10 ರ ಹರೆಯದ ಬಾಲಕಿ ಮೇಲೆ ವೃದ್ಧನ ಅತ್ಯಾಚಾರ! ಹೊಳೆಹೊನ್ನೂರು ಪೊಲೀಸರಿಂದ ಆರೋಪಿ ಅರೆಸ್ಟ್!

Malenadu Today

SHIVAMOGGA NEWS / ONLINE / Malenadu today/ Nov 23, 2023 NEWS KANNADA

Shivamogga|  Malnenadutoday.com | ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಭಾಗದಲ್ಲಿ ನಡೆಯಬಾರದಂತಹ ಘಟನೆಯೊಂದು ನಡೆದಿದೆ. 

ಪುಟ್ಟ ಬಾಲಕಿ ಮೇಲೆ ಎಪತ್ತು ದಾಟಿರುವ ವೃದ್ಧನೊಬ್ಬ ಅತ್ಯಾಚಾರ ಎಸೆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಈ ಸಂಬಂಧ ಹೊಳೆಹೊನ್ನೂರು ಪೊಲೀಸ್​ ಸ್ಟೇಷನ್​ನಲ್ಲಿ ಕೇಸ್ ದಾಖಲಾಗಿದೆ

ಏನಿದು ಪ್ರಕರಣ ?

ಇಲ್ಲಿನ ಗ್ರಾಮವೊಂಧರ  76 ವರ್ಷ ವಯಸ್ಸಿನ ವ್ಯಕ್ತಿಯೋರ್ವ, 10 ವರ್ಷ ವಯಸ್ಸಿನ ಬಾಲಕಿಯನ್ನ ಚಾಕಲೇಟ್ ಕೊಡಿಸುವುದಾಗಿ ಹೇಳಿ ಕರೆದಿದ್ದಾನೆ. ಬಳಿಕ ಹೊಳೆ ಹತ್ತಿರ ಕರೆದುಕೊಂಡು ಹೋಗಿ ಅಲ್ಲಿ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ.  

ಇನ್ನೂ ಘಟನೆ ನಂತರ ಮನೆಗೆ ಬಂದ ಬಾಲಕಿ ತನಗಾಗುತ್ತಿರುವ ನೋವಿನ ಬಗ್ಗೆ ಹೇಳಿಕೊಂಡಿದ್ದಾಳೆ. ಅಲ್ಲದೇ ಬಾಲಕಿಗೆ ರಕ್ತಸ್ರಾವ ಆಗಿದ್ದು, ಪೋಷಕರು ಗಾಬರಿಗೊಂಡಿದ್ದಾರೆ. 

ಈ ವೇಳೆ ವಿಚಾರಿಸಿದಾಗ ಮಗು ನಡೆದ ಘಟನೆ ಬಗ್ಗೆ ಹೇಳಿದೆ. ತಕ್ಷಣ ಪೋಷಕರು ಹೊಳೆಹೊನ್ನೂರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನ ಬಂಧಿಸಿ ಪೊಕ್ಸೋ ಕೇಸ್​ನಡಿಯಲ್ಲಿ ಜೈಲಿಗೆ ತಳ್ಳಿದ್ದಾರೆ. 

 


Share This Article