DYSP ಬಾಲ್​ರಾಜ್​ಗೆ ಸಿಕ್ತು ಕೇಂದ್ರ ಮಂತ್ರಿ ಪದಕ/ ಅತ್ಯುನ್ನತ ಪ್ರಶಸ್ತಿ ಸಿಗಲು ಕಾರಣವಾದ ಕೇಸ್​ ಯಾವುದು ಗೊತ್ತಾ? ಇಲ್ಲಿದೆ ಪ್ರಕರಣ ರೋಚಕ ತನಿಖೆಯ ಸರಣಿ

ಕೇಂದ್ರ ಸರ್ಕಾರ ಹಲವು ವಿಭಾಗದಲ್ಲಿ ಗೃಹ ಮಂತ್ರಿ ಪದಕ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಬಾಲರಾಜ್​ರಿಗೆ 2018ನೇ ಸಾಲಿನ ಕೇಂದ್ರದ ಅತ್ಯುತ್ತಮ ತನಿಖಾ ವರದಿ ವಿಭಾಗದಲ್ಲಿ ಪದಕ ಸಿಕ್ಕಿದೆ. ತನಿಖೆಯ ರೀತಿ, ಅದಕ್ಕೆ ಬಳಸಿದ ತಂತ್ರಜ್ಞಾನ ಮತ್ತು ವೈಜ್ಞಾನಿಕ ತಂತ್ರಗಾರಿಕೆ ಮತ್ತು ಆರೋಪಿಗಳಿಗಾದ ಶಿಕ್ಷೆಯನ್ನು ಆಧರಿಸಿ ಈ ಪದಕಗಳನ್ನು ನೀಡಲಾಗುತ್ತದೆ.

DYSP ಬಾಲ್​ರಾಜ್​ಗೆ ಸಿಕ್ತು ಕೇಂದ್ರ ಮಂತ್ರಿ ಪದಕ/ ಅತ್ಯುನ್ನತ ಪ್ರಶಸ್ತಿ ಸಿಗಲು ಕಾರಣವಾದ ಕೇಸ್​ ಯಾವುದು ಗೊತ್ತಾ? ಇಲ್ಲಿದೆ ಪ್ರಕರಣ ರೋಚಕ ತನಿಖೆಯ ಸರಣಿ

ಶಿವಮೊಗ್ಗ ಉಪವಿಭಾಗದ ಡಿವೈಎಸ್​ಪಿಯಾಗಿರುವ ಬಿ. ಬಾಲರಾಜ್​ರಿಗೆ  ಕೇಂದ್ರ ಗೃಹ ಮಂತ್ರಿ ಪದಕಕ್ಕೆ (Union Home Minister's Medal for Excellence in Investigation) ಆಯ್ಕೆಯಾಗಿದ್ದಾರೆ. ಅವರು ತನಿಖೆ ನಡೆಸಿದ ಪ್ರಕರಣವೊಂದಕ್ಕೆ ಈ ಮೆಡಲ್ ಲಭವಿಸಿದೆ. ಜೀವಮಾನದ ಸಾಧನೆ ಗುರುತಿಸಿ, ಕೇಂದ್ರ ಸರ್ಕಾರ ಹಲವು ವಿಭಾಗದಲ್ಲಿ ಗೃಹ ಮಂತ್ರಿ ಪದಕ  ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಬಾಲರಾಜ್​ರಿಗೆ  2018ನೇ ಸಾಲಿನ ಕೇಂದ್ರದ ಅತ್ಯುತ್ತಮ ತನಿಖಾ ವರದಿ ವಿಭಾಗದಲ್ಲಿ ಪದಕ ಸಿಕ್ಕಿದೆ. ತನಿಖೆಯ ರೀತಿ, ಅದಕ್ಕೆ ಬಳಸಿದ ತಂತ್ರಜ್ಞಾನ ಮತ್ತು ವೈಜ್ಞಾನಿಕ ತಂತ್ರಗಾರಿಕೆ ಮತ್ತು ಆರೋಪಿಗಳಿಗಾದ ಶಿಕ್ಷೆಯನ್ನು ಆಧರಿಸಿ ಈ ಪದಕಗಳನ್ನು ನೀಡಲಾಗುತ್ತದೆ. 

ಇದನ್ನು ಸಹ ಓದಿ : ದೇವರ ಮುಂದೆ ಅಜ್ಜಿ ಮರ್ಡರ್​/ ಕೇಳೋರೆ ಇಲ್ಲದ ಅನಾಥೆ ಸಾವಿಗೆ, ನ್ಯಾಯ ಕೊಡಿಸಿದ ಶಿವಮೊಗ್ಗ ಪೊಲೀಸ್​/ EXCLUSIVE JP REPORT

ಬಾಲರಾಜ್ ಶಿವಮೊಗ್ಗ ಜಿಲ್ಲೆಗೆ ಚಿರಪರಿಚಿತರು ನಕ್ಸಲ್​ ಮೂಮೆಂಟ್​ನಿಂದ ಹಿಡಿದು, ರೌಡಿಗಳಿಗೆ ದುಸ್ವಪ್ಪನವಾಗಿ ಕಾಡಿವರು ಬಿ.ಬಾಲರಾಜ್​, ಹೆಬ್ಬೆಟ್ಟು ಮಂಜನಂತಹ ರೌಡಿಗಳು ಮತ್ತೆ ಶಿವಮೊಗ್ಗಕ್ಕೆ ಕಾಲಿಡದಂತೆ ಎಲ್ಲಿಯೋ ಅವಿತು ಕುಳಿತುಕೊಳ್ಳಲು ಕಾರಣವಾಗಿದ್ದು ಬಿ.ಬಾಲರಾಜ್​. ಆತನಿಗೆ ಶಿಕ್ಷೆಯಾಗುವಂತೆ ತನಿಖೆಯಲ್ಲಿ ಅಗತ್ಯ ಸಾಕ್ಷ್ಯಗಳನ್ನು ದಾಖಲಿಸಿದ್ದ ಬಾಲರಾಜ್​ ಶಿವಮೊಗ್ಗದ ನಟೋರಿಯಸ್ ರೌಡಿಗಳ ಹೆಡೆಮುರಿ ಕಟ್ಟಿದವರು. ಅವರು ಶಿವಮೊಗ್ಗದಿಂದ ಬೆಂಗಳೂರಿಗೆ ವರ್ಗಾವಾದ ನಂತರ ಪೊಲೀಸ್ ಇಲಾಖೆಯಲ್ಲಿ ಹಲವು ತನಿಖಾ ಪ್ರಕರಣಗಳಲ್ಲಿ ಅವರ ವಿಶಿಷ್ಟ ಸೇವೆ ಕೇಸ್​ಗಳನ್ನು ಇತ್ಯರ್ಥ ಮಾಡುತ್ತಿದ್ದವು. ಅಂತಹ ಪ್ರಕರಣಗಳಲ್ಲಿ ಸದ್ಯ ಪ್ರಶಸ್ತಿ  ಲಭಿಸಿರುವ ಜ್ಞಾನಭಾರತಿ ರೇಪ್​​​ ಕೇಸ್ ಸಹ ಒಂದು

ಇದನ್ನು ಸಹ ಓದಿ :ಕೇಸ್​ ವಾಪಸ್​ತೆಗೆದುಕೊಳ್ಳುವಂತೆ ಬೆದರಿಕೆ/ ತಡರಾತ್ರಿ ಮನೆ ಬಾಗಿಲಿಗೆ ಬಂದು ಕಾರಿಗೆ ಬೆಂಕಿ ಹಚ್ಚಿದ್ರು/ ರಕ್ಷಣೆಯಿಲ್ಲ ಎಂದು ಕಣ್ಣಿರಿಟ್ಟ ಸಂತ್ರಸ್ತೆ

ಆ ಸಂದರ್ಭದಲ್ಲಿ ರಾಷ್ಟ್ರದೆಲ್ಲೆಡೆ ಸುದ್ದಿಯಾಗಿದ್ದ ಕೇಸ್​ ಅದು, ನೇಪಾಳ ಮೂಲದ ವಿದ್ಯಾರ್ಥಿನಿ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣ, ರಾಜ್ಯ ಸರ್ಕಾರಕ್ಕೂ ಪ್ರತಿಷ್ಟೆಯಾಗಿತ್ತು. ಸುದ್ದಿ ಮಾಧ್ಯಮಗಳು ಪ್ರಕರಣವನ್ನು ದೊಡ್ಡ ಮಟ್ಟಿಗೆ ಹೈಪ್​ ಮಾಡಿದ್ದವು. ಮೇಲಾಗಿ ವ್ಯಾಪಕ ಒತ್ತಡ ಪ್ರಕರಣದ ಮೇಲಿತ್ತು. ಆದರೆ ಸಣ್ಣದೊಂದು ಕ್ಲೂ ಕೂಡ ಇರದ ಕೇಸ್​ನ ಜವಾಬ್ದಾರಿ ಬಾಲರಾಜ್​ರವರ ಮೇಲೆ ಬಿದ್ದಿತ್ತು. ಆ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದ ಬಿ.ಬಾಲರಾಜ್​, ಕೇಸನ್ನ ಹೇಗೆ ಬಿಡಿಸಿದರು, ಹೇಗೆ ಆರೋಪಿಗಳನ್ನು ಹಿಡಿದಿದ್ದರು, ಶಿಕ್ಷೆ ಕೊಡಿಸಿದ್ರು ಎಂಬ ಪೂರ್ಣ ಮಾಹಿತಿ ಟುಡೆ ತಂಡ ನೀಡುತ್ತಿದೆ. 

ಇದನ್ನು ಸಹ ಓದಿ : 15 ವರ್ಷದಿಂದ ಕಾಡು ಬಿಟ್ಟು ಬರದ ರೌಡಿ ಗಣೇಶ ಮಧ್ಯಪ್ರದೇಶಕ್ಕೆ! 6 ಮಂದಿಯನ್ನು ಕೊಂದ ಸಕ್ರೆಬೈಲ್​ ಬಿಡಾರದ ಈ ಆನೆ ಎಷ್ಟೊಂದು ಉಗ್ರ ಸ್ವರೂಪಿ ಗೊತ್ತಾ?

ಶಿವಮೊಗ್ಗದ ಡಿವೈಎಸ್​ಪಿಯೊಬ್ಬರು ಕೈಗೊಂಡಿದ್ದ ತನಿಖಾ ಪ್ರಕರಣ ಮತ್ತು ಅದರ ಆದೇಶವನ್ನು, ಕೋರ್ಟ್​  ಜ್ಯೂಡಿಷಿಯಲ್ ಅಕಾಡೆಮಿಗೆ ಕಳುಹಿಸಿ ಅಲ್ಲಿಗೆ ತರಬೇತಿಗೆ ಬರುವ ನ್ಯಾಯಧೀಶರುಗಳಿಗೆ ತರಬೇತಿಯ ವಿಷಯವಾಗಿ ಸೇರಿಸುವಂತೆ ನಿರ್ದೇಶನ ನೀಡಿತ್ತು ಎಂದರೇ ಪ್ರಕರಣ ಎಷ್ಟೊಂದು ಕುತೂಹಲ ಹಾಗೂ ಗಂಭೀರವಾಗಿತ್ತು ಎಂಬುದು ಅರ್ಥವಾಗುತ್ತದೆ. ಕೇವಲ ಬಾಲರಾಜ್​ರಿಗೆ ಪ್ರಶಸ್ತಿ ಲಭಿಸಿತು ಎಂದರೇ ಅದರ ತೂಕ ಕಮ್ಮಿಯಾಗಬಹುದೇನೋ.. ಕ್ರೈಂ ಕೇಸ್​ಗಳಲ್ಲಿಯೇ ನಿಗೂಢ ಹಾಗೂ ಅಚ್ಚರಿ ಮತ್ತು ಅಷ್ಟೆ ಭೀಬತ್ಸವಾಗಿದ್ದ ಈ ಕೇಸ್​ನ ತನಿಖಾ ವರದಿಯನ್ನು ಒಮ್ಮೆ ಓದಿದರೇ ನೀವೆ ಹುಬ್ಬೇರಿಸಿ ಪೊಲೀಸ್ ಇಲಾಖೆ ಹಾಗೂ ಬಾಲರಾಜ್​ರಂತಹ ಅಧಿಕಾರಿಗಳ ಬಗ್ಗೆ ಹೆಮ್ಮೆ ಪಡುತ್ತೀರಿ..ವೀಕ್ಷಕರೇ ಮುಂದಿನದು, ಪ್ರಕರಣದ ವಿವರ ಮತ್ತು ಅದರ  ಮಾಹಿತಿ ಸ್ವತಃ ಬಾಲ್​ರಾಜ್​ರವರು ವಿವರಿಸಿದ್ದಾರೆ. 

ಭಾಗ ಒಂದು : ಜ್ಞಾನಭಾರತಿ ಠಾಣೆಯ ಗ್ಯಾಂಗ್ ರೇಪ್ ಪ್ರಕರಣ 

2013 ನೇ ಇಸವಿಯಲ್ಲಿ ನಡೆದಿದ್ದ ನ್ಯಾಷನಲ್ ಲಾ ಸ್ಕೂಲ್ ಯೂನಿರ್ವಸಿಟಿ (NLSU)ಗೆ ಸೇರಿದ ವಿದೇಶಿ ವಿದ್ಯಾರ್ಥಿನಿಯೊಬ್ಬರ ಗ್ಯಾಂಗ್ ರೇಪ್ ಪ್ರಕರಣದ ಬಗ್ಗೆ ತಿಳಿಯುವ ಮೊದಲು ಜ್ಞಾನಭಾರತಿ ಪೊಲೀಸ್ ಠಾಣೆಯ ಬಗ್ಗೆ ಕೆಲವು ವಿಷಯಗಳನ್ನು ತಿಳಿಯುವುದು ಬಹಳ ಮುಖ್ಯ. ಬೆಂಗಳೂರು ನಗರದ ಪಶ್ಚಿಮ ವಿಭಾಗದಲ್ಲಿ ಪೊಲೀಸಿಂಗ್ ಕರ್ತವ್ಯ ನಿರ್ವಹಿಸುವುದು ಬಹಳ ಚಾಲೆಂಜಿಂಗ್ ಆಗಿದೆ. ಅಪರಾಧ ಮತ್ತು ಕಾನೂನು ಸುವ್ಯವಸ್ಥೆಯನ್ನ ನಿರ್ವಹಿಸುವುದು ತುಂಬಾ ಕಠಿಣ ಮತ್ತು ಕ್ಲಿಷ್ಟಕರ. ಪಶ್ಚಿಮ ವಿಭಾಗದ ವ್ಯಾಪ್ತಿಯಲ್ಲಿ ಬರುವ ನಗರದ ಜನನಿಬಿಡ ಪ್ರದೇಶಗಳಾದಮೆಜೆಸ್ಟಿಕ್, ಮಾರ್ಕೆಟ್, ಚಿಕ್ಕಪೇಟೆ, ಮುಖ್ಯ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಹೋಟೆಲ್‌ಗಳು ಮತ್ತು ಲಾಡ್ಜ್‌ಗಳು, ಶಾಲಾ ಕಾಲೇಜುಗಳು, ಬೆಂಗಳೂರು ವಿಶ್ವವಿದ್ಯಾನಿಲಯ ಮತ್ತು ಗಾಂಧಿನಗರಗಳಂತಹ ವಾಣಿಜ್ಯ ಕೇಂದ್ರಗಳು ಪೊಲೀಸರಿಗೆ ತಲೆನೋವು ತರುವಂತಹ ವಿಷಯಗಳಾಗಿವೆ.

 ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಬೆಂಗಳೂರು ವಿಶ್ವವಿದ್ಯಾನಿಲಯದ ಆಡಳಿತ ಕಛೇರಿಗಳು, ವಿಶ್ವವಿದ್ಯಾನಿಲಯದ ವಿವಿಧ ವಿಭಾಗದ ಕಟ್ಟಡಗಳು, ವಿದ್ಯಾರ್ಥಿನಿಲಯಗಳು, ತರಗತಿ ಕಟ್ಟಡಗಳು, ಕ್ರೀಡಾಂಗಣಗಳು ಹಾಗು ಇತರೆ ಆಡಳಿತ ಕಟ್ಟಡಗಳು ಸುಮಾರು 800 ಎಕರೆಗೂ ಮೀರಿವ್ಯಾಪ್ತಿಯನ್ನು ಹೊಂದಿರುವ ದಟ್ಟವಾದ ಕಾಡಿನೊಳಗೆ ಬರುತ್ತವೆ. ಸದರಿ ಕಾಡಿಗೆ ಯಾವುದೇ ಕಾಂಪೌಂಡ್ ಆಗಲಿ, ಬೇಲಿಯಾಗಲಿ ಇಲ್ಲದೇ ಇರುವುದರಿಂದ ಮತ್ತು ಕಾಡಿನ ಮೂಲಕ ಅನೇಕ ಮುಖ್ಯರಸ್ತೆಗಳು ಹಾದು ಹೋಗಿರುವುದರಿಂದ ಸದರಿ ಕಾಡಿನಲ್ಲಿ ಸ್ತ್ರೀ-ಪುರುಷರು ಜೋಡಿಯಾಗಿ ವಿಹರಿಸುವುದು ಮತ್ತು ಸೆಕ್ಸ್ ವರ್ಕ‌ಗಳನ್ನು ಈ ಕಾಡಿಗೆ ಕರೆದುಕೊಂಡು ಹೋಗುವುದು ಸಾಮಾನ್ಯವಾಗಿದೆ.

ಇದನ್ನು ಸಹ ಓದಿ : ರೈತರೇ ಎಚ್ಚರ, ಜೇಡಿಮಣ್ಣು ಕೊಟ್ಟು ಗೊಬ್ಬರ ಅಂತಾರೆ ...ಹುಷಾರ್..ಇಲ್ಲಿದೆ ನೋಡಿ ಸಾಕ್ಷಿ 

ಸದರಿ ಕಾಡಿನಲ್ಲಿ ಹೇರಳವಾಗಿ ಗಂಧದ ಮರಗಳಿದ್ದು ಅವುಗಳನ್ನು ಕದಿಯಲು ಮರಗಳ್ಳರು ಸಹ ಸಾಮಾನ್ಯವಾಗಿ ಇದೇ ಕಾಡಿಗೆ ಬರುತ್ತಾರೆ. ಮೇಲಿನ ಎಲ್ಲಾ ಕಾರಣಗಳಿಂದ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಾಗಿದ್ದು ಪೊಲೀಸ್ ಅಧಿಕಾರಿಗಳಿಗೆ ಅಲ್ಲಿ ಕರ್ತವ್ಯ ನಿರ್ವಹಿಸುವುದು ಒಂದು ಸವಾಲಿನ ಕೆಲಸವಾಗಿದೆ. ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುವವಿದ್ಯಾರ್ಥಿಗಳ ಹೊಡೆದಾಟಗಳು ಮತ್ತು ಪ್ರತಿಭಟನೆಗಳಂತಹ ಸೂಕ್ಷ್ಮವಾದಂತಹ ವಿಚಾರಗಳನ್ನು ನಿಭಾಯಿಸುವುದು ಒಂದು ಸವಾಲಿನ ಕೆಲಸವಾಗಿದೆ.

ಇದರ ಜೊತೆಗೆ ದೇಶದಲ್ಲಿಯೇ ಪ್ರತಿಷ್ಟಿತ ಲಾ ಕಾಲೇಜ್ ಎಂದು ಹೆಸರಾಗಿರುವ, ಅಂತರಾಷ್ಟ್ರೀಯ ವಿದ್ಯಾರ್ಥಿಗಳು ಮತ್ತು ಹೊರ ರಾಜ್ಯದ ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ನ್ಯಾಷನಲ್ ಲಾ ಕಾಲೇಜಿನ ಕಟ್ಟಡಗಳು ಸಹ ಜ್ಞಾನಭಾರತಿಠಾಣೆಯ ವ್ಯಾಪ್ತಿಯಲ್ಲಿಯೇ ಬರುತ್ತವೆ. ಹಾಗೂ ಕೇಂದ್ರ ಸರ್ಕಾರದ ಪ್ರತಿಷ್ಠಿತ ಸಂಸ್ಥೆಗಳಾದ NACK &ATOMIC ENERGY RESEARCH CENTER ಗಳೂ ಸಹ ಸದರಿ ಕಾಡಿನ ವ್ಯಾಪ್ತಿಯಲ್ಲಿಯೇ ಇವೆ ಹಾಗಾಗಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಗಣ್ಯರು ಸದರಿ ಸಂಸ್ಥೆಗಳಿಗೆ ಭೇಟಿ ನೀಡುವುದು ಮತ್ತು ವಾಸ್ತವ್ಯ ಮಾಡುವುದು ನಡೆಯುತ್ತಿರುತ್ತದೆ.

ಅವುಗಳ ಬಂದೋಬಸ್ತ್ ಜವಾಬ್ದಾರಿಯೂಸಹ ಜ್ಞಾನಭಾರತಿ ಪೊಲೀಸ್ ಠಾಣೆಯ ಅಧಿಕಾರಿಗಳದ್ದೇ ಆಗಿದೆ. NSLU ದಲ್ಲಿ ವ್ಯಾಸಂಗಕ್ಕಾಗಿ ಬರುವ ಬಹುಪಾಲು ವಿದೇಶಿ ವಿದ್ಯಾರ್ಥಿಗಳು ಮತ್ತು ಅತಿಗಣ್ಯ ವ್ಯಕ್ತಿಗಳ ಮಕ್ಕಳಾಗಿದ್ದು ಅವರನ್ನು ಸಂಬಾಳಿಸುವುದು ಕೂಡ ತಲೆನೋವಿನ ಸಂಗತಿಯಾಗಿದೆ. ವಿದ್ಯಾರ್ಥಿ ಸಮೂಹ ಹೆಚ್ಚಾಗಿರುವುದರಿಂದ ಗಾಂಜಾ ಮತ್ತು ಡ್ರಗ್ಸ್ ಸೇವನೆ ಪ್ರಕರಣಗಳು ಹೇರಳವಾಗಿ ನಡೆಯುತ್ತಿರುತ್ತವೆ.  ಮೇಲಿನ ಎಲ್ಲಾ ಕಾರಣಗಳಿಂದ ಜ್ಞಾನಭಾರತಿ ಪೊಲೀಸ್‌ ಠಾಣೆಯ ಠಾಣಾಧಿಕಾರಿಗಳಿಗೆ ಅತಿ ಹೆಚ್ಚಿನ ಹೊಣೆ ಮತ್ತು ಒತ್ತಡ ಸಾಮಾನ್ಯವಾಗಿಬಿಟ್ಟಿರುತ್ತದೆ ಮತ್ತು ಪಶ್ಚಿಮ ವಿಭಾಗದ ಡಿಸಿಪಿರವರಿಗೆ ಒಂದು ದೊಡ್ಡ ತಲೆನೋವಿನ ವಿಷಯವಾಗಿಬಿಟ್ಟಿದೆ.

ಇದನ್ನು ಸಹ ಓದಿ : ಶಿವಮೊಗ್ಗ ಪೊಲೀಸರಿಂದ ತತ್ತಕ್ಷಣದ ಕಾರ್ಯಾಚರಣೆ/ 20 ಚೆಕ್​ಪೋಸ್ಟ್​ನಲ್ಲಿ 46 ಕೇಸ್​/ ಏನಿದು? ವಿವರ ನೋಡಿ

ಹಾಗಾಗಿ ಸದರಿ ವಿಭಾಗದ ಡಿಸಿಪಿರವರುಗಳು ಜ್ಞಾನಭಾರತಿ ಪೊಲೀಸ್ ಠಾಣೆಯ ಮೇಲೆ ಹೆಚ್ಚಿನ ನಿಗಾವಹಿಸಬೇಕಾಗುತ್ತದೆ. ಆದ್ದರಿಂದ ಸದರಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿಗಳು ಹಗಲು ರಾತ್ರಿ ಶ್ರಮವಹಿಸಿ ಅತ್ಯಂತ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. 2012ನೇ ಸಾಲಿನಲ್ಲಿ ಶ್ರೀಯುತರಾದ ಸಿದ್ದರಾಮಪ್ಪ ಐ.ಪಿ.ಎಸ್‌ ರವರು ಪಶ್ಚಿಮ ವಿಭಾಗದ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆ ಕಾಲಕ್ಕೆ ಪಶ್ಚಿಮ ವಿಭಾಗದ ಜ್ಞಾನಭಾರತಿ, ಕೆಂಗೇರಿ, ಚಂದ್ರಲೇಔಟ್ ಮತ್ತು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗಳಲ್ಲಿ ವಿಪರೀತವಾದ ಸರಗಳ್ಳತನ, ಮನೆಗಳ್ಳತನ, ಅಟೆನ್ನನ್ ಡೈವರ್ಷನ್‌ನಂತಹ ಪ್ರಕರಣಗಳು ಹೆಚ್ಚಿಗೆ ವರದಿಯಾಗುತ್ತಿದ್ದುದರಿಂದ ಸದರಿ ಠಾಣೆಗಳಿಗೆ ಕೈಂ ವಿಭಾಗದಲ್ಲಿ ಅನುಭವವುಳ್ಳ ಇನ್ಸ್‌ಪೆಕ್ಟರ್‌ಗಳ ಅವಶ್ಯಕತೆ ಇದ್ದುದರಿಂದ ಮತ್ತು ಶ್ರೀಯುತರು ಈ ಹಿಂದೆ ಶಿವಮೊಗ್ಗ ಜಿಲ್ಲೆಯಲ್ಲಿ ಅಡಿಷನಲ್ ಎಸ್.ಪಿ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾಲಕ್ಕೆ ನಾನು ತೀರ್ಥಹಳ್ಳಿ ಸಿ.ಪಿ.ಐ ಆಗಿ ಕೆಲಸ ಮಾಡಿದ್ದು, ನನಗೆ ಪರಿಚಿತರಾದ್ದರಿಂದ ಅವರ ಶಿಫಾರಸ್ಸಿನ ಮೇರೆಗೆ ಜ್ಞಾನಭಾರತಿ ಪೊಲೀಸ್ ಠಾಣೆಗೆ ನನ್ನನ್ನು ವರ್ಗಾವಣೆ ಮಾಡಲಾಗಿತ್ತು.

ಸೆಪ್ಟೆಂಬರ್ 2012 ರ ಮೊದಲ ವಾರದಲ್ಲಿ ನಾನು ಜ್ಞಾನ ಭಾರತಿ ಪೊಲೀಸ್ ಠಾಣೆಗೆ ವರದಿ ಮಾಡಿಕೊಂಡಾಗ ಮೇಲಾಧಿಕಾರಿಗಳನ್ನು ಭೇಟಿಯಾಗಲು ತೆರಳಿದ ಸಂದರ್ಭದಲ್ಲಿ ಡಿಸಿಪಿರವರು ಪೊಲೀಸ್ ಠಾಣೆಯ ಸಂಪೂರ್ಣ ಚಿತ್ರಣವನ್ನು ನೀಡಿ ಅಲ್ಲಿದ್ದ ಅವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಸೂಚಿಸಿದರು. ಈ ಹಿಂದೆ ಶಿವಮೊಗ್ಗದಲ್ಲಿ ನಾವಿಬ್ಬರು ಒಟ್ಟಿಗೆ ಕರ್ತವ್ಯ ನಿರ್ವಹಿಸಿದ್ದರಿಂದ ಧೈರ್ಯವಾಗಿ ಪರಿಸ್ಥಿತಿಯನ್ನು ನಿಭಾಯಿಸುವಂತೆ ಹುರಿದುಂಬಿಸಿದರು. 

ಇದನ್ನು ಸಹ ಓದಿ : 15 ವರ್ಷದಿಂದ ಕಾಡು ಬಿಟ್ಟು ಬರದ ರೌಡಿ ಗಣೇಶ ಮಧ್ಯಪ್ರದೇಶಕ್ಕೆ! 6 ಮಂದಿಯನ್ನು ಕೊಂದ ಸಕ್ರೆಬೈಲ್​ ಬಿಡಾರದ ಈ ಆನೆ ಎಷ್ಟೊಂದು ಉಗ್ರ ಸ್ವರೂಪಿ ಗೊತ್ತಾ?

ವಿದ್ಯಾರ್ಥಿನಿಯ ರೇಪ್​ ಪ್ರಕರಣಕ್ಕೂ ಮೊದಲು ನಡೆದಿತ್ತು ವಿಚಿತ್ರ ಘಟನೆ

ನ್ಯಾಷನಲ್ ಲಾ ಕಾಲೇಜಿನ ವಿದ್ಯಾರ್ಥಿನಿಯ ಗ್ಯಾಂಗ್ ರೇಪ್ ಪ್ರಕರಣವನ್ನು ವಿವರಿಸುವ ಮುನ್ನ, ಸದರಿ ಘಟನೆ ನಡೆಯುವ ಸುಮಾರು 15ದಿನಗಳ ಹಿಂದೆ ವರದಿಯಾಗಿದ್ದ ಮತ್ತೊಂದು ಪ್ರಕರಣದ ಬಗ್ಗೆ ಹೇಳುವುದು ತುಂಬಾ ಅವಶ್ಯಕ. ದಿನಾಂಕ: 29.09.2012ರಂದು ಶನಿವಾರ ರಾತ್ರಿ ಸುಮಾರು 10:00 ಗಂಟೆ ಸಮಯದಲ್ಲಿ ಬೆಂಗಳೂರು ವಿಶ್ವವಿದ್ಯಾಯಲದ ಗಾಂಧಿ ಭವನ ರಸ್ತೆಯಲ್ಲಿ ಘಟನೆಯೊಂದು ಸಂಭವಿಸಿತು.

ಗಾಂಧಿ ಭವನದ ರಸ್ತೆಯಲ್ಲಿ ಗಾಂಧಿ ಭವನದ ನಂತರ ಕಾಡಿನೊಳಕ್ಕೆ ಹೋಗುವ ಒಂದು ಮಣ್ಣಿನ ರಸ್ತೆಯಿದ್ದು ರಾತ್ರಿ 10:00ಗಂಟೆ ಸುಮಾರಿಗೆ ಅಂದಾಜು 40ವರ್ಷದ ವ್ಯಕ್ತಿಯೊಬ್ಬ ಅರೆ ಬೆತ್ತಲಾಗಿ ಮಣ್ಣಿನ ರಸ್ತೆಯಿಂದ ಗಾಂಧಿ ಭವನದ ರಸ್ತೆಗೆ ಓಡಿ ಬಂದು ಸದರಿ ರಸ್ತೆಯಲ್ಲಿ ಚಲಿಸುತ್ತಿದ್ದ ದ್ವಿಚಕ್ರ ವಾಹನ ಸವಾರನೊಬ್ಬನಿಗೆ ತನ್ನ ಹೆಂಡತಿಯೊಂದಿಗೆ ತಾನು ಕಾಡಿನಲ್ಲಿದ್ದಾಗ ಕೆಲವು ಯುವಕರು ಬಂದು ತನಗೆ ಹೊಡೆದು ತನ್ನ ಹೆಂಡತಿಯನ್ನು ಎಳೆದುಕೊಂಡು ಹೋಗಿದ್ದಾಗಿಯೂ ತಾನು ಅವರಿಂದ ತಪ್ಪಿಸಿಕೊಂಡು ಓಡಿ ಬಂದಿದ್ದಾಗ್ಯೂ ಅಳುತ್ತ ಹೇಳಿದ್ದು ಸದರಿ ದ್ವಿಚಕ್ರ ವಾಹನದಲ್ಲಿದ್ದ ವ್ಯಕ್ತಿಯು ಪೊಲೀಸ್ ಠಾಣೆಗೆ ಬಂದು ವಿಷಯವನ್ನು ನೇರವಾಗಿ ನನಗೆ ತಿಳಿಸಿದ್ದ. 

ಇದನ್ನು ಸಹ ಓದಿ : ಪ್ರಯಾಣಿಕರ ಗಮನಕ್ಕೆ/ ಶಿವಮೊಗ್ಗ ಟೌನ್​ - ಎಂಜಿಆರ್​ ಚೆನ್ನೈ ಸೆಂಟ್ರಲ್ ಸ್ಪೆಷಲ್​ ಟ್ರೈನ್​ ಸೌಲಭ್ಯ ವಿಸ್ತರಣೆ/ ವಿವರ ಇಲ್ಲಿದೆ ಓದಿ

ನಾನು ಈ ವಿಷಯವನ್ನು ಎಸಿಪಿ ಮತ್ತು ಡಿಸಿಪಿರವರಿಗೆ ತಿಳಿಸಿ ಲಭ್ಯವಿದ್ದ ಸಿಬ್ಬಂದಿಯವರೊಂದಿಗೆ ಕೂಡಲೇ ಗಾಂಧಿ ಭವನ ರಸ್ತೆಗೆ ತೆರಳಿ ಸದರಿ ವ್ಯಕ್ತಿಯನ್ನು ವಿಚಾರಿಸಿದಾಗ ಆ ಘಟನೆಯ ಹಿಂದೆ ಒಂದು ದೊಡ್ಡ ಕಥೆಯೇ ಬಿಚ್ಚಿಕೊಳ್ಳುತ್ತ ಹೋಯಿತು. ಸದರಿ ವ್ಯಕ್ತಿಯು ಒಬ್ಬ ಆಟೋ ಡ್ರೈವರ್ ಇದ್ದು ಸ್ವಂತ ಆಟೋವನ್ನು ಓಡಿಸಿ ಅದರಿಂದ ಬಂದ ಆದಾಯದಿಂದ ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಸಾಕುತ್ತಿದ್ದ.

ವಿಪರೀತವಾಗಿ ಬಡ್ಡಿ ಸಾಲ ಮಾಡಿಕೊಂಡುದ್ದರಿಂದ 06 ತಿಂಗಳಿನಿಂದ ಮನೆ ಬಾಡಿಗೆ ಕಟ್ಟದೆ ಇದ್ದುರಿಂದ ಆ ಮನೆಯ ಮಾಲೀಕ ಮನೆಯನ್ನು ಖಾಲಿ ಮಾಡಿಸಿದ್ದ ಮತ್ತು 06 ತಿಂಗಳ ಬಾಡಿಗೆ ಎಂದು ಅಡ್ವಾನ್ಸ್ ಹಣವನ್ನು ವಾಪಸ್ಸು ಕೊಡಲಿಲ್ಲವಾದ್ದರಿಂದ ಆ ವ್ಯಕ್ತಿಗೆ ಬೇರೊಂದು ಬಾಡಿಗೆ ಮನೆ ಮಾಡಲು ಸಾಧ್ಯವಾಗಲಿಲ್ಲ. ಆಟೋ ಚಾಲಕನ ಹೆಂಡತಿಯು ತನ್ನ ಇಬ್ಬರು ಮಕ್ಕಳೊಂದಿಗೆ ಮನೆಯಲ್ಲಿದ್ದ ಸ್ವಲ್ಪ ಸಾಮಾನುಗಳನ್ನು ತೆಗೆದುಕೊಂಡು ಚಂದ್ರ ಲೇಔಟ್‌ನಲ್ಲಿದ್ದ ತನ್ನ ಅಕ್ಕನ ಮನೆಯನ್ನು ಸೇರಿಕೊಂಡಿದ್ದಳು.

ಆಟೋಚಾಲಕ ಆಟೋವನ್ನು ಬಾಡಿಗೆಗೆ ಓಡಿಸಿಕೊಂಡು ರಾತ್ರಿಯಲ್ಲಿ ಆಟೋದಲ್ಲಿಯೇ ಮಲಗುತ್ತಿದ್ದ ಮತ್ತು ದಿನನಿತ್ಯದ ಸ್ನಾನ ಮತ್ತು ನಿತ್ಯಕರ್ಮಗಳಿಗೆ ಸಾರ್ವಜನಿಕ ಶೌಚಾಲಯಗಳನ್ನು ಬಳಸುತ್ತಿದ್ದ. ಹೆಂಡತಿಯ ಅಕ್ಕನಿಗೆ ಮತ್ತು ಆಟೋ ಚಾಲಕನಿಗೆ ಮನಸ್ತಾಪವಿದ್ದುದರಿಂದ ಅವರ ಮನೆಗೆ ಹೋಗುತ್ತಿರಲಿಲ್ಲ. ಆದ್ದರಿಂದ ಆಗಾಗ ರಾತ್ರಿಯ ಸಮಯದಲ್ಲಿ ತನ್ನ ಹೆಂಡತಿಗೆ ಪೋನ್ ಮಾಡಿ ಚಂದ್ರ-ಲೇಔಟ್‌ನ ಬಸ್‌ ಸ್ಟ್ಯಾಂಡ್‌ಗೆ ಕರೆಸಿಕೊಂಡು ಅವಳನ್ನು ತನ್ನ ಆಟೋದಲ್ಲಿ ಕೂರಿಸಿಕೊಂಡು ಹತ್ತಿರದಲ್ಲಿಯೇ ಇರುವ ಬೆಂಗಳೂರು ವಿಶ್ವವಿದ್ಯಾನಿಲಯದ ಕಾಡಿಗೆ, ಗಾಂಧಿ ಭವನ ರಸ್ತೆಯ ಮುಖಾಂತರ ಹೋಗಿ ಸ್ವಲ್ಪ ಸಮಯ ತನ್ನ ಹೆಂಡತಿಯೊಂದಿಗೆ ಕಾಲ ಕಳೆದುಪನಃ ಚಂದ್ರಾ ಲೇಔಟ್‌ನ ಬಸ್‌ಸ್ಟಾಂಡ್‌ಗೆ ಬಿಟ್ಟು ಹೋಗುವ ಅಭ್ಯಾಸ ಮಾಡಿಕೊಂಡಿದ್ದ. ಸುಮಾರು 06 ತಿಂಗಳಿನಿಂದ ಇದೇ ರೀತಿ ಅವರ ಜೀವನ ಸಾಗಿತ್ತು.

 ಇದನ್ನು ಸಹ ಒದಿ :ಜನ ಸ್ವಯಂಸೇವಕರಾದ್ರು/ ರಾಜಕಾರಣಿ ಡಾಕ್ಟರ್​ ಆದ್ರು/ ಸಾಗರಿಕರ ಮಾನವೀಯತೆಗೆ ಸಾಕ್ಷಿಯಾದ ಆಕ್ಸಿಡೆಂಟ್

ದುರದೃಷ್ಟವಷಾತ್ ಸದರಿ ಆಟೋ ಚಾಲಕ ಈ ಬಾರಿ ಈ ಕೆಲಸಕ್ಕಾಗಿ ದಿನಾಂಕ:29/09/2012 ರ ಶನಿವಾರದ ರಾತ್ರಿಯನ್ನು ಆಯ್ದುಕೊಂಡಿದ್ದ.ಯಥಾಪ್ರಕಾರ ಆ ದಿನ ರಾತ್ರಿ ಸುಮಾರು 9:00 ಗಂಟೆ ಸಮಯದಲ್ಲಿ ತನ್ನ ಹೆಂಡತಿಯೊಂದಿಗೆ ಗಾಂಧಿ ಭವನದ ಪಕ್ಕದಲ್ಲಿರುವ ಕಾಡಿಗೆ ಹೋಗುವ ಕಚ್ಚಾ ರಸ್ತೆಯಲ್ಲಿ ಸುಮಾರು 100 ಮೀಟರ್ ಕಾಡಿನ ಒಳಕ್ಕೆ ಹೋಗಿ ಕತ್ತಲೆಯಲ್ಲಿ ಆಟೋವನ್ನು ನಿಲ್ಲಿಸಿ ಗಂಡ ಹೆಂಡತಿಯರಿಬ್ಬರು ಜೊತೆಯಲ್ಲಿದ್ದಾಗ ಇದಕ್ಕಿದ್ದಂತೆ 07 ರಿಂದ 08 ಜನ ಅವರನ್ನ ಸುತ್ತುವರೆದು ಗಂಡನಿಗೆ ಕೈಗಳಿಂದ ಹೊಡೆದು ಹೆಂಡತಿಯನ್ನು ಅವನಿಂದ ಪ್ರತ್ಯೇಕಿಸಿ ಕಾಡಿನೊಳಕ್ಕೆ ಎಳೆದುಕೊಂಡು ಹೋಗಿದ್ದರು. ಆಟೋಚಾಲಕನು ಹೆದರಿಕೊಂಡು ತನ್ನ ಬಟ್ಟೆಯನ್ನು ಮತ್ತು ಆಟೋವನ್ನು ಅಲ್ಲಿಯೇ ಬಿಟ್ಟು ಗಾಂಧಿಭವನದ ಮುಖ್ಯರಸ್ತೆಗೆ ಅರೆನಗ್ನವಾಗಿ ಓಡಿಬಂದು ವಿಷಯವನ್ನು ಆ ದಾರಿಯಲ್ಲಿ ಬರುತ್ತಿದ್ದ ಮೋಟಾರ್ ಸೈಕಲ್ ಸವಾರನಿಗೆ ಗಾಬರಿಯಿಂದ ಅಳುತ್ತ ತಿಳಿಸಿದ್ದ.

ಕಿಡ್ನ್ಯಾಪ್ ಆದವಳು ಮನೆಯಲ್ಲಿಯೇ ಸಿಕ್ಕಿದ್ದಳು

ನಾನು ಮತ್ತು ನನ್ನ ಸಿಬ್ಬಂದಿಯವರು ಟಾರ್ಚ್‌ಗಳನ್ನು ತೆಗೆದುಕೊಂಡು ಆಟೋ ಓಡಿಸಿಕೊಂಡು ಹೋಗಿದ್ದ ರಸ್ತೆಯಲ್ಲಿಯೇ ಆಟೋ ಚಾಲಕನ ಹೆಂಡತಿಯನ್ನು ಹುಡುಕಲು ಪ್ರಾರಂಭಿಸಿದ್ದು ಆ ಸಮಯಕ್ಕೆ ಬೆಂಗಳೂರು ನಗರದ ಮೇಯರ್‌ ಮತ್ತು ಚಂದ್ರಾ ಲೇಔಟ್‌ ಕಾರ್ಪೊರೇಟರ್ ಆಗಿದ್ದ ಶ್ರೀಮತಿ ಶಾಂತಮ್ಮರವರು ಈ ಘಟನೆಯ ಬಗ್ಗೆ ಮಾಹಿತಿ ತಿಳಿದು ನೂರಾರು ಜನ ಸಾರ್ವಜನಿಕರೊಂದಿಗೆ ಸ್ಥಳಕ್ಕೆ ಬಂದರು ಮತ್ತು ನನ್ನನ್ನು ಸಂಪರ್ಕಿಸಿ ಆಟೋ ಚಾಲಕನ ಹೆಂಡತಿಯನ್ನು ಕಾಡಿನಲ್ಲಿ ಹುಡುಕಲು ತಮ್ಮ ಜೊತೆಯಲ್ಲಿ ಬಂದಿದ್ದ ಸಾರ್ವಜನಿಕರನ್ನು ಉಪಯೋಗಿಸಿಕೊಳ್ಳುವಂತೆ ಕೇಳಿಕೊಂಡರು.

ಇದನ್ನು ಸಹ ಓದಿ : ಪ್ರಯಾಣಿಕರ ಗಮನಕ್ಕೆ/ ಶಿವಮೊಗ್ಗ ಟೌನ್​ - ಎಂಜಿಆರ್​ ಚೆನ್ನೈ ಸೆಂಟ್ರಲ್ ಸ್ಪೆಷಲ್​ ಟ್ರೈನ್​ ಸೌಲಭ್ಯ ವಿಸ್ತರಣೆ/ ವಿವರ ಇಲ್ಲಿದೆ ಓದಿ

ನಾನು ಸದರಿ ಸಾರ್ವಜನಿಕರನ್ನು 04 ತಂಡಗಳನ್ನಾಗಿ ವಿಂಗಡಿಸಿ ಒಂದೊಂದು ತಂಡಕ್ಕೆ ಒಬ್ಬೊಬ್ಬ ಪೊಲೀಸ್ ಸಿಬ್ಬಂದಿಯನ್ನು ನೇಮಿಸಿ ಬೇರೆ ಬೇರೆ ಸ್ಥಳಗಳಲ್ಲಿ ಕಾಡಿನೊಳಗೆ ಹುಡುಕುವಂತೆ ಕಳುಹಿಸಿಕೊಟ್ಟೆನು. ಸ್ವಲ್ಪ ಸಮಯದ ನಂತರ ಚಂದ್ರಾ ಲೇಔಟ್‌ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಆದ ಶ್ರೀ ನಾಗರಾಜ್ ರವರು ಹಾಗೂ ಕೆಂಗೇರಿ ಪೊಲೀಸ್ ಇನ್ಸ್ ಪೆಕ್ಟರ್ ಆಗಿದ್ದ ಸತ್ಯನಾರಾಯಣ್ ರವರು ಡಿಸಿಪಿರವರ ಸೂಚನೆಯ ಮೇರೆಗೆ ತಮ್ಮಲ್ಲಿ ಲಭ್ಯವಿದ್ದ ಸಿಬ್ಬಂದಿಯೊಂದಿಗೆ ನಮ್ಮನ್ನು ಸೇರಿಕೊಂಡರು. ನಾವೆಲ್ಲರೂ ಸೇರಿ ಮಧ್ಯರಾತ್ರಿ 1:00 ಗಂಟೆಯವರೆಗೆ ಸಂಪೂರ್ಣವಾಗಿ ಕಾಡಿನಲ್ಲಿ ಕೊಂಬಿಂಗ್ ಮಾಡಿದರೂ ಆಟೊ ಚಾಲಕನ ಹೆಂಡತಿಯು ಪತ್ತೆಯಾಗಲಿಲ್ಲ.

ಹುಡುಕಲು ಬಂದಿದ್ದ ಮೇಯರ್ ಮತ್ತು ಸಾರ್ವಜನಿಕರು ನಿರಾಸೆಯಿಂದ ವಾಪಸ್ಸು ತೆರಳಿದರು. ನಾನು ಮತ್ತು ನನ್ನ ಜೊತೆಯಲ್ಲಿದ್ದ ಅಧಿಕಾರಿಗಳು ಮುಂದೆ ಏನು ಮಾಡಬೇಕೆಂದು ಚರ್ಚಿಸುತ್ತಿದ್ದಾಗ ಇದ್ದಕಿದ್ದಂತೆ ನನಗೆ ಆಟೋ ಚಾಲಕನ ಹೆಂಡತಿಯ ಅಕ್ಕನ ಮನೆ ಕಾಡಿನ ಹತ್ತಿರದಲ್ಲಿರುವ ಚಂದ್ರಾಲೇಔಟ್‌ನಲ್ಲಿರುವುದು ನೆನಪಿಗೆ ಬಂತು. ಅಲ್ಲಿ ಒಮ್ಮೆ ಪರಿಶೀಲಿಸೋಣ ಎಂದು ತೀರ್ಮಾನಿಸಿ, ಆಟೋ ಚಾಲಕನನ್ನು ಮತ್ತು ಚಂದ್ರಾ ಲೇಔಟ್‌ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಆಗಿದ್ದ ಶ್ರೀ ನಾಗರಾಜ್ ರವರನ್ನು ಜೊತೆಯಲ್ಲಿ ಕರೆದುಕೊಂಡು ಆಟೋ ಚಾಲಕನ ಹೆಂಡತಿಯ ಅಕ್ಕನ ಮನೆಗೆ ಹೋಗಿ ನೋಡಿದಾಗ ಆಕೆ ಅಲ್ಲಿಯೇ ಇದ್ದಳು. ನಮಗೆ ಆಶ್ಚರ್ಯವಾಗಿ ಏನು ನಡೆಯಿತು ಎಂದು ವಿಚಾರಿಸಿದಾಗ ಮತ್ತೊಂದು ಆಶ್ಚರ್ಯಕರ ಕಥೆ ಬಿಚ್ಚಿಕೊಳ್ಳತೊಡಗಿತು.

 ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

ನಡೆದಿದ್ದು ನಡೆಯದ ಹಾಗೆ ಬೇರೆನೋ ನಡೆದಿತ್ತು

ಗಂಡ ಹೆಂಡತಿ ಇಬ್ಬರು ಒಟ್ಟಿಗೆ ಇದ್ದಾಗ ಕತ್ತಲಲ್ಲಿ ಕಾಡಿನಿಂದ ಬಂದ 07 ರಿಂದ 08 ಜನ ಯುವಕರು ಅವರನ್ನು ಸುತ್ತುವರೆದು ಗಂಡನನ್ನು ಬಲವಂತವಾಗಿ ಹೆಂಡತಿಯಿಂದ ಬೇರ್ಪಡಿಸಿ ಹೆಂಡತಿಯನ್ನು ಕಾಡಿನ ಒಳಕ್ಕೆ ಬಹುದೂರಎಳೆದುಕೊಂಡು ಹೋಗಿದ್ದಾಗಿಯೂ ಮತ್ತು ಆಕೆ ಹೇಳಿದ ಪ್ರಕಾರ ಅವರ ಕುತ್ತಿಗೆಯಲ್ಲಿದ್ದ ಮಾಂಗಲ್ಯದ ಸರವನ್ನು ಮತ್ತು ಕಿವಿಯಲ್ಲಿದ್ದ ಓಲೆಯನ್ನು ಬಿಚ್ಚಿಸಿಕೊಂಡು ಆಕೆಯನ್ನು ಕಾಡಿನ ಇನ್ನೊಂದು ಪಕ್ಕದಲ್ಲಿರುವ ವಿಶ್ವವಿದ್ಯಾನಿಲಯದ ವಸತಿನಿಲಯಗಳ ರಸ್ತೆಗೆ ಬಿಟ್ಟಿದಾಗ್ಯೂ ಹಾಗೂ ತಾನು ಆ ರಸ್ತೆಯಲ್ಲಿ ಬರುತ್ತಿದ್ದ ಮೋಟಾರ್ ಸೈಕಲ್ ಸವಾರನಿಗೆ ವಿಷಯ ತಿಳಿಸಿ ನನ್ನನ್ನು ಚಂದ್ರಾ ಲೇಔಟ್‌ನಲ್ಲಿರುವ ಅಕ್ಕನ ಮನೆಗೆ ಬಿಡುವಂತೆ ಕೇಳಿಕೊಂಡಾಗ ಮೋಟಾರ್ ಸೈಕಲ್ ಸವಾರನು ತನ್ನನ್ನು ಅಕ್ಕನ ಮನೆಗೆ ತಂದು ಬಿಟ್ಟಿದ್ದಾಗಿ ತಿಳಿಸಿದ್ದಳು. ನಾನು ಆಕೆಗೆ ತನ್ನನ್ನು ಎಳೆದೊಯ್ದ ಯುವಕರ ಭಾಷೆ, ವಯಸ್ಸು ಹಾಗೂ ಅವರು ಧರಿಸಿದ್ದ ಉಡುಪುಗಳ ಬಗ್ಗೆ ವಿಚಾರಿಸಿದಾಗ ಆಕೆ ಅವರೆಲ್ಲರೂ ಶರ್ಟ್ ಮತ್ತು ಪ್ಯಾಂಟ್ ಹಾಕಿಕೊಂಡಿದ್ದು ಸುಮಾರು 20 ರಿಂದ 25 ವಯಸ್ಸಿನ ಯುವಕರಾಗಿದ್ದರು. ಅವರು ಯಾವುದೇ ಭಾಷೆ ಮಾತನಾಡದೇ ಕೈಸನ್ನೆ ಮಾಡುತ್ತಿದ್ದರು ಎಂದು ತಿಳಿಸಿದ್ದರು.

ಇದನ್ನು ಸಹ ಓದಿ : ಶಿವಮೊಗ್ಗ ಪೊಲೀಸರಿಂದ ತತ್ತಕ್ಷಣದ ಕಾರ್ಯಾಚರಣೆ/ 20 ಚೆಕ್​ಪೋಸ್ಟ್​ನಲ್ಲಿ 46 ಕೇಸ್​/ ಏನಿದು? ವಿವರ ನೋಡಿ

ನಮಗೆ ಆಕೆ ಹೇಳುತ್ತಿದ್ದ ಮಾತುಗಳಲ್ಲಿ ನಂಬಿಕೆ ಬರಲಿಲ್ಲ. ನಾವು ಆಕೆಯನ್ನು ಆ ಯುವಕರು ಏನಾದರೂ ಹಲ್ಲೆ ಅಥವಾ ಅತ್ಯಾಚಾರ ಮಾಡಿದರೆ ಎಂದು ಪ್ರಶ್ನಿಸಿದಾಗ ಆಕೆ ಖಡಾಖಂಡಿತವಾಗಿ ಅಥರದ್ದು ಏನೂ ಆಗಿಲ್ಲ ಮತ್ತು ಅವರು ನನ್ನ ಮೇಲೆ ಯಾವುದೇ ರೀತಿ ಹಲ್ಲೆ ಮಾಡಿಲ್ಲ ಮತ್ತು ಯಾವುದೇ ಗಾಯಗಳು ನನ್ನ ದೇಹದ ಮೇಲೆ ಆಗಿರುವುದಿಲ್ಲವೆಂದು ತಿಳಿಸಿದರು. ನಮಗೆ ನಂಬಿಕೆ ಬರಲಿಲ್ಲ ಹಾಗಾಗೀ ಆಟೋ ಚಾಲಕನಿಗೆ ಹೇಳಿ ಪ್ರತ್ಯೇಕವಾಗಿ ತನ್ನ ಹೆಂಡತಿಯೊಂದಿಗೆ ಮಾತನಾಡಿನಿಜವಾಗಿಯೂ ನಡೆದದ್ದು ಏನು ಎಂದು ತಿಳಿದುಕೊಳ್ಳುವಂತೆ ಹೇಳಿದಾಗ, ಅವರಿಬ್ಬರು ಸುಮಾರು ಅರ್ಧ ಗಂಟೆ ಪ್ರತ್ಯೇಕವಾಗಿ ಮಾತನಾಡಿದ ಮೇಲೆ ಆಕೆ ನಿಜ ಹೇಳುತ್ತಿದ್ದಾಳೆ ಬೇರೆ ಏನು ನಡೆದಿಲ್ಲವೆಂದು ಆತನೂ ಕೂಡ ನಮಗೆ ತಿಳಿಸಿದನು.

ಬೇರೆ ದಾರಿಯಿಲ್ಲದೆ ಸದರಿ ಮಹಿಳೆಯನ್ನು ದೂರು ನೀಡುವಂತೆ ಕೇಳಿಕೊಂಡಾಗ ಆಕೆ ತನ್ನ ಮೈ ಮೇಲಿದ್ದ ಒಡವೆಗಳು ನಕಲಿ ಆಭರಣಗಳಾಗಿದ್ದು ಚಿನ್ನದ ಆಭರಣಗಳಾಗಿರಲಿಲ್ಲ ಹಾಗಾಗಿ ನಮಗೆ ಯಾವುದೇ ನಷ್ಟ ಆಗಿಲ್ಲ ಆದ್ದರಿಂದ ದೂರು ನೀಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದು, ನಾವು ಸುಮಾರುಒಂದು ಗಂಟೆಗಳ ಕಾಲದಂಪತಿಗಳೊಂದಿಗೆ ಮಾತನಾಡಿ ದೂರು ನೀಡಲು ಒಪ್ಪಿಸಿ ಅದೇ ದಿನ ರಾತ್ರಿ ಹೆಂಡತಿಯಿಂದ ದೂರು ಪಡೆದು ಒಂದು ಡಕಾಯಿತಿ ಪ್ರಕರಣವನ್ನು ದಾಖಲು ಮಾಡಿ ತನಿಖೆ ಕೈಗೊಂಡೆನು. ಆಕೆಯನ್ನು ತಪಾಸಣೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲುಎಷ್ಟೇ ಪ್ರಯತ್ನಿಸಿದರೂ ಆ ಮಹಿಳೆ ಆಸ್ಪತ್ರೆಗೆ ಬರಲು ಒಪ್ಪಲಿಲ್ಲ.

ವಿಶೇಷ ಸೂಚನೆ : ಓದುಗರೆ, ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ನಡೆದಿದ್ದ ರೇಪ್​ ಕೇಸ್​ನ ಪೂರ್ಣ ವಿವರವನ್ನು ಸರಣಿ ರೂಪದಲ್ಲಿ ಪ್ರಕಟಿಸುತ್ತಿದ್ದು, ಸ್ವತಃ ಡಿವೈಎಸ್​ಪಿ ಬಾಲರಾಜ್​ರವರು ತಮ್ಮ ತನಿಖೆಯ ಬಗ್ಗೆ ಬರೆದ ಬರಹ ಇದಾಗಿದೆ. ಈ ಸರಣಿಯ ಇನ್ನೊಂದು ಭಾಗ ನಿರೀಕ್ಷಿಸಿ... 

 ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link