KARNATAKA NEWS/ ONLINE / Malenadu today/ Oct 17, 2023 SHIVAMOGGA NEWS
ಶಿವಮೊಗ್ಗ ವಿಮಾನ ನಿಲ್ದಾಣದಿಂದ ಮೊದಲು ಬೆಂಗಳೂರಿಗೆ ವಿಮಾನ ಯಾನ ಆರಂಭವಾಗಿತ್ತು. ಇದರ ಬೆನ್ನಲ್ಲೆ ಸ್ಟಾರ್ ಏರ್‌ಲೈನ್ಸ್ ಶಿವಮೊಗ್ಗದಿಂದ ಹೈದ್ರಾಬಾದ್, ತಿರುಪತಿ ಹಾಗೂ ಗೋವಾಕ್ಕೂ ವಿಮಾನಯಾನ ಆರಂಭಿಸಿರುವ ಬಗ್ಗೆ ಇವತ್ತು ಮಲೆನಾಡು ಟುಡೆ ವರದಿ ಮಾಡಿತ್ತು.
ಸ್ಟಾರ್ ಏಲೈನ್ಸ್ ಶಿವಮೊಗ್ಗದಿಂದ ಗೋವಾ, ಹೈದರಾಬಾದ್ ತಿರುಪತಿಗೆ ಸಂಪರ್ಕ ಕಲಿಸುತ್ತಿದೆ. ಇದೀಗ ಬುಕ್ಕಿಂಗ್ ಕೂಡ ಆರಂಭಿಸಿದೆ. ಸಂಸ್ಥೆಯು ವಾರದಲ್ಲಿ ಆರು ದಿನ ವಿಮಾನಯಾನ ಸೇವೆ ಆರಂಭಿಸುತ್ತಿದೆ. ನವೆಂಬರ್ 17 ರಿಂದ ಸ್ಟಾರ್ ಏರ್‌ಲೈನ್ಸ್ ತನ್ನ ಸೇವೆ ಆರಂಭಿಸುತ್ತಿದೆ. ಈ ಸಂಬಂಧ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಬುಕ್ಕಿಂಗ್ ಕೂಡ ಆರಂಭವಾಗಿದೆ ಈ ಬಗ್ಗೆ ಇನ್ನಷ್ಟು ಮಾಹಿತಿ ಈ ವರದಿಯಲ್ಲಿದೆ ಕ್ಲಿಕ್ ಮಾಡಿ ಓದಿ ತಿರುಪತಿ, ಹೈದ್ರಾಬಾದ್, ಗೋವಾಕ್ಕೆ SHIVAMOGGA AIRPORT ಪ್ಲೈಟ್ ಹಾರಾಟ | ಬುಕ್ಕಿಂಗ್ ಶುರು! | ದರ ಎಷ್ಟು ? ಯಾವಾಗಿನಿಂದ ಆರಂಭ ಗೊತ್ತಾ
ಇನ್ನೂ ಈ ವಿಚಾರ ಹೊರಬಿದ್ದ ಬೆನ್ನಲ್ಲೆ ಶಿವಮೊಗ್ಗದಿಂದ ಗೋವಾ, ತಿರುಪತಿ, ಹೈದರಾಬಾದ್‌ಗೆ ವಿಮಾನ ಸಂಚಾರವನ್ನು ನವೆಂಬರ್ 17 ರಿಂದ ಆರಂಭಿಸುವ ಕುರಿತು – ಸ್ಟಾರ್ ಏರ್‌ಲೈನ್ಸ್ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿ ಸಿದೆ. ಟಿಕೆಟ್ ಬುಕ್ಕಿಂಗ್ ಸಹ ಆರಂಭವಾಗಿರುವುದು ಸಂತಸದ ವಿಚಾರ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಅಲ್ಲದೆ ಶೀಘ್ರವೇ ಮುಂಬೈಗೂ ವಿಮಾನ ಹಾರಾಟ ಆರಂಭ ವಾಗುವ ನಿರೀಕ್ಷೆ ಇದೆ ಎಂದ ಅವರು, ಶಿವಮೊಗ್ಗ- ರಾಣೆಬೆನ್ನೂರು ನಡುವಿನ ರೈಲ್ವೆ ಯೋಜನೆ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಹೊಸ ಮಾರ್ಗದ ಮೂಲಕ ಶಿವಮೊಗ್ಗವನ್ನು ದೇಶದ ಪ್ರಮುಖ ನಗರ ಗಳಿಗೆ ಸಂಪರ್ಕ ಕಲ್ಪಿಸುವ ಬಹುನಿರೀಕ್ಷಿತ ಯೋಜನೆ ಇದಾಗಿದೆ ಎಂದಿದ್ಧಾರೆ.
ಇನ್ನಷ್ಟು ಸುದ್ದಿಗಳು
ಶೇ…ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL
ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ



