಹೊಸನಗರ ತಾಲ್ಲೂಕು ಮತ್ತಿಮನೆ

ಈ ದೃಶ್ಯದ ಹಾಸ್ಯ ಇವತ್ತಿಗೂ ವಿಶೇಷವಾಗಿ ಗಮನ ಸೆಳೆಯುತ್ತದೆ. ವಿಶೇಷ ಅಂದರೆ ಅಂತಹದ್ದೊಂದು ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿಯು ನಡೆದಿದೆ.  ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಮತ್ತಿಮನೆಯಲ್ಲಿ ಇಂತಹದ್ದೊಂದು ಪ್ರಸಂಗ ನಡೆದಿದೆ. 

READ : ಬಾಲಕನ ಜೊತೆ ಬೆಡಗಿಯ ಅಶ್ಲೀಲ ಕುಣಿತ! ವಿಡಿಯೋ ವೈರಲ್ ಆದ ಬಳಿಕ ಪ್ರಕರಣ ಏನಾಯ್ತು ಗೊತ್ತಾ?

ಗೋಪೂಜೆ 

ಗೋಪೂಜೆಗೆ ಅಂತಾ ಇಟ್ಟಿದ್ದ  ಚಿನ್ನದ ಸರವನ್ನು ಹಸು ನುಂಗಿಬಿಟ್ಟಿದೆ.  ಮತ್ತಿಮನೆ ಗ್ರಾಮದ ಶ್ಯಾಮ ಉಡುಪ ಅವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಹಸು ಬಂಗಾರದ ಸರ ನುಂಗಿದ ವಿಚಾರ ತಡವಾಗಿ ಗೊತ್ತಾಗಿದೆ. 

ಚಿನ್ನದ ಚೈನ್​ 

ಚಿನ್ನದ ಚೈನ್ ನಾಪತ್ತೆಯಾದ ಬೆನ್ನಲ್ಲೆ ಮನೆಯವರು ಎಲ್ಲಾ ಕಡೆ ಹುಡುಕಾಡಿದ್ದಾರೆ. ಆಮೇಲೆ ಗೋಗ್ರಸದ ಜೊತೆ ಚಿನ್ನದ ಸರವನ್ನ ದನ ನುಂಗಿರುವ ಸಾಧ್ಯತೆ ಬಗ್ಗೆ ತಿಳಿದುವ ವಿಷಯ ಖಾತರಿ ಮಾಡಿಕೊಂಡಿದ್ಧಾರೆ. ಇದೆಲ್ಲದರ ಬಳಿಕ ಹಸುವಿಗೆ ಅನಾರೋಗ್ಯ ಕಾಡಲು ಆರಂಭಿಸಿದೆ. 

ತಕ್ಷಣವೇ ಪಶುವೈದ್ಯರನ್ನ ಕರೆಸಿಕೊಂಡ ಕುಟುಂಬದ ದನದ ಆರೋಗ್ಯ ತಪಾಸಣೆ ಮಾಡಿಸಿದ್ದಾರೆ. ಪಶುವೈದ್ಯರು ಡಾ.ಆನಂದ   ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿ ಹಸುವಿನ ದೇಹದಿಂದ ಚಿನ್ನದ ಸರ ಹೊರ ತೆಗೆದಿದ್ದಾರೆ.  

 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor