SHIVAMOGGA AIRPORT ಉದ್ಘಾಟನೆಗೂ ಮೊದಲು ನಾಳೆ ಶಿವಮೊಗ್ಗದಲ್ಲಿ FLY SHIVAMOGGA ಆಚರಣೆ ! ಏನಿದು ವಿಶೇಷ? ವರದಿ ಓದಿ

FLY SHIVAMOGGA celebrations in Shimoga tomorrow before the inauguration of SHIVAMOGGA AIRPORT! What's so special about it? Read the report

SHIVAMOGGA AIRPORT ಉದ್ಘಾಟನೆಗೂ ಮೊದಲು ನಾಳೆ ಶಿವಮೊಗ್ಗದಲ್ಲಿ  FLY SHIVAMOGGA  ಆಚರಣೆ ! ಏನಿದು ವಿಶೇಷ? ವರದಿ ಓದಿ
SHIVAMOGGA AIRPORT ಉದ್ಘಾಟನೆಗೂ ಮೊದಲು ನಾಳೆ ಶಿವಮೊಗ್ಗದಲ್ಲಿ FLY SHIVAMOGGA ಆಚರಣೆ ! ಏನಿದು ವಿಶೇಷ? ವರದಿ ಓದಿ

 MALENADUTODAY.COM | SHIVAMOGGA  | #KANNADANEWSWEB

ಶಿವಮೊಗ್ಗ ನಗರದ ಸೋಗಾನೆಯಲ್ಲಿ(sogane) ಉದ್ಘಾಟನೆಗೆ ಸಿದ್ದವಾಗುತ್ತಿರುವ ವಿಮಾನ ನಿಲ್ಧಾಣ (shivamogga Airport ) ಸದ್ಯ ಟ್ರೆಂಡಿಂಗ್ ನ್ಯೂಸ್ ಆಗಿದೆ, ಶಿವಮೊಗ್ಗದಿಂದ ದೆಹಲಿಯವರೆಗೂ, ಲೋಕಲ್​ ಚಾನಲ್​ಗಳಿಂದ ಹಿಡಿದು ರಾಷ್ಟ್ರೀಯ ಚಾನಲ್​ಗಳು ಸಹ ಶಿವಮೊಗ್ಗ ಏರ್​ಫೋರ್ಟ್​ನ ಸುದ್ದಿ ಮಾಡುತ್ತಿವೆ. ಇದರ ನಡುವೆ ಶಿವಮೊಗ್ಗದಲ್ಲಿ ಏರ್​ಫೋರ್ಟ್ ಉದ್ಘಾಟನೆಯನ್ನು ಹಬ್ಬದ ರೀತಿಯಲ್ಲಿ ಆಚರಿಸುವ ನಿಟ್ಟಿನಲ್ಲಿ ನಾಳೆ ಅಂದರೆ, ಫೆಬ್ರವರಿ 25ರಂದು ಸಂಜೆ 4 ಗಂಟೆಗೆ ಫ್ರೀಡಂ ಪಾರ್ಕ್‌ನಲ್ಲಿ ಮುಗಿಲೆತ್ತರಕ್ಕೆ ಮಲೆನಾಡು ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಿಲಾಗಿದೆ. 

READ | *ಮದುವೆಯಾಗದ ಬ್ರಹ್ಮಚಾರಿಗಳಿಂದ ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ! ಡಾಲಿ ಧನಂಜಯ್​ರಿಂದಲೇ ಆರಂಭ! ಏನಿದು ವಿಶೇಷ?*

Fly shivamogga  ಈ ಕಾರ್ಯಕ್ರಮವನ್ನ ಆಯೋಜಿಸಿದ್ದು, ಈ ಸಂಬಂಧ ತಂಡದ ಸಂಚಾಲಕ ಹರಿಕೃಷ್ಣ  ಮಾಹಿತಿ ನೀಡಿದ್ದಾರೆ.  ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಉದ್ಘಾಟನೆ ಆಗುತ್ತಿರುವುದು  ಅತ್ಯಂತ ಸಂಭ್ರಮದ ವಿಷಯ. ಏರ್​​ಫೋರ್ಟ್ ಶಿವಮೊಗ್ಗೆಗೊಂದು ಕಲಶಪ್ರಾಯ, ಹಿಂದು, ಗರಿಮೆ, ಇದೊಂದು ಸಡಗರ ಆಚರಿಸುವಂತಹ ವಿಷಯವಾಗಿದೆ. ಈ ಹಿನ್ನಲೆಯಲ್ಲಿ ಇದೇ  ಫೆ.25ರಂದು ಸಂಜೆ 4 ಗಂಟೆಗೆ ಗಾಳಿಪಟಗಳನ್ನು ಹಾರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದಿದ್ದಾರೆ. ಮುಗಿಲೆತ್ತರಕ್ಕೆ ನಮ್ಮ ಮಲೆನಾಡು ಎಂಬ ಸ್ಲೋಗನ್​ ಅಡಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಂಗೀತ ಕಾರ್ಯಕ್ರ ನಡೆಯಲಿದೆ. ಅಲ್ಲದೆ ರಾತ್ರಿ ಪಟಾಕಿ ಸಿಡಿಸುವ ಕಾರ್ಯಕ್ರಮವಿದೆ ಎಂದು ತಿಳಿಸಿದ್ಧಾರೆ.