ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಸಾಗರ ತಾಲ್ಲೂಕಿನ ಆನಂದಪುರದಲ್ಲಿ ಮೂರು ಆಕ್ಸಿಡೆಂಟ್​/ ಬಸ್​ಗಳ ಡಿಕ್ಕಿ/ ಬೈಕ್​ ಆಕ್ಸಿಡೆಂಟ್/ ಓರ್ವನ ಸಾವು

Malenadu Today

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ಸುತ್ತಮುತ್ತ ಒಂದು ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಮೂರು ಆಕ್ಸಿಡೆಂಟ್​ಗಳಾಗಿವೆ. 

ಸರಣಿ ಸುದ್ದಿ : DYSP ಬಾಲ್​ರಾಜ್​ಗೆ ಸಿಕ್ತು ಕೇಂದ್ರ ಮಂತ್ರಿ ಪದಕ/ ಅತ್ಯುನ್ನತ ಪ್ರಶಸ್ತಿ ಸಿಗಲು ಕಾರಣವಾದ ಕೇಸ್​ ಯಾವುದು ಗೊತ್ತಾ? ಇಲ್ಲಿದೆ ಪ್ರಕರಣ ರೋಚಕ ತನಿಖೆಯ ಸರಣಿ

Malenadu Today

ಬಸ್​ಗಳ ನಡುವೆ ಡಿಕ್ಕಿ

ಸಾಗರ ತಾಲ್ಲೂಕಿನ ಆನಂದಪುರದ ಸಮೀಪ ಸಿಗುವ ಚೆನ್ನಕೊಪ್ಪದ ಬಳಿಯಲ್ಲಿ ಇವತ್ತು ಬೆಳ್ಳಂಬೆಳಗ್ಗೆ ಆಕ್ಸಿಡೆಂಠ್ ಆಗಿದೆ. ಕೆ.ಎಸ್​.ಆರ್​.ಟಿ.ಸಿ(Ksrtc)  ಬಸ್ ಹಾಗೂ ಶಾಲೆ ಮಕ್ಕಳನ್ನು ಕರೆತಂದಿದ್ದ ಟೂರಿಸ್ಟ್ ಬಸ್​ ಆಕ್ಸಿಡೆಂಟ್ ಆಗಿದೆ. 

ಸರಣಿ ಸುದ್ದಿ 15 ದಿನದ ಹಿಂದೆ ನಡೆದಿದ್ದ ಘಟನೆ ಬೆನ್ನಲ್ಲೆ ನಡೆದಿತ್ತು ಭೀಕರ ಘಟನೆ/ ಜ್ಞಾನಭಾರತಿ ಕಾಡಲ್ಲಿ ಅಂದು ನಡೆದಿದ್ದು ಏನು? DYSP ಬಾಲರಾಜ್​ Investigation part-2

Malenadu Today

ಪರಸ್ಪರ ಎರಡು ಬಸ್​ಗಳು ಡಿಕ್ಕಿಹೊಡೆದುಕೊಂಡಿದ್ದು, ಬಸ್​ಗಳ ಮುಂಭಾಗ ಜಖಂ ಆಗಿದೆ. ಸಾಗರದಿಂದ ಬೆಂಗಳೂರಿಗೆ ಕೆಎಸ್​ಆರ್​ಟಿಸಿ ಬಸ್ ಹೋಗುತ್ತಿತ್ತು. ಇತ್ತ ಬೆಂಗಳೂರಿನಿಂದ ಪ್ರವಾಸ ಹೊರಟಿದ್ದ ಟೂರಿಸ್ಟ್ ಬಸ್​ ಜೋಗದ ಕಡೆಗೆ ತೆರಳುತ್ತಿತ್ತು. ಎರಡು ಬಸ್​ಗಳು ಮುಖಾಮುಖಿಯಾಗಿ ಡಿಕ್ಕಿ ಆಗಿವೆ. 

ಸಾಗರ ಸುದ್ದಿ :  Exclusive / ಸಾಗರ ಟೌನ್​ನಲ್ಲಿ ನಡೆದ ಭೀಕರ ಲಾರಿ ಅಪಘಾತ ಸಂಭವಿಸಿದ್ದೇಗೆ ನೋಡಿ ಸಿ.ಸಿ.ಟಿವಿ ವಿಡಿಯೋದಲ್ಲಿ!

ಇನ್ನೂ ಅಪಘಾತದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಹಲವು ಪ್ರಯಾಣಿಕರಿಗೆ ಗಾಯಗಳಾಗಿದ್ದು, ಅವರುಗಳಿಗೆ ಆನಂದಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. 

Malenadu Today

ಬೈಕ್​ನಿಂದ ಬಿದ್ದು ಸಾವು

ಇತ್ತ ಆನಂದಪುರ ಹತ್ತೀರ ಬೈರಾಪುರ ಪೀರನ ಕಣಿವೆ ಬಳಿಯಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ದಾನಪ್ಪ ಎಂಬವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ನಂತರ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡುವ ಸಂದರ್ಭದಲ್ಲಿ ದಾರಿ ಮಧ್ಯೆ ನಿಧನರಾಗಿದ್ದಾರೆ. ಆಕ್ಸಿಡೆಂಟ್​ಗೆ ಸ್ಪಷ್ಟ ಕಾರಣ ಲಭ್ಯವಾಗಿಲ್ಲ 

ಇದನ್ನು ಸಹ ಓದಿ :ಚಿರತೆ ಇದೆ ಎಂದಿದಕ್ಕೆ ಸಾಯುವ ಹಾಗೆ ಹೊಡೆದ ಪರಿಯಸ್ಥರು/ ಇದೆಂತದ್ರಿ ಅನ್ಯಾಯ? ವಿವರ ಇಲ್ಲಿದೆ

ಮಲಂದೂರಿನಲ್ಲಿ ಯುವಕರಿಗೆ ಬೈಕ್​ ಡಿಕ್ಕಿ

ಇವೆಲ್ಲದರ ನಡುವೆ ಆನಂದಪುರದ ಬಳಿ ಬರುವ ಮಲಂದೂರಿನಲ್ಲಿ ರಾತ್ರಿ ನಡೆದುಕೊಂಡು ಹೋಗ್ತಿದ್ದವರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದಿದೆ. ಆನಂದಪುರದ ಸಂತೆ ಮುಗಿಸಿಕೊಂಡು ಬರುತ್ತಿದ್ದ ಬೈಕ್​ವೊಂದು ಯುವಕರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಘಟನೆಯಲ್ಲಿ ಮೂವರು ಯುವಕರು ಗಾಯಗೊಂಡಿದ್ದಾರೆ. ಈ ಪೈಕಿ ಓರ್ವನಿಗೆ ಗಂಭೀರವಾದ ಗಾಯಗಳಾಗಿದ್ದು, ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. 

Malenadu Today

Share This Article