BREAKING | ಆಟವಾಡುತ್ತಿದ್ದ ವೇಳೆ ಬಾವಿಗೆ ಬಿದ್ದ ಮೂರು ವರ್ಷದ ಮಗು | ಸ್ಥಳದಲ್ಲಿಯೇ ಸಾವು

BREAKING | Three-year-old baby falls into well while playing | Death on the spot Shimoga District Sagar Taluk

BREAKING  | ಆಟವಾಡುತ್ತಿದ್ದ ವೇಳೆ ಬಾವಿಗೆ ಬಿದ್ದ ಮೂರು ವರ್ಷದ ಮಗು | ಸ್ಥಳದಲ್ಲಿಯೇ ಸಾವು
Shimoga District Sagar Taluk

Shivamogga Apr 17, 2024   Shimoga District Sagar Taluk ಬೋರ್‌ವೆಲ್‌ಗಳಿಗೆ ಮಕ್ಕಳು ಬೀಳುತ್ತಿರುವ ಪ್ರಕರಣಗಳು ವರದಿಯಾಗುತ್ತಿರುವ ಬೆನ್ನಲ್ಲೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕುನಲ್ಲಿ ಮಗುವೊಂದು ಬಾವಿಗೆ ಬಿದ್ದು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಸ್ಥಳೀಯ ಮಾಧ್ಯಮ ವರದಿಗಾರರ ಪ್ರಕಾರ, ಆಟವಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. 

ಸಾಗರ : ಆಯತಪ್ಪಿ ಬಾವಿಗೆ ಬಿದ್ದು 3 ವರ್ಷದ ಮಗು ಸಾವು

ಮನೆ ಹಿತ್ತಲಲ್ಲಿ ಮಗು ಆಟವಾಡುತ್ತಿದ್ದ ಸಂದರ್ಭದಲ್ಲಿ  ಅಲ್ಲಿನ ಬಾವಿಗೆ ಮಗು ಬಿದ್ದಿದೆ ಎಂದು ಹೇಳಲಾಗುತಿದ್ದು ಪೊಲೀಸರು ಈ ಸಂಬಂಧ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇಲ್ಲಿನ ಎಸ್ ಎನ್ ನಗರದಲ್ಲಿ ಈ ಘಟನೆ ಸಂಭವಿಸಿದೆ. ಮೃತ ಮಗುವಿನ ಹೆಸರು ಮನ್ನತ್ (3)  

ಬಾಲಕಿ ಆಟವಾಡುತ್ತಾ ಬಾವಿ ಬಳಿ ತೆರಳಿದ್ದ ಸಂದರ್ಭದಲ್ಲಿ ಮಗು ಬಾವಿಗೆ ಬಿದ್ದಿದೆ. ತಕ್ಷಣವೇ ಅಲ್ಲಿಗೆ ತಾಯಿ ಓಡಿದ್ದಾಳೆ. ಅಷ್ಟರಲ್ಲಿ ಮಗು ಬಾವಿಗೆ ಬಿದ್ದಿತ್ತು. ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿ ಮಗುವನ್ನ ಮೇಲಕ್ಕೆ ಎತ್ತಿದ್ದಾರೆ.ಆದರೆ ತಲೆಗೆ ಪೆಟ್ಟು ಮಗು ಸಾವನ್ನಪ್ಪಿತ್ತು.