Sakrebylu elephant/ ಸಕ್ರೆಬೈಲ್ ಆನೆ​ ಬಿಡಾರ ಬಿಟ್ಟು ನಾಲ್ಕುಆನೆಗಳ ಮಹಾ ವಲಸೆ

sakrebailu elephant camp shimoga story

Sakrebylu elephant/ ಸಕ್ರೆಬೈಲ್ ಆನೆ​ ಬಿಡಾರ ಬಿಟ್ಟು ನಾಲ್ಕುಆನೆಗಳ ಮಹಾ ವಲಸೆ
sakrebailu elephant camp shimoga story

Sakrebylu elephant/ ಶಿವಮೊಗ್ಗದ ಸಕ್ರೆಬೈಲ್​ ಆನೆ ಬಿಡಾರದ ಮುದ್ದು ಆನೆ 12 ವರ್ಷದ ಸೂರ್ಯ ಬಿಡಾರವನ್ನು ಬಿಟ್ಟು ಉತ್ತರಪ್ರದೇಶಕ್ಕೆ ಹೊರಟಿದ್ದಾನೆ. ಬಿಡಾರದ ಸಿಬ್ಬಂದಿಯ ಜೊತೆಗೆ ಕೊನೆಯ ಫೋಟೋಸೇಷನ್​ ಮುಗಿಸಿ ಲಾರಿ ಹತ್ತಿದ್ಧಾನೆ ಸೂರ್ಯ.ಇದೀಗ ಅದರಂತೆ  ಶಿವಮೊಗ್ಗ ಸಕ್ರೆಬೈಲ್​ನಿಂದ ಸೂರ್ಯ ಹಾಗೂ ಉಳಿದ ಆನೆ ಬಿಡಾರಗಳಿಂದ ಮೂರು ಆನೆಗಳು ಉತ್ತರಪ್ರದೇಶಕ್ಕೆ ಹೊರಟಿವೆ.

2017ರಲ್ಲೂ 10 ಆನೆಗಳನ್ನು ರಾಜ್ಯದಿಂದ ಉತ್ತರ ಪ್ರದೇಶಕ್ಕೆ ಕಳುಹಿಸಲಾಗಿತ್ತು. ಈ ಪೈಕಿ ಸಕ್ರೆಬೈಲ್ ಬಿಡಾರದಿಂದ ನಾಲ್ಕು ಆನೆಗಳು ದೂದ್ವಾ ಟೈಗರ್ ರಿಸರ್ವ್​​ ಹೋಗಿದ್ದವು.ಇದೀಗ ಸೂರ್ಯ ಹಾಗೂ ಇತರೇ ಆನೆಗಳ ಜೊತೆ  ಸಕ್ರೆಬೈಲು ಆನೆ ಬಿಡಾರದ ವೈದ್ಯಾಧಿಕಾರಿ ಡಾ.ವಿನಯ್, ಕಾವಾಡಿಗರಾದ ರಾಜೇಶ್ ಹಾಗೂ ಅಮ್ಜದ್ ತೆರಳಲಿದ್ದಾರೆಅಲ್ಲಿಯ ಪರಿಸರದ ಜೊತೆಗೆ ಆನೆಗಳು ಹೊಂದಿಕೊಂಡ ನಂತರ, ಅಲ್ಲಿಂದ ರಾಜ್ಯದ ತಂಡ ವಾಪಸ್ ಆಗಲಿದೆ.ಇನ್ನೂ 12 ವ್ಹೀಲ್​ಗಳ ಲಾರಿಯಲ್ಲಿ ಈ ಆನೆಗಳನ್ನು ಸಾಗಿಸಲಾಗುತ್ತಿದೆ. ಬರೋಬ್ಬರಿ ಮೂರು ಸಾವಿರ ಕಿಲೋಮೀಟರ್​ ದೂರದ ಪ್ರಯಾಣದಲ್ಲಿ ಆನೆಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾನೆ ಮುಖ್ಯವಾಗುತ್ತದೆ

ಬಿಡಾರದ ಮುಖ್ಯ ಸದಸ್ಯೆ ನೇತ್ರಾಳ ಮಗನಾದ ಸೂರ್ಯನನ್ನು ಗೊತ್ತಿಲ್ಲದ ಊರಿಗೆ ಕಳುಹಿಸಿಕೊಡಲು ಯಾರಿಗೂ ಮನಸ್ಸಾಗುತ್ತಿಲ್ಲ. ಆದರೆ, ಅನಿವಾರ್ಯ. ಮನಸ್ಸಲ್ಲದ ಮನಸ್ಸನ್ನ ಭಾರ ಮಾಡಿಕೊಂಡು ಬಿಡಾರದ ಮಂದಿ ಸೂರ್ಯನಿಗೆ ಬಿಳ್ಕೊಟ್ಟಿದ್ದಾರೆ.

Sakrebylu elephant/ ಸಕ್ರೆಬೈಲ್ ಆನೆ​ ಬಿಡಾರ ಬಿಟ್ಟು 3000 ಕಿಲೋಮೀಟರ್​ ದೂರ ಹೊರಟ ಸೂರ್ಯ

ಮುಖ್ಯವಾಗಿ ಸೂರ್ಯನ ಈ ಪ್ರಯಾಣ 3 ಸಾವಿರ ಕಿಲೋಮೀಟರ್​ನದ್ದು. ದೂರದ ಉತ್ತರಪ್ರದೇಶದಲ್ಲಿರುವ ಪಿಲಿಬಿಟ್​ ಹುಲಿ ಸಂರಕ್ಷಿತ ಅಭಯಾರಣ್ಯದಸದಸ್ಯನಾಗಿ ಸೇರಿಕೊಳ್ಳಲು ಸೂರ್ಯ ಹೊರಟಿದ್ಧಾನೆ.ಈತನ ಜೊತೆಗೆ ರಾಮಾಪುರ ಕ್ಯಾಂಪ್​ನ ಹೆಣ್ಣಾನೆಯೊಂದು ಹಾಗೂ ತಿಥುಮತಿಯ ಎರಡು ಆನೆಗಳು ಹೊರಟಿವೆ.ಉತ್ತರ ಪ್ರದೇಶ ಸರ್ಕಾರ ಕರ್ನಾಟಕದ ಆನೆಗಳಿಗಾಗಿ ಕರ್ನಾಟಕ ಸರ್ಕಾರಕ್ಕೆ ಬೇಡಿಕೆ ಇಟ್ಟಿತ್ತು. ಈ ಹಿನ್ನೆಲೆಯಲ್ಲಿ ಮಾತುಕತೆ ಹಾಗೂ ಒಪ್ಪಂದ ನಡೆದು, ಅಲ್ಲಿಂದ ವಿಶೇಷ ವೈದ್ಯರ ತಂಡ ಬಂದಿತ್ತು.ರಾಜ್ಯದ ಆನೆ ಬಿಡಾರದ ಆನೆಗಳ ಆರೋಗ್ಯ ಹಾಗೂ ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳಬಹುದು ಎಂಬ ಲಕ್ಷಣವನ್ನು ಹೊಂದಿರುವ ಆನೆಗಳ ಪಟ್ಟಿ ಮಾಡಿಕೊಂಡು ಹೋಗಿದ್ದರು. ಆನಂತರ ತಮಗೆ ಬೇಕಾದ ಆನೆಗಳ ಲಿಸ್ಟ್ ಕಳುಹಿಸಿದ್ದರು. ಈ ಬಗ್ಗೆ ಮಲೆನಾಡು ಟುಡೆ ಹಿಂದೇಯೇ ವರದಿ ಮಾಡಿತ್ತು.

ಪ್ರಯಾಣ ಹೇಗಿರುತ್ತದೆ

ಈ ನಿಟ್ಟಿನಲ್ಲಿ ಸಾಗುವ ದಾರಿಯ ರೂಟ್ ಮ್ಯಾಪ್​ ಮೊದಲೇ ಸಿದ್ಧಪಡಿಸಲಾಗಿದ್ದು, ಆಯಾ ಜಿಲ್ಲೆಗಳ ಪೊಲೀಸ್ & ಅರಣ್ಯಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ಈ ಬಗ್ಗೆ ಮಾಹಿತಿ ನೀಡಲಾಗಿದೆ.ಈ ಆನೆಗಳು ನಿಗದಿತ ಜಿಲ್ಲೆಗಳಿಗೆ ಎಂಟ್ರಿಯಾಗುತ್ತಿದ್ದಂತೆ. ಅಲ್ಲಿಯ ಪೊಲೀಸರು ಆನೆಗಳಿಗೆ ಎಸ್ಕಾರ್ಟ್​ ನೀಡುತ್ತಾರೆ. ಹಾಗೆಯೇ ಊಟ ಆಹಾರದ ವ್ಯವಸ್ಥೆ ಮಾಡಿಕೊಟ್ಟು ಬಿಡಾರ ಹೂಡಲು  ಸ್ಥಳವಾಕಾಶ ನೀಡಲಾಗುತ್ತದೆಇನ್ನೂ ಆನೆಗಳಿಗೆ ಪ್ರತಿ ಮೂರು ಗಂಟೆಗಳಿಗೊಮ್ಮೆ ಸ್ನಾನ ಮಾಡಿಸಲಾಗುತ್ತದೆ. ಅದೇ ವೇಳೆ ಆರೋಗ್ಯ ತಪಾಸಣೆಯನ್ನು ಸಹ ನಡೆಸಲಾಗುತ್ತದೆ. ಪ್ರತಿಧಿನ ಗರಿಷ್ಟ ಅಂದರೆ 250 ಕಿಲೋಮೀಟರ್​ನಷ್ಟೆ ಪ್ರಯಾಣ ಬೆಳಸಲಾಗುತ್ತದೆ.ಒಟ್ಟಾರೆ, ಸೂರ್ಯ ತನ್ನದಲ್ಲದ ಊರಿಗೆ ಹೊರಟಿದ್ಧಾನೆ. ಈ ಹಿಂದೆ ನೇತ್ರಾ ಆನೆಯ ಸಹೋದರ ಆನೆಯು ಸಹ ಇದೇ ಪ್ರಾಜೆಕ್ಟ್​ನಲ್ಲಿ ಹುಲಿ ಸಂರಕ್ಷಿತ ಅಭಯಾರಣ್ಯ ಸೇರಿದ್ದ. ಇದೀಗ ನೇತ್ರಾಳ ಮಗ ಪಿಲಿಬಿಟ್​ಗೆ ಹೊರಟಿದ್ಧಾನೆ. ಹುಷಾರಾಗಿ ಹೋಗು ಎಂದು ಸಿಬ್ಬಂದಿ ಹಾರೈಸಿದ್ದಾರೆ. ..