SHIVAMOGGA NEWS / ONLINE / Malenadu today/ Nov 23, 2023 NEWS KANNADA
Chikkamagaluru | Malnenadutoday.com | ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆ ಹಾವಳಿಗೆ ಇದೀಗ ಮೂರನೆ ವ್ಯಕ್ತಿ ಬಲಿಯಾಗಿದ್ದಾರೆ. ಇಲ್ಲಿನ ಮೂಡಿಗೆರೆ ತಾಲ್ಲೂಕು ಬೈರಾಪುರ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಇಲ್ಲಿನ ಕಾರ್ತಿಕ್ ಗೌಡ ಎಂಬವರು ಮೃತಪಟ್ಟಿದ್ದಾರೆ.
READ :10 ರ ಹರೆಯದ ಬಾಲಕಿ ಮೇಲೆ ವೃದ್ಧನ ಅತ್ಯಾಚಾರ! ಹೊಳೆಹೊನ್ನೂರು ಪೊಲೀಸರಿಂದ ಆರೋಪಿ ಅರೆಸ್ಟ್!
ಆನೆ ನಿಗ್ರಹ ಪಡೆಯ ಸದಸ್ಯನಾಗಿದ್ದ ಕಾರ್ತಿಕ್ ಗೌಡ ಆನೆಯನ್ನ ಕಾಡಿಗಟ್ಟುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಮೂಡಿಗೆರೆಯ ಗೌಡಹಳ್ಳಿಯ ನಿವಾಸಿಯಾಗಿರುವ ಇವರು ಆನೆಯನ್ನ ಓಡಿಸುತ್ತಿದ್ದ ವೇಳೆ ಇದ್ದಕ್ಕಿದ್ದ ಹಾಗೆ ಇವರಿರುವ ಜಾಗದ ಕಡೆಯೇ ಆನೆ ನುಗ್ಗಿದೆ. ಅಲ್ಲದೆ ಕಾಡಾನೆಯು ಇವರ ಮೇಲೆ ದಾಳಿ ನಡೆಸಿದೆ.
26 ವರ್ಷ ಕಾರ್ತಿಕ್ ಗೌಡರವರು ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು ಅಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನೂ ಈ ಘಟನೆಯಲ್ಲಿ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಒಂದುವರೆ ತಿಂಗಳ ಹಿಂದೆ ಚಿನ್ನಿ ಎಂಬವರು ಹಾಗೂ 20 ದಿನಗಳ ಹಿಂದೆ ವೀಣಾ ಎಂಬವರು ಕಾಡಾನೆ ದಾಳಿಗೆ ಬಲಿಯಾಗಿದ್ದರು.
