ಹುಡುಗಿ ಥರ ಆ್ಯಕ್ಟ್ ಮಾಡಿ ಫೇಸ್​ಬುಕ್​ ಫ್ರೆಂಡ್​ಗೆ ​ ₹7 ಲಕ್ಷ ವಂಚನೆ! ತುಮಕೂರು ಪೊಲೀಸರಿಂದ ತೀರ್ಥಹಳ್ಳಿ ಯುವಕ ಅರೆಸ್ಟ್​ !

Facebook friend duped of Rs 7 lakh by acting like a girl Thirthahalli youth arrested by Tumkur police

ಹುಡುಗಿ ಥರ ಆ್ಯಕ್ಟ್ ಮಾಡಿ ಫೇಸ್​ಬುಕ್​ ಫ್ರೆಂಡ್​ಗೆ ​ ₹7 ಲಕ್ಷ ವಂಚನೆ! ತುಮಕೂರು ಪೊಲೀಸರಿಂದ ತೀರ್ಥಹಳ್ಳಿ ಯುವಕ ಅರೆಸ್ಟ್​ !

SHIVAMOGGA | TUMKUR | Dec 15, 2023  | ಫೇಸ್​ಬುಕ್ ನಲ್ಲಿ ಮುಖವಾಡ ಹಾಕಿಕೊಂಡವರೇ ಹೆಚ್ಚಿರುತ್ತಾರೆ. ನಂಬಿ ಸ್ನೇಹ ಮಾಡಿ ಸಲಿಗೆ ತೆಗೆದುಕೊಂಡರೇ ಸಂಪಾದಿಸಿದ್ದೆಲ್ಲಾ ತೊಳೆದುಹೋಗುವುದು ಪಕ್ಕಾ. ಇದಕ್ಕೆ ಸಾಕ್ಷಿ ಎಂಬಂತಹ ಘಟನೆಯೊಂದು ವರದಿಯಾಗಿದ್ದು, ತುಮಕೂರು ಜಿಲ್ಲೆ ಯಲ್ಲಿ ದಾಖಲಾದ ದೂರಿಗೆ ಸಂಬಂಧಿಸಿದಂತೆ ಯುವಕನೊಬ್ಬನನ್ನ ಅರೆಸ್ಟ್ ಮಾಡಲಾಗಿದೆ.. 

ಹುಡುಗಿ ಎಂದು ನಂಬಿಸಿ ಏಳು ಲಕ್ಷ ವಂಚನೆ 

ಫೇಸ್‌ಬುಕ್ ನಲ್ಲಿ ತನ್ನನ್ನ ಹುಡುಗಿ ಎಂಬಂತೆ ಬಿಂಬಿಸಿಕೊಂಡಿದ್ದ ಯುವಕನೊಬ್ಬ ತುಮಕೂರು ಜಿಲ್ಲೆ ಶಿರಾ ಗೇಟ್​ನ ಯುವಕನೊಬ್ಬನಿಗೆ  7.25 ಲಕ್ಷ ರೂ ವಂಚಿಸಿದ್ದಾನೆ. ಈತನ ವಿರುದ್ಧ ದಾಖಲಾದ ದೂರಿನನ್ವಯ ತುಮಕೂರು ಪೊಲೀಸರು ಆರೋಪಿಯನ್ನ ಟ್ರೇಸ್ ಮಾಡಿ ಅರೆಸ್ಟ್ ಮಾಡಿದ್ದು ಸದ್ಯ ಕೋರ್ಟ್​ ಮೂಲಕ ನ್ಯಾಯಾಂಗ ಬಂಧನಕ್ಕೆ ಆತನನ್ನ ಒಪ್ಪಿಸಲಾಗಿದೆ. 

READ : ಕುವೆಂಪು ವಿಮಾನ ನಿಲ್ದಾಣ | ನಾಲ್ಕು ಏರ್​ಪೋರ್ಟ್​ಗಳಿಗೆ ಹೆಸರಿಡುವ ಸಂಬಂಧ ರಾಜ್ಯಸರ್ಕಾರದ ಮಹತ್ವದ ನಿರ್ಣಯ!

ತೀರ್ಥಹಳ್ಳಿ ರಸ್ತೆಯ  21 ವರ್ಷದ ಯುವಕ ಆರೋಪಿಯಾಗಿದ್ದು ಸದ್ಯ ಪೊಲೀಸರು ಈ ಜಾಲದಲ್ಲಿ ಇನ್ಯಾರಾರು ಇದ್ದಾರೆ ಎಂದು ತಲಾಶ್ ಮಾಡುತ್ತಿದ್ದಾರೆ. ಹುಡುಗಿ ಹೆಸರಲ್ಲಿ ಪ್ರೊಫೈಲ್ ಕ್ರಿಯೆಟ್ ಮಾಡಿ, ಸಂತ್ರಸ್ತರನ್ನ ಪರಿಚಯ ಮಾಡಿಕೊಳ್ಳುತ್ತಾರೆ. ಆನಂತರ   ಅವರೊಂದಿಗೆ ವಾಟ್ಸ್ಯಾಪ್​ ಸಂಪರ್ಕ ಬಂದು ಇಲ್ಲದ ಸಲಿಗೆಯ ಮಾತನಾಡುತ್ತಾರೆ. ಬಳಿಕ ಕಥೆ ಕಟ್ಟಿ ಗೂಗಲ್ ಪೇ. ಪೋನ್ ಪೇ ಮೂಲಕ ಹಣ ಹಾಕಿಸಿಕೊಂಡು ವಂಚಿಸುತ್ತಾರೆ ಎಂದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ. ಇದೆ ವಿಚಾರದಲ್ಲಿ ಸದ್ಯ ತುಮಕೂರು ಪೊಲೀಸರು ಇನ್ನಷ್ಟು ಆರೋಪಿಗಳ ಪತ್ತೆಯಲ್ಲಿ ತೊಡಗಿದ್ದಾರೆ. 

ಈ ಆರೋಪಿಯು ಶರ್ಮಿಳಾ ಮತ್ತು ದಿವ್ಯಾ ಎಂಬ ಹೆಸರಿನಲ್ಲಿ ಫೇಸ್​ಬುಕ್ ಮೆಸೆಂಜರ್​ ಹಾಗೂ ವಾಟ್ಸ್ಯಾಪ್​ನಲ್ಲಿ ಸಂತ್ರಸ್ತ ಯುವಕನ್ನ ಕಾಂಟಾಕ್ಟ್ ಮಾಡುತ್ತಿದ್ದರಂತೆ. ಈತನ ಜೊತೆಗೆ ಇನ್ನೊಂದಿಷ್ಟು ಆರೋಪಿಗಳು ಇರುವ ಸಾಧ್ಯತೆ ಇದೆ ಎನ್ನಲಾಗಿದೆ. ಮಗನು ಈ ರೀತಿಯಲ್ಲಿ ಹಣ ಕಳೆದುಕೊಂಡು ಖಿನ್ನತೆಗೆ ಒಳಗಾಗಿರುವುದನ್ನ ಗಮನಿಸಿದ ತಂದೆ ಈ ಸಂಬಂಧ ಪೊಲೀಸರಿಗೆ ಸಿಇಎನ್​ ಪೊಲೀಸ್ ಸ್ಟೇಷನ್​ಗೆ ತುಮಕೂರಿನಲ್ಲಿ ಕಳೆದ ಆಗಸ್ಟ್​ 15 ರಂದು ದೂರು ನೀಡಿದ್ದರು. ಅದರ ಅನ್ವಯ ಪೊಲೀಸರು ಇದೀಗ ಓರ್ವ ಆರೋಪಿಯನ್ನ ಬಂಧಿಸಿದ್ದಾರೆ.