15 ವರ್ಷದಿಂದ ಕಾಡು ಬಿಟ್ಟು ಬರದ ರೌಡಿ ಗಣೇಶ ಮಧ್ಯಪ್ರದೇಶಕ್ಕೆ! 6 ಮಂದಿಯನ್ನು ಕೊಂದ ಸಕ್ರೆಬೈಲ್​ ಬಿಡಾರದ ಈ ಆನೆ ಎಷ್ಟೊಂದು ಉಗ್ರ ಸ್ವರೂಪಿ ಗೊತ್ತಾ?

ಇನ್ನು ಮಸ್ತಿಗೆ ಬಂದ ಸಂದರ್ಭದಲ್ಲಿ ಗಣೇಶನ ಹತ್ತಿರ ಮಾವುತರು ಹೋಗೋದಕ್ಕೆ ಸಾಧ್ಯನೇ ಇಲ್ಲ. ಆರೇಳು ಮಾವುತರನ್ನು ಮೈಮೇಲೆ ಕೂರಿಸಿಕೊಂಡು ಆನಂತರ ಕೆಡವಿದ್ದ ಈ ಗಣೇಶ. ಮಾವುತರು ಎಷ್ಟೇ ಎಚ್ಚರಿಕೆಯಿಂದಿದ್ರೂ, ಯಾಮಾರಿಸಿ ಸೊಂಡಲನ್ನು ಬೀಸುವ ಕೆಟ್ಟ ಗುಣವನ್ನು ಹೊಂದಿದ್ದಾನೆ,

ಆತ ಹದಿನೈದು ವರ್ಷದಿಂದ ಕಾಡಿನ ವನವಾಸದಲ್ಲಿಯೇ ಇದ್ದಾನೆ.  ಕಾಡು ಸೇರಿದ ಮೇಲೆ  ಸೌಮ್ಯ ರೂಪಕ್ಕೆ ಮರುಳುತ್ತಾನೆ ಅನ್ಕೊಂಡ್ರೆ. ಆತ ವರ್ಷದಿಂದ ವರ್ಷಕ್ಕೂ, ಮೃಗೀಯವಾಗಿ ವರ್ತಿಸುತ್ತಿದ್ದಾನೆ. ತನ್ನನ್ನು ಸಾಕಿ ಸಲುಹಿದ ನಾಲ್ಕು ಮಂದಿಯ ನೆತ್ತರನ್ನೇ ಹರಿಸಿದ್ದಾನೆ. ನಿಯತ್ತಿಲ್ಲದ ಈತ ಸ್ಕೆಚ್ ಹಾಕ್ದಾ ಅಂದ್ರೆ, ಎದುರಿಗೆ ಯಾರಿದ್ದರೂ ಸಹ ಮಟಾಷ್ ಗ್ಯಾರಂಟಿ. ರಾಜ್ಯದ ಎಲ್ಲೆಡೆ ಇವನನ್ನು ವರ್ಗಾಯಿಸಿದ್ರೂ, ಅಲ್ಲಿ ಈತನಿಂದ  ಪ್ರಾಣ ಹಾನಿಯಾಗುತ್ತೇ ಹೊರತು, ಅವನು ಮಾತ್ರ ಬದಲಾಗಿಲ್ಲ. ಈತನನ್ನು ಸರಿದಾರಿಗೆ ತರಲು ಹದಿನೈದು ವರ್ಷಗಳಿಂದ ಪ್ರಯತ್ನಿಸಿದರೂ ಗಣೇಶನನ್ನ ಸರಿದಾಗಿ ತರಲು ಸಾಧ್ಯವಾಗಿಲ್ಲ. ಇದೀಗ ವಿಶೇಷ ಅಂದರೆ, ಉಗ್ರಸ್ವರೂಪಿ ರೌಡಿ ಗಣೇಶನನ್ನ ಮಧ್ಯಪ್ರದೇಶಕ್ಕೆ ಕಳುಹಿಸಲಾಗುತ್ತಿದೆಯಂತೆ. ಇನ್ನೂ ಅಲ್ಲೇನು ಅದ್ವಾನ ಕಾದಿಯೋ ಗೊತ್ತಿಲ್ಲ

ಸಕ್ರೆಬೈಲ್​ ಆನೆ ಬಿಡಾರವೂ ಸೇರಿದಂತೆ, ರಾಜ್ಯ ವಿವಿಧ ಆನೆ ಬಿಡಾರದಿಂದ ಒಟ್ಟು 14 ಆನೆಗಳು ಮಧ್ಯಪ್ರದೇಶಕ್ಕೆ ತೆರಳುತ್ತಿವೆ. ಈ ಪೈಕಿ ಸಕ್ರೆಬೈಲ್​ ಆನೆ ಬಿಡಾರದಿಂದ ಒಟ್ಟು ನಾಲ್ಕು ಆನೆಗಳು ರವಾನೆಯಾಗಲಿದೆ. ಅದರಲ್ಲಿ ರೌಡಿ ಗಣೇಶನ ಹೆಸರು ಸಹ ಇದೆ. ಇನ್ನೂ ಆನೆ ಶಿಫ್ಟಿಂಗ್​ ಬಗ್ಗೆ ಫಸ್ಟ್​ ರಿಪೋರ್ಟ್​ ಮಾಡಿದ್ದು ಮಲೆನಾಡು ಟುಡೆ.ಕಾಂ. ನಮ್ಮ ವರದಿಯ ಲಿಂಕ್​ ಇಲ್ಲಿದೆ ಓದಿ  :ಮೊದಲು 12 ನಂತರ 4 ಆನೆಗಳು ಉತ್ತರ ಭಾರತಕ್ಕೆ ಶಿಫ್ಟ್​, ಈಗ 14 ಆನೆ ಮಧ್ಯಪ್ರದೇಶಕ್ಕೆ ರವಾನಿಸಲು ಸಿದ್ಧತೆ! ಸಾಕಾನೆ ಸ್ಥಳಾಂತರದ ಹಿಂದಿರೋ ಮಸಲತ್ತು ಆದರೂ ಏನು?

ರೌಡಿಗಣೇಶನ ಇತಿಹಾಸ ಇಲ್ಲಿದೆ ಓದಿ 

ನೋಡಲು ಸೌಮ್ಯ ಸ್ವಭಾವದಂತೆ ಕಾಣುವ ಗಣೇಶನ ಬಳಿ ಮಾವುತ ಕಾವಾಡಿಗಳು ಸಹ ಹೋಗಲು ಹೆದರುತ್ತಾರೆ. ಯಾಕೆಂದ್ರೆ, ಈತ ಸ್ಕೆಚ್ ಹಾಕಿ ಯಾವ ರೀತಿ ಯಾಮಾರಿಸಿ ಸೊಂಡಿಲು ಬೀಸ್ತಾನೋ ಗೊತ್ತಿಲ್ಲ. ಈತನ ದುಷ್ಕೃತ್ಯಕ್ಕೆ ಈವರೆಗೂ ಬಲಿಯಾದ ಮಾವುತ ಕಾವಾಡಿ ಹಾಗು ಜನರ ಸಂಖ್ಯೆ ಬರೋಬ್ಬರಿ ಆರು.

ಇದನ್ನು ಸಹ ಓದಿ : ರೈತರೇ ಎಚ್ಚರ, ಜೇಡಿಮಣ್ಣು ಕೊಟ್ಟು ಗೊಬ್ಬರ ಅಂತಾರೆ ...ಹುಷಾರ್..ಇಲ್ಲಿದೆ ನೋಡಿ ಸಾಕ್ಷಿ 

1997 ರಲ್ಲಿ ಬನ್ನೇರುಘಟ್ಟದಿಂದ ಸಕ್ರೆಬೈಲು ಆನೆ ಬಿಡಾರಕ್ಕೆ ಬಂದ ಗಣೇಶ, ಈವರೆಗೂ ಶೆಟ್ಟಿಹಳ್ಳಿ ಕಾಡಿನಲ್ಲಿಯೇ ವಾಸ್ತವ್ಯ ಹೂಡಿದ್ದಾನೆ. ಸಕ್ರೆಬೈಲು ಆನೆ ಬಿಡಾರಕ್ಕೆ ಬರುವ ಮುನ್ನ ರಾಜ್ಯದ ಬಹುತೇಕ ಎಲ್ಲಾ ಬಿಡಾರಗಳಲ್ಲಿದ್ದ ಗಣೇಶನನ್ನು ನೋಡಿಕೊಳ್ಳಲು ಹಿಂದೇಟಾಕಿದ ಮಾವುತ ಕಾವಾಡಿಗಳಿಂದಾಗಿ ಗಣೇಶ ಅಂತಿಮವಾಗಿ ಸಕ್ರೆಬೈಲಿಗೆ ಸ್ಥಳಾಂತರಿಸಲ್ಪಟ್ಟಿದ್ದ. ಗಣೇಶ ತನಗೆ ಸಾಕಿ ಸಲುಹಿದ ಮೊದಲ ಮಾವುತನನ್ನೇ ಬಲಿತೆಗೆದುಕೊಂಡ ಕಿರಾತಕ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದಾನೆ. ಸಾಮಾನ್ಯವಾಗಿ ಆನೆಗಳು ಸೌಮ್ಯ ಸ್ವಭಾವ ಹೊಂದಿರುತ್ತವೆ. ಮನುಷ್ಯನಷ್ಟೆ ಸೂಕ್ಷ್ಮ ಸಂವೇಧಿ ಪ್ರಾಣಿಯಾಗಿವೆ. ಆದರೆ ಆನೆಗಳ ಪಾಲಿಗೆ ಶಾಪವೆಂಬಂತಿರುವ ಗಣೇಶನ ಗುಣವೇ ವಿಕೃತವಾಗಿದೆ.

ಇದನ್ನು ಸಹ ಓದಿ : ಪ್ರಯಾಣಿಕರ ಗಮನಕ್ಕೆ/ ಶಿವಮೊಗ್ಗ ಟೌನ್​ - ಎಂಜಿಆರ್​ ಚೆನ್ನೈ ಸೆಂಟ್ರಲ್ ಸ್ಪೆಷಲ್​ ಟ್ರೈನ್​ ಸೌಲಭ್ಯ ವಿಸ್ತರಣೆ/ ವಿವರ ಇಲ್ಲಿದೆ ಓದಿ

ಈತನಿಗೆ ಬಣ್ಣದ ಉಡುಪುಗಳು ಕಂಡರೆ ಆಗೋದಿಲ್ಲ. ಗುಂಪಿನಲ್ಲಿರುವ ಜನರನ್ನು ಕಂಡರೆ ಎರಗಿ ಬೀಳ್ತಾನೆ. ರಸ್ತೆಯಲ್ಲಿ ವಾಹನ ಸದ್ದು ಕೇಳಿದ್ರೆ ಘೀಳಿಡ್ತಾನೆ. ಇನ್ನು ಮಸ್ತಿಗೆ ಬಂದ ಸಂದರ್ಭದಲ್ಲಿ ಗಣೇಶನ ಹತ್ತಿರ ಮಾವುತರು ಹೋಗೋದಕ್ಕೆ ಸಾಧ್ಯನೇ ಇಲ್ಲ. ಆರೇಳು ಮಾವುತರನ್ನು ಮೈಮೇಲೆ ಕೂರಿಸಿಕೊಂಡು ಆನಂತರ ಕೆಡವಿದ್ದ ಈ ಗಣೇಶ. ಮಾವುತರು ಎಷ್ಟೇ ಎಚ್ಚರಿಕೆಯಿಂದಿದ್ರೂ, ಯಾಮಾರಿಸಿ ಸೊಂಡಲನ್ನು ಬೀಸುವ ಕೆಟ್ಟ ಗುಣವನ್ನು ಹೊಂದಿದ್ದಾನೆ.

ಇದನ್ನು ಸಹ ಒದಿ :ಜನ ಸ್ವಯಂಸೇವಕರಾದ್ರು/ ರಾಜಕಾರಣಿ ಡಾಕ್ಟರ್​ ಆದ್ರು/ ಸಾಗರಿಕರ ಮಾನವೀಯತೆಗೆ ಸಾಕ್ಷಿಯಾದ ಆಕ್ಸಿಡೆಂಟ್

ಕಿಲ್ಲರ್ ಗಣೇಶ

ಮೊಹಮ್ಮದ್ ಆಲಿ ಎಂಬ ಮಾವುತನನ್ನು ಯಾಮಾರಿಸಿ ಕೊಂದಿದ್ದ ಈ ಗಣೇಶ. ರಸ್ತೆ ಬದಿ ಸಾಗುತ್ತಿದ್ದ ವಾಹನದ ಮೇಲೆರಗಿ, ಪ್ರಯಾಣಿಕನೊಬ್ಬನನ್ನ ಬಲಿ ಪಡೆದಿದ್ದ.ಇದ್ದ ಜಾಗದಲ್ಲಿಯೇ ಮರ ಉರುಳಿಸುವುದು,  ಎಲ್ಲೋ ನೋಡಿದಂತೆ ಮಾಡಿ, ಸೊಂಡಿಲು ಬೀಸಿ ಹೊಡೆಯುವುದು,  ಗಣೇಶನ ಜತನದಿಂದ ಬಂದ ಗುಣಲಕ್ಷಣವಾಗಿದೆ. ರಾಜ್ಯದ ಎಲ್ಲಾ ಬಿಡಾರಗಳಲ್ಲಿ ಮಾವುತರಿಗೆ ಸಿಬ್ಬಂದಿಗಳಿಗೆ ಕೊಡಬಾರದ ಕಾಟಕೊಟ್ಟಿದ್ದ ಗಣೇಶನನ್ನು ನಾವು ಸಲಹಲು ಸಾಧ್ಯವಿಲ್ಲ ಎಂದು ಮಾವುತರು ಮೇಲಾಧಿಕಾರಿಗಳಿಗೆ ಪತ್ರ ಬರೆದ ನಂತರ, ಅಂತಿಮವಾಗಿ ಗಣೇಶ ಸಕ್ರೆಬೈಲಿಗೆ ಬಂದ. ಇಲ್ಲೂ ಕೂಡ ಮಾವುತರ ಕೈಕಾಲು ಟ್ವಿಸ್ಟ್ ಮಾಡಿದ್ದಾನೆ.ಇಬ್ಬರನ್ನು ಬಲಿಪಡೆದಿದ್ದಾನೆ.

ಇದನ್ನು ಸಹ ಓದಿ : ಶಿವಮೊಗ್ಗದ ಕಾಚಿನ ಕಟ್ಟೆ ಸಮೀಪ ಬೈಕ್​ ಕಾರು ಡಿಕ್ಕಿ/ ಸವಾರನ ಕಾಲು ಕಟ್

ಜಲೀಲ್ ಎಂಬ ಮಾವುತ  ಈ ಹಿಂದೇ ಗಣೇಶನ ಲಾಲನೆ ಪಾಲನೆ ಮಾಡುತ್ತಿದ್ದರು. ಜಲೀಲ್ ಕೂಡ ಹಲವಾರು ಬಾರಿ ಗಣೇಶನ ದಾಳಿಗೆ ತುತ್ತಾದರೂ ಸಹ ಜಾಗೃತಿ ವಹಿಸಿ ಪ್ರಾಣಾಪಾಯದಿಂದ ಪಾರಾಗಿದ್ದರು. ಹಲವು ಬಾರಿ ಗಣೇಶ, ಜಲೀಲ್ ಮೇಲೆ ಮರ ಉರುಳಿಸುವ ಪ್ರಯತ್ನ ಮಾಡಿದ್ದ. ಈತನಿಗೆ ಆಹಾರ ನೀಡುವುದು,ವೈದ್ಯೋಪಚಾರ ಮಾಡುವುದು ಕಷ್ಟಸಾಧ್ಯ. ಗಣೇಶ ಇರುವ ಕಾಡಿನ ಜಾಗಕ್ಕೆ ಪ್ರತಿದಿನ ನಾಲ್ಕೈದು ಕಿಲೋಮೀಟರ್ ನಡೆದು ಹೋಗುವ ಜಲೀಲ್,,ಜೀವಪಣಕ್ಕಿಟ್ಟುಕೆಲಸ ಮಾಡಬೇಕಿತ್ತು. ಬೆಳಿಗ್ಗೆ ಮಾತ್ರ ಮಾವುತನ ಮಾತು ಕೇಳ್ತಿದ್ದ ಗಣೇಶ, ನೆತ್ತಿ ಮೇಲೆ ಸೂರ್ಯ ಬರುತ್ತಿದ್ದಂತೆ ಅಕ್ಷರ ಸಹ ಘೀಳಿಡುತ್ತಿದ್ದ ಈತನ ವರ್ತನೆಯನ್ನು ಬದಲಿಸಲು ಸಾಧ್ಯವಿಲ್ಲ ಎಂದು ಮಾವುತರು ಕೂಡ ಒಂದು ನಿರ್ಧಾರಕ್ಕೆ ಬಂದಿದ್ದರು. ಜಲೀಲ್ ನನಗೆ ಗಣೇಶ ಆನೆ ನೋಡಿಕೊಳ್ಳಲು ಸಾಧ್ಯವಿಲ್ಲ.ಆನೆಯನ್ನು ಬಿಡಾರದಿಂದ ಸ್ಥಳಾಂತರಿಸಿ ಎಂದು ಮೇಲಾಧಿಕಾರಿಗಳಿಗೆ ಮನವಿ ಪತ್ರ ಕೂಡ ಬರೆದಿದ್ದರು.

ಇದನ್ನು ಸಹ ಓದಿ : ಶಿವಮೊಗ್ಗ ಪೊಲೀಸರಿಂದ ತತ್ತಕ್ಷಣದ ಕಾರ್ಯಾಚರಣೆ/ 20 ಚೆಕ್​ಪೋಸ್ಟ್​ನಲ್ಲಿ 46 ಕೇಸ್​/ ಏನಿದು? ವಿವರ ನೋಡಿ

15 ವರ್ಷದ ವನವಾಸದಿಂದ ಗಣೇಶ ಒಳ್ಳೆಯವನಾಗಿ ಮತ್ತೆ ಬಿಡಾರ ಸೇರ್ಕೊಂಡು,ಇತರೆ ಆನೆಗಳೊಂದಿಗೆ ಹೊಂದಿಕೊಳ್ತಾನೆ ಅಂದುಕೊಂಡಿದ್ದ ಮಾವುತರಿಗೆ ನಿರಾಸೆಯಾಗಿದೆ.ಗಿಡವಾಗಿ ಬಗ್ಗದು ಮರವಾಗಿ ಬಗ್ಗಿತೇ..ಹುಟ್ಟ ಗುಣ ಸುಟ್ಟರೂ ಹೋಗದು ಎಂಬ ಗಾದೆಮಾತಿಗೆ ಅನ್ವರ್ಥವಾಗಿರುವ ಗಣೇಶ ಇದೀಗ ಮಧ್ಯಪ್ರದೇಶಕ್ಕೆ ಹೊರಟು ನಿಂತಿದ್ದಾನೆ. ಅಲ್ಲಿಯಾದರೂ ಗಣೇಶ ಸಹಜತನಕ್ಕೆ ಒಗ್ಗುತ್ತಾನೆಯೇ ಕಾದು ನೋಡಬೇಕು

ವೀಕ್ಷಕರೇ, ರೌಡಿ ಗಣೇಶನ  ಈ ವರ್ತನೆಯ ಬಗ್ಗೆ, ಕಾಂತಾರ ಸಿನಿಮಾ ಮಾದರಿಯ ಸ್ಟೋರಿಯೊಂದಿದೆ. ಅದರ ಬಗ್ಗೆ ಸದ್ಯದಲ್ಲಿಯೇ ತಿಳಿಸುತ್ತೇವೆ. 

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link