SHIVAMOGGA NEWS / ONLINE / Malenadu today/ Nov 23, 2023 NEWS KANNADA
Shivamogga | Malnenadutoday.com | ಶಿವಮೊಗ್ಗ ಏರ್ಪೋರ್ಟ್ (Shimoga Airport) ನಿಂದ ಈಗಾಗಲೇ ಗೋವಾ, ಹೈದರಾಬಾದ್, ತಿರುಪತಿ ಮತ್ತು ಬೆಂಗಳೂರಿಗೆ ಫ್ಲೈಟ್ ಸಂಚಾರ ಮಾಡುತ್ತಿವೆ. ಇನ್ನೂ ದೆಹಲಿ, ಚನ್ನೈನಂತಹ ಮಹಾನಗರಗಳಿಗೂ ವಿಮಾನ ಸಂಚಾರ ಆರಂಭಿಸುವ ಬಗ್ಗೆ ಪ್ರಯತ್ನಗಳು ನಡೆಯುತ್ತಿವೆ. ಈ ಬಗ್ಗೆ ವಿವರ ಇಲ್ಲಿದೆ Shivamogga airport | ಸ್ಟಾರ್ ಏರ್, ಇಂಡಿಗೋ ನಂತರ ಇನ್ನೆರಡು ಸಂಸ್ಥೆಗಳಿಂದ ಶಿವಮೊಗ್ಗದಲ್ಲಿ ವಿಮಾನ ಸಂಚಾರ!
ಇದರ ಬೆನ್ನಲ್ಲೆ ಶಿವಮೊಗ್ಗದಿಂದ ಸಿಂಗಾಪುರ (Singapore) ಕ್ಕೂ ಸೇರಿದಂಥೆ ಮುಂಬೈ, ದೆಹಲಿ, ಅಹಮದಬಾದ್, ಡಿಯು ದಾಮನ್ ಗಳಿಗೆ ವಿಮಾನ ಸೇವೆ ಕಲ್ಪಿಸುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಮನವಿ ಮಾಡಿದೆ.
ಈ ಸಂಬಂಧ ಇಂಡಿಗೋ ಏರ್’ಲೈನ್ಸ್ ಸಂಸ್ಥೆಗೆ ಮನವಿ ಮಾಡಲಾಗಿದ್ದು, ಇಂಡಿಗೋ ವಿಮಾನಗಳ ಪ್ರಯಾಣದಲ್ಲಿ ಕಾರ್ಪೋರೇಟ್ ರಿಯಾಯ್ತಿ ಕಲ್ಪಿಸಬೇಕು. ಕಾಲಮಿತಿಯೊಳಗೆ ಪ್ರಮುಖ ನಗರಗಳಿಗೆ ವಿಮಾನಯಾನ ಸೇವೆ ಆರಂಭಿಸಬೇಕು ಎಂದು ಮನವಿ ಮಾಡಲಾಗಿದೆ.
READ :ಮೊದಲ ದಿನವೇ 400 ಮಂದಿ ಪ್ರಯಾಣ! ಏರ್ಪೋರ್ಟ್ನಲ್ಲಿ ಸಂಸದರು ನೀಡಿದರು ಮತ್ತೊಂದು ಗುಡ್ ನ್ಯೂಸ್!
ಇನ್ನೂ ಈ ವೇಳೆ ಮಾತನಾಡಿದ ಇಂಡಿಗೋ ಸಂಸ್ಥೆಯ ಮನೋಜ್ ಪ್ರಭುರವರು ಮಾರ್ಚ್ 2024 ರ ನಂತರ ಶಿವಮೊಗ್ಗದಿಂದ ವಿವಿಧ ರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಮಾನಗಳ ಹಾರಾಟ ನಡೆಯಲಿದೆ ಎಂದಿದ್ದಾರೆ.
