KARNATAKA NEWS/ ONLINE / Malenadu today/ Jun 20, 2023 SHIVAMOGGA NEWS
ಸಕಲೇಶಪುರ: ಕಾಡಾನೆಯ ಚಲನವಲನ ಗಮನಿಸುತ್ತಿದ್ದ ಅರಣ್ಯ ಇಲಾಖೆಯ ಆರ್ ಆರ್ ಟಿ ಸಿಬ್ಬಂದಿಯನ್ನು ಕಾಡಾನೆಯೊಂದು ಅಟ್ಟಿಸಿಕೊಂಡು ಬಂದ ಘಟನೆ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇಲ್ಲಿನ ಕಿರೇಹಳ್ಳಿ ಗ್ರಾಮದಲ್ಲಿನ ಕಾಫಿ ತೋಟವೊಂದರ ಒಳಗೆ ಕಾಡಾನೆ ಕಾಣಿಸಿಕೊಂಡಿತ್ತು. ಅದನ್ನ ಓಡಿಸುವ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ತೊಡಗಿತ್ತು. ಈ ವೇಳೆ ಸಿಬ್ಬಂದಿ ಕಾಡಾನೆಯ ಇರುವಿಕೆಯನ್ನು ಅರಸುತ್ತಿದ್ದರು. ಪೂರಕವಾಗಿ ಆರ್ಆರ್ಟಿ ಸಿಬ್ಬಂದಿ ತೋಟದ ಕಾಲು ದಾರಿಯಲ್ಲಿ ಕಾಡಾನೆಯನ್ನ ಹುಡುಕಾಡುತ್ತಿದ್ದರು. ಈ ವೇಳೆ ಅಲ್ಲಿಯೇ ಇದ್ದ ಕಾಡಾನೆ, ಸಿಬ್ಬಂದಿಯನ್ನು ಅಟ್ಟಿಸಿಕೊಂಡು ಬಂದಿದೆ.
ಕಾಡಾನೆಯನ್ನು ನೋಡುತ್ತಲೇ ಸಿಬ್ಬಂದಿ ಒಂದೇ ಸಮನೆ ಓಡಿದ್ದಾರೆ. ಹಾಗಾಗಿ ಕಾಡಾನೆಯ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ. ಇನ್ನೂ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರಿದಿದೆ. ಇನ್ನೂ ಈ ಘಟನೆಯ ದೃಶ್ಯ ಅಲ್ಲಿದ್ದವರ ಮೊಬೈಲ್ನಲ್ಲಿ ಸೆರೆಯಾಗಿದ್ದು,ಎಲ್ಲೆಡೆ ಹರಿದಾಡುತ್ತಿದೆ.

NES ಹಬ್ಬದ ಸಿದ್ದತೆ ಮುಗಿಸಿ ಮನೆಗೆ ಹೋಗುತ್ತಿದ್ದ ವಿದ್ಯಾರ್ಥಿ ಆಕ್ಸಿಡೆಂಟ್ನಲ್ಲಿ ಸಾವು!
ಶಿವಮೊಗ್ಗ ನಗರದಲ್ಲಿ ಇವತ್ತು ಬೆಳಗ್ಗಿನ ಜಾವ ಭೀಕರ ಅಪಘಾತ ಸಂಭವಿಸಿದೆ. ಎನ್ಇಎಸ್ ಹಬ್ಬದ ಕಾರ್ಯಕ್ರಮದ ಸಿದ್ದತೆಯಲ್ಲಿ ತೊಡಗಿದ್ದ ವಿದ್ಯಾರ್ಥಿ, ಮನೆಗೆ ಹೋಗುವಾಗ ಆಕ್ಸಿಡೆಂಟ್ ಆಗಿದ್ದು ಗೌತಮ್ ಎಂಬ 21 ವರ್ಷದ ಎಲ್ಎಲ್ಬಿ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ.
ಏನಾಗಿದ್ದು ಘಟನೆ
ಇವತ್ತು ಬೆಳಗ್ಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ನಗರದ ಶುಭಮಂಗಳದ ಬಳಿಯಲ್ಲಿ ಗೌತಮ್ ತಮ್ಮ ಮನೆಗೆ ಹೋಗುತ್ತಿದ್ದ. ಈ ವೇಳೆ ಚಾಲುಕ್ಯ ಬಾರ್ ಸಮೀಪದ ಪುಟ್ಪಾತ್ ನಲ್ಲಿ, ಆತನ ಬೈಕ್ ಸ್ಕಿಡ್ ಆಗಿದೆ. ಪರಿಣಾಮ ಕೆಳಕ್ಕೆ ಬಿದ್ದ ಗೌತಮ್ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ಧಾನೆ..
ಇನ್ನೂ ಗೌತಮ್ ಶಿವಮೊಗ್ಗ ಜಿಲ್ಲಾ ಗ್ರಾಹಕ ನ್ಯಾಯಾಲಯದ ಜಡ್ಜ್ ಆಗಿದ್ದ ಟಿ.ಶಿವಣ್ಣನವರ ಪುತ್ರ ಎಂಬುದು ತಿಳಿದುಬಂದಿದ್ದು, ಕಾಶೀಪುರದಲ್ಲಿ ಅವರ ನಿವಾಸವಿದ್ದು, ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಘಟನೆ ಸಂಭವಿಸಿದೆ. ಸ್ಥಳಕ್ಕೆ ಪೊಲೀಸರು ತೆರಳಿದ್ದು ಮೃತದೇಹವನ್ನು ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದೆ. ಇನ್ನೂ ವಿದ್ಯಾರ್ಥಿಯ ಸಾವಿಗೆ ಹಲವರು ಕಂಬನಿ ಮಿಡಿದಿದ್ದು, ಶವಾಗಾರದ ಬಳಿಯಲ್ಲಿ ಕುಟುಂಬಸ್ಥರ ಆಕ್ರಂಧನ ಮುಗಿಲುಮುಟ್ಟಿದೆ.