Bhadravati Rural Station | ಅಜ್ಜಿಯನ್ನೆ ಉಸಿರುಗಟ್ಟಿಸಿ ಕೊಂದ ಮೊಮ್ಮಗ | ಘಟನೆಗೆ ಕಾರಣವೇನು ಗೊತ್ತಾ?

Grandson killed grandmother by suffocation Do you know what caused the incident? Bhadravati Rural Station

Bhadravati Rural Station | ಅಜ್ಜಿಯನ್ನೆ ಉಸಿರುಗಟ್ಟಿಸಿ ಕೊಂದ ಮೊಮ್ಮಗ | ಘಟನೆಗೆ ಕಾರಣವೇನು ಗೊತ್ತಾ?
Bhadravati Rural Station

SHIVAMOGGA | MALENADUTODAY NEWS | May 19, 2024  ಮಲೆನಾಡು ಟುಡೆ 

ದುಡ್ಡಿಗಾಗಿ ತನ್ನ ಅಜ್ಜಿಯನ್ನೇ ಕೊಂದ ಘಟನೆಯೊಂದು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕುನಲ್ಲಿ ವರದಿಯಾಗಿದೆ. ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮದಲ್ಲಿ ರಾಮಕ್ಕ (75) ಎಂಬ ಕೂಲಿ ಕೆಲಸ ಮಾಡಿಕೊಂಡಿದ್ದ ವಯೋ ವೃದ್ದೆಯನ್ನು ಕೊಲೆಮಾಡಲಾಗಿದೆ. ಸ್ವತಃ ಆಕೆಯ ಮೊಮ್ಮಗ ಮತ್ತು ಆತನ ಸಂಗಡಿಗರು ವೃದ್ಧೆಯನ್ನು ಉಸಿರುಗಟ್ಟಿಸಿ ಸಾಯಿಸಿರುವ ಘಟನೆ ಇದಾಗಿದೆ. 

ಕೊಲೆ ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಪ್ರಕರಣ ಬಯಲಿಗೆ ಬಂದಿದೆ. ಹಣಕೊಡಲು ಅಜ್ಜಿ ನಿರಾಕರಿಸಿದ್ದಕ್ಕೆ ಚೇತನ್ ತನ್ನ ಸ್ನೇಹಿತರಾದ ಭರತ, ಲೋಹಿತ್, ಆದರ್ಶ ಎಂಬುವರ ಜತೆ ಸೇರಿ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ರಾಮಕ್ಕ 20 ಸಾವಿರಕ್ಕೂ ಅಧಿಕ ಹಣ ಕೂಡಿಟ್ಟುಕೊಂಡಿದ್ದನ್ನು ನೋಡಿದ ಮೊಮ್ಮಗ ಚೇತನ್ ಅಜ್ಜಿಯ ಬಳಿ ಹಣ ಇರುವುದನ್ನ ನೋಡಿ ಈ ಕೃತ್ಯವೆಸಗಿದ್ದಾನೆ. ಸದ್ಯ ಪ್ರಕರಣದ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.