ಶಿವಮೊಗ್ಗದ ಶಿಕ್ಷಕಿಗೆ ಪತ್ರ ಬರೆದ ಪ್ರಧಾನಿ ನರೇಂದ್ರ ಮೋದಿ! ಏನು ವಿಶೇಷ ಗೊತ್ತಾ?
Prime Minister Narendra Modi writes a letter to a teacher in Shivamogga Do you know what's special?
KARNATAKA NEWS / ONLINE / Malenadu today/ Nov 18, 2023 SHIVAMOGGA NEWS
Shivamogga | Malnenadutoday.com | ಶಿವಮೊಗ್ಗ ದ ಶಿಕ್ಷಕಿಯೊಬ್ಬರಿಗೆ ಪ್ರಧಾನಿ ನರೇಂದ್ರ ಮೋದಿ ಯವರು ಪತ್ರ ಬರೆದು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಏನಿದು ವಿಶೇಷತೆ
ಪರೀಕ್ಷಾ ಪೇ ಚರ್ಚಾ (pariksha pe charcha) ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ಅರ್ಷಿತಾ ಶೆಟ್ಟಿ ಎಂಬವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಯಾಗಿ ಅವರನ್ನು ಅಭಿನಂದಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಪತ್ರ ಬರೆದಿದ್ದಾರೆ.
ನಿಮ್ಮ ಮತ್ತು ಇತರ ಶಿಕ್ಷಕ ಸಹೋದ್ಯೋಗಿಗಳ ಆಲೋಚನೆ ಗಳನ್ನು ಸ್ವೀಕರಿಸಲು ನನಗೆ ಸಂತೋಷವಾಗಿದೆ. ಇದಕ್ಕಾಗಿ ನಿಮಗೆ ಧನ್ಯವಾದಗಳು, ರಾಷ್ಟ್ರ ಮತ್ತು ವಿದ್ಯಾರ್ಥಿಗಳ ಅಭಿ ವೃದ್ಧಿಯ ಬಗ್ಗೆ ನಿಮ್ಮ ಅಭಿಪ್ರಾಯಗಳು ಅಮೂಲ್ಯವಾಗಿದೆ ಎಂದಿದ್ದಾರೆ. ಕನಸು ಕಾಣುವುದನ್ನು ಕಲಿಸುವ ಮತ್ತು ಆ ಕನಸುಗಳನ್ನು ಸಂಕಲ್ಪ ಗಳಾಗಿ ಪರಿವರ್ತಿಸುವ ಮೂಲಕ ನನಸಾಗಿಸಲು ಸಹಾಯ ಮಾಡುವ ಶಿಕ್ಷಕರು ವಿದ್ಯಾರ್ಥಿಗಳ ಜೀವನದಲ್ಲಿ ದಾರಿ ದೀಪದಂತಿರುತ್ತಾರೆ.
READ :ಬಾಂಬೆ ಬ್ಲಡ್ ಎಂದರೇ ಏನು? ವಿಶ್ವದ ವಿಶಿಷ್ಟ ರಕ್ತದ ಬಗ್ಗೆ ಶಿವಮೊಗ್ಗದಲ್ಲೇಕೆ ಸುದ್ದಿಯಾಗ್ತಿದೆ ಗೊತ್ತಾ?
ವಿದ್ಯಾರ್ಥಿಗಳ ವ್ಯಕ್ತಿತ್ವದಲ್ಲಿ ಶಿಕ್ಷಕರು ತುಂಬುವ ಸಕಾರಾತ್ಮಕತೆ ಮತ್ತು ಆತ್ಮ ವಿಶ್ವಾಸ ಜೀವನದುದ್ದಕ್ಕೂ ಅವರಿಗೆ ಮಾರ್ಗದರ್ಶನ ನೀಡುತ್ತದೆ ಎಂದು ತಿಳಿಸಿದ್ದಾರೆ. ನಮ್ಮ ಪ್ರತಿಭಾವಂತ ಯುವ ಜನತೆಗೆ 2047ರ ದೇಶದ ಸ್ವಾತಂತ್ರ್ಯದ ಶತಮಾನೋತ್ಸವದವರೆಗೆ ಭವ್ಯವಾದ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ವಿಶೇಷ ಅವಕಾಶವಿದೆ.
ನಮ್ಮ ಯುವಜನರು ಮುಂದಿನ 25 ವರ್ಷಗಳಲ್ಲಿ ರಾಷ್ಟ್ರದ ಪ್ರಗತಿ ಯೊಂದಿಗೆ ತಮ್ಮ ಗುರಿಗಳನ್ನು ಜೋಡಿಸುವ ಮೂಲಕ ದೇಶ ಮತ್ತು ಸಮಾಜಕ್ಕಾಗಿ ತು೦ಬು ಹೃದಯದಿಂದ ಕೆಲಸ ಮಾಡುತ್ತಾರೆ ಎಂಬ ನಂಬಿಕೆಯಿದೆ. ನಿಮ್ಮ ಆಲೋಚನೆಗಳನ್ನು ಹಂಚಿ ಕೊಂಡಿದ್ದಕ್ಕಾಗಿ ಮತ್ತೊಮ್ಮೆ ಧನ್ಯವಾದಗಳು. ನಿಮ್ಮ ಉತ್ತಮ ಆರೋಗ್ಯ ಮತ್ತು ಉಜ್ವಲ ಭವಿಷ್ಯ ಕ್ಕಾಗಿ ಶುಭ ಹಾರೈಸಿದ್ದಾರೆ.