ಪ್ರಯಾಣಿಕರ ಗಮನಕ್ಕೆ/ ಶಿವಮೊಗ್ಗ ಟೌನ್​ - ಎಂಜಿಆರ್​ ಚೆನ್ನೈ ಸೆಂಟ್ರಲ್ ಸ್ಪೆಷಲ್​ ಟ್ರೈನ್​ ಸೌಲಭ್ಯ ವಿಸ್ತರಣೆ/ ವಿವರ ಇಲ್ಲಿದೆ ಓದಿ

ಶಿವಮೊಗ್ಗ-ಚನ್ನೈ ನಡುವಿನ ಟ್ರೈನ್​ಗೆ ಪ್ರಯಾಣಿಕರ ಸ್ಪಂದನೆ ಚೆನ್ನಾಗಿದ್ದು, ಈ ಸಂಬಂಧ ರೈಲ್ವೆ ಇಲಾಖೆ ಕೂಡ ಪೂರಕವಾಗಿ ವ್ಯವಸ್ಥೆ ಕಲ್ಪಿಸುತ್ತಿದೆ

ಪ್ರಯಾಣಿಕರ ಗಮನಕ್ಕೆ/ ಶಿವಮೊಗ್ಗ ಟೌನ್​ - ಎಂಜಿಆರ್​ ಚೆನ್ನೈ ಸೆಂಟ್ರಲ್ ಸ್ಪೆಷಲ್​ ಟ್ರೈನ್​ ಸೌಲಭ್ಯ ವಿಸ್ತರಣೆ/ ವಿವರ ಇಲ್ಲಿದೆ ಓದಿ

ಶಿವಮೊಗ್ಗ-ಚೆನ್ನೈ ನಡುವೆ ವಾರಕ್ಕೆ ಎರಡು ಭಾರಿ ಸಂಚರಿಸುವ ಟ್ರೈನ್​ ನ್ನ ಇನ್ನಷ್ಟು ದಿನ ವಿಸ್ತರಿಸಲಾಗಿದೆ. ಶಿವಮೊಗ್ಗ ರೈಲು ನಿಲ್ದಾಣ(SMET) ) ದಿಂದ ಎಂಜಿಆರ್​ ಚೆನ್ನೈ ಸೆಂಟ್ರಲ್​ ರೈಲು ನಿಲ್ದಾಣಕ್ಕೆ ತಲುಪವ ಟ್ರೈನ್​ನ (Chennai Central Bi-weekly Express Special ) ಅವಧಿಯನ್ನು ಇನ್ನಷ್ಟು ದಿನ ವಿಸ್ತರಿಸಲಾಗಿದೆ. 

ಇದನ್ನು ಸಹ ಓದಿ : ಶಿವಮೊಗ್ಗದ ಗಾಂಧಿ ಬಜಾರ್​ನಲ್ಲಿ ಓರ್ವನ ಮೇಲೆ ಹಲ್ಲೆ

ಈ ಮೊದಲು ಈ ರೈಲಿನ ಸಂಚಾರವೂ ಇದೇ ತಿಂಗಳ ಡಿಸೆಂಬರ್​ 27 ಕ್ಕೆ ಕೊನೆಯಾಗಬೇಕಿತ್ತು. ಇದೀಗ ಈ ಸಂಬಂಧ ಆದೇಶ ಹೊರಬಿದ್ದಿದ್ದು ರೈಲಿನ ಸಂಚಾರ ಸೇವೆಯನ್ನು ಇದೇ ಬರುವ ಮಾರ್ಚ್​ ತಿಂಗಳ 28 ನೇ ತಾರೀಖಿನವರೆಗೂ ವಿಸ್ತರಿಸಲಾಗಿದೆ. 

ಇದನ್ನು ನೋಡಿ : ಶಿವಮೊಗ್ಗದಲ್ಲಿ ಮಾಂಡೌಸ್ ಚಂಡಮಾರುತದ ಎಫೆಕ್ಟ್ ಹೇಗಿದೆ ಗೊತ್ತಾ? ವಿಡಿಯೋ ನೋಡಿ

ಇನ್ನೂ ಇದಕ್ಕೆ ಪೂರಕವಾಗಿ ಚೆನ್ನೈನಿಂದ ಶಿವಮೊಗ್ಗಕ್ಕೆ ಬರುವ ಟ್ರೈನ್​ ( ರೈಲು ಸಂಖ್ಯೆ 06224) ಸಂಚಾರ ಇದೇ ಡಿಸೆಂಬರ್ 28 ಕ್ಕೆ ಕೊನೆಗೊಳ್ಳಬೇಕಿತ್ತು. ಇದೀಗ ಈ ಸೇವೆಯನ್ನು ಮಾರ್ಚ್​ 29 ರವರೆಗೂ ವಿಸ್ತರಿಸಲಾಗಿದೆ. ಶಿವಮೊಗ್ಗ-ಚನ್ನೈ ನಡುವಿನ ಟ್ರೈನ್​ಗೆ ಪ್ರಯಾಣಿಕರ ಸ್ಪಂದನೆ ಚೆನ್ನಾಗಿದ್ದು, ಈ ಸಂಬಂಧ ರೈಲ್ವೆ ಇಲಾಖೆ ಕೂಡ ಪೂರಕವಾಗಿ ವ್ಯವಸ್ಥೆ ಕಲ್ಪಿಸುತ್ತಿದೆ. 

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link