bangalore to shivamogga flight timings / ಬೆಂಗಳೂರು - ಶಿವಮೊಗ್ಗ ವಿಮಾನಗಳ ಪ್ರಯಾಣದ ವಿವರ
bangalore to shivamogga flight
SHIVAMOGGA | Jan 15, 2024 | ಶಿವಮೊಗ್ಗ ವಿಮಾನ ನಿಲ್ದಾಣ ದಿಂದ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂಡಿಗೋ ಪ್ಲೈಟ್ ದಿನಕ್ಕೆ ಒಂದು ಭಾರಿ ಪ್ರಯಾಣಿಸುತ್ತದೆ. ಅದೇ ರೀತಿಯಿಲ್ಲಿ ಬೆಂಗಳೂರು ಏರ್ಫೋರ್ಟ್ ನಿಂದ ಶಿವಮೊಗ್ಗ ಏರ್ಪೋರ್ಟ್ ಗೆ ಒಂದು ಭಾರಿ ಪ್ರಯಾಣ ಮಾಡುತ್ತದೆ.
ಶಿವಮೊಗ್ಗ ವಿಮಾನ ನಿಲ್ದಾಣ
ಶಿವಮೊಗ್ಗದಿಂದ 8.8 ಕಿ.ಮೀ (5.5 ಮೈಲಿ) ಮತ್ತು ಭದ್ರಾವತಿಯಿಂದ 8.2 ಕಿ.ಮೀ (5.1 ಮೈಲಿ) ದೂರದಲ್ಲಿರುವ ಸೋಗಾನೆಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಾಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ಈ ವಿಮಾನ ನಿಲ್ದಾಣವನ್ನು ಉದ್ಧಾಟಿಸಿದ್ದರು. ಫೆಬ್ರವರಿ 27, 2023 ರಂದು ವಾಣಿಜ್ಯ ಕಾರ್ಯಾಚರಣೆ ಆರಂಭಗೊಂಡಿತ್ತು.
ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣ
ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣ ಎಂದು ಹೆಸರಿಡಬೇಕು ಎಂದು ತೀರ್ಮಾನಿಸಲಾಗಿದೆ. ಈ ಸಂಬಂಧ ಕೇಂದ್ರಕ್ಕೂ ರಾಜ್ಯಸರ್ಕಾರ ಪ್ರಸ್ತಾವನೆ ಕಳುಹಿಸಿದೆ. ಈ ಸಂಬಂಧ ಅಂತಿಮ ನಿರ್ಣಯ ಹೊರಕ್ಕೆ ಬರಬೇಕಿದೆ.
ಇಲ್ಲಿಂದ ಇಂಡಿಗೋ ವಿಮಾನ ತನ್ನ ಮೊದಲ ಹಾರಾಟವನ್ನು ಆರಂಭಿಸಿತ್ತು, ಆನಂತರ ಸ್ಟಾರ್ ಏರ್ ಕೂಡ ವಿವಿಧ ಮಹಾನಗರಗಳಿಗೆ ಹಾರಾಟ ನಡೆಸ್ತಿದೆ.
ಬೆಂಗಳೂರು - ಶಿವಮೊಗ್ಗ ವಿಮಾನ
ಇನ್ನೂ ಬೆಂಗಳೂರು ನಿಂದ ಶಿವಮೊಗ್ಗಕ್ಕೆ ಪ್ರತಿದಿನ ಮೊದಲ ಪ್ಲೈಟ್ ಒಂದು ಗಂಟೆ ಐದು ನಿಮಿಷಕ್ಕೆ ಹೊರಡುತ್ತದೆ. ಒಂದು ಗಂಟೆ 15 ನಿಮಿಷಗಳ ಪ್ರಯಾಣದ ಬಳಿಕ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 2 ಗಂಟೆ 20 ನಿಮಿಷಕ್ಕೆ ವಿಮಾನ ಲ್ಯಾಂಡ್ ಆಗುತ್ತದೆ.
ಶಿವಮೊಗ್ಗ - ಬೆಂಗಳೂರು ವಿಮಾನ
ಇನ್ನೂ ಬೆಂಗಳೂರಿನಿಂದ ಬಂದಿಳಿದ ವಿಮಾನವೇ ಮತ್ತೆ ಬೆಂಗಳೂರುಗೆ ಪ್ರಯಾಣ ಬೆಳಸುತ್ತದೆ. ಪ್ರತಿದಿನ 2.40 ಕ್ಕೆ ಹೊರಡುವ ಇಂಡಿಗೋ ವಿಮಾನ, ಒಂದು 10 ನಿಮಿಷದ ಪ್ರಯಾಣ ನಡೆಸಿ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮೂರು ಐವತ್ತಕ್ಕೆ ತಲುಪುತ್ತದೆ.