SHIVAMOGGA NEWS / ONLINE / Malenadu today/ Nov 23, 2023 NEWS KANNADA
Chikkamagaluru | Malnenadutoday.com | ಶಿವಮೊಗ್ಗ ವಿಮಾನ ನಿಲ್ದಾಣ (Shimoga Airport) ದಿಂದ ನಿನ್ನೆಯಿಂದ ಸ್ಟಾರ್ ಏರ್ ಲೈನ್ಸ್ ಸಂಸ್ಥೆಯ ವಿಮಾನ ಗೋವಾ, ಹೈದ್ರಾಬಾದ್ ಹಾಗೂ ತಿರುಪತಿಗೆ ಹಾರಾಟ ಆರಂಭಿಸಿದೆ.
ಪುಣ್ಯಕ್ಷೇತ್ರ , ಪ್ರವಾಸಿ ಕ್ಷೇತ್ರ, ವಾಣಿಜ್ಯ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸಿದ ಸ್ಟಾರ್ ಏರ್ಲೈನ್ಸ್ನ ಜೊತೆಗೆ ಶಿವಮೊಗ್ಗ ಏರ್ಪೋರ್ಟ್ಗೆ ಇನ್ನೆರಡು ಸಂಸ್ಥೆಗಳು ವಿಮಾನ ಹಾರಾಟ ನಡೆಸುವ ಸಾಧ್ಯತೆ ತೀರಾ ಹತ್ತಿರದಲ್ಲಿದೆ ಎನ್ನಲಾಗುತ್ತಿದೆ
READ : ಕಾಡಾನೆ ದಾಳಿ! ಆನೆ ನಿಗ್ರಹ ಪಡೆಯ ಸದಸ್ಯ ಸಾವು! ಇನ್ನಿಬ್ಬರಿಗೆ ಗಂಭೀರ ಗಾಯ!.
ವಿಶೇಷವಾಗಿ ಈ ಬಗ್ಗೆ ಸಂಸದ ಬಿ.ವೈ.ರಾಘವೇಂದ್ರ ರವರು ಈ ಬಗ್ಗೆ ಸುಳಿವು ನೀಡಿದ್ದಾರೆ. ಏರ್ಪೋರ್ಟ್ನಲ್ಲಿ ಸ್ಟಾರ್ ಏರ್ಲೈನ್ ವಿಮಾನ ಹಾರಾಟಕ್ಕೆ ಚಾಲನೆ ನೀಡಿದ ಅವರು, ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಇನ್ನೆರಡು ವಿಮಾನ ಹಾರಾಟ ಸಂಸ್ಥೆಗಳು ತಮ್ಮ ಕಾರ್ಯಚಟುವಟಿಕೆ ಕೈಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ನೈಟ್ ಲ್ಯಾಂಡಿಂಗ್ ವ್ಯವಸ್ಥೆಯ ಜೊತೆಜೊತೆಗೆ ಏರ್ ಇಂಡಿಯಾ ಹಾಗೂ ಸ್ಪೇಸ್ ಜೆಟ್ (spice jet) ಕಂಪನಿಗಳು ಸದ್ಯದಲ್ಲಿಯೇ ಶಿವಮೊಗ್ಗದಿಂದ ವಿಮಾನ ಹಾರಾಟ ಆರಂಭಿಸುವ ಸಾಧ್ಯತೆ ಇದೆಯಂತೆ.
READ : 10 ರ ಹರೆಯದ ಬಾಲಕಿ ಮೇಲೆ ವೃದ್ಧನ ಅತ್ಯಾಚಾರ! ಹೊಳೆಹೊನ್ನೂರು ಪೊಲೀಸರಿಂದ ಆರೋಪಿ ಅರೆಸ್ಟ್!
ಈ ಸಂಬಂಧ ಟೆಂಡರ್ ಆಗಿದ್ದು, ಶೀಘ್ರದಲ್ಲೇ ಪ್ರತಿಷ್ಟಿತ ಕಂಪನಿಗಳ ವಿಮಾನಗಳ ಹಾರಾಟಕ್ಕೆ ಸಿದ್ದತೆಗಳು ಪೂರ್ಣಗೊಳ್ಳಲಿದೆ ಎಂದು ಸಂಸದರು ತಿಳಿಸಿದ್ದಾರೆ. ಇದೀಗ ಶಿವಮೊಗ್ಗದಿಂದ ನವದೆಹಲಿ, ಚೆನ್ನೈ ಸೇರಿದಂತೆ ವಿವಿಧ ನಗರಗಳಿಗೆ ವಿಮಾನ ಸಂಚಾರ ಆರಂಭಿಸುವ ಬಗ್ಗೆ ಪ್ರಕ್ರಿಯೆಗಳು ಆರಂಭವಾಗಿದೆ ಎಂದಿದ್ದಾರೆ
