ಹಿಂದುಳಿದ ವರ್ಗಗಳಿಗೆ ವಿಧಾನಸಭೆ ಮತ್ತು ಲೋಕಸಭೆಯಲ್ಲಿಯು ಮೀಸಲಾತಿ ನೀಡಿ

Give reservation to backward classes in assembly and lok sabha elections T na Srinivas demanded

ಹಿಂದುಳಿದ ವರ್ಗಗಳಿಗೆ ವಿಧಾನಸಭೆ ಮತ್ತು ಲೋಕಸಭೆಯಲ್ಲಿಯು ಮೀಸಲಾತಿ ನೀಡಿ

KARNATAKA NEWS / ONLINE / Malenadu today/ Nov 16, 2023 SHIVAMOGGA NEWS

Shivamogga | Malnenadutoday.com |   ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಹೆಚ್ ಕಾಂತರಾಜು ನೀಡಿರುವ ವರದಿ ಜಾರಿಗೊಳಿಸುವಂತೆ ಆಗ್ರಹಿಸಿ ಹಿಂದುಳಿದ ಜನ ಜಾಗೃತಿ ವೇದಿಕೆ ವತಿಯಿಂದ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಛೇರಿ ಎದುರು ನವಂಬರ್ 20 ರಂದು ಧರಣಿ ಸತ್ಯಾಗ್ರಹ ಮತ್ತು ಹಕ್ಕೊತ್ತಾಯ ಮಂಡನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ತೀ.ನಾ ಶ್ರೀನಿವಾಸ್ ಹೇಳಿದ್ದಾರೆ.

ಶಿವಮೊಗ್ಗದ ಪ್ರೆಸ್ ಟ್ರಸ್ಟ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವಿರಾರು ವರ್ಷಗಳಿಂದ ಜಾತಿ ಪದ್ಧತಿ ಹಿನ್ನಲೆಯಲ್ಲಿ ಶೋಷಣೆಗೊಳಗಾದ ಹಿಂದುಳಿದ ಜಾತಿಗಳಿಗೆ ಸಾಮಾಜಿಕ ನ್ಯಾಯದ ಹರಿಕಾರ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜು ಅರಸು ಇಚ್ಚಾ ಶಕ್ತಿಯಿಂದಾಗಿ ಹಾವನೂರು ವರದಿ ಜಾರಿಗೆ ಬಂತು. ನಂತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಲಭಿಸಿ ಸಾಮಾಜಿಕ ನ್ಯಾಯದ ರಥ ಚಲಿಸಲಾರಂಭಿಸಿತು. 

ಮೀಸಲಾತಿ ವಿಚಾರದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ವಾದವೂ ಪೂರಕವಾಗಿರುವಾಗ ಮೀಸಲಾತಿ ಭಿಕ್ಷೆಯಲ್ಲ. ಅದು ಸಂವಿದಾನ ಹಕ್ಕು ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.ಕರ್ನಾಟಕ ಸ್ಕಾರದ ಆದೇಶದ ಮೇರೆಗೆ 20-01-2014 ರಂದು ಹೆತ್ ಕಾಂತರಾಜು ಅವರ ನೇತ್ರತ್ವದಲ್ಲಿ ರಾಜ್ಯ ಹಿಂದುಳಿದ ವರ್ಗಳ ಶಾಶ್ವತ ಆಯೋಗ ನೇಮಕಗೊಂಡಿತು. 

READ : ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ #Operation Amanat ! ಪ್ರಯಾಣಿಕ ಫುಲ್​ ಖುಶ್!

 

ಹಿರಿಯ ವಕೀಲರು ಹಾಗು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾದ ಹೆಚ್ ಕಾಂತರಾಜು ಐದು ವರ್ಷಗಳ ಕಾಲ ಹಿಂದುಳಿದ ವರ್ಗಗಳ ಸಾಮಾಜಿ ಶೈಕ್ಷಣಿಕ ಸಮೀಕ್ಷೆಗೆ 55 ಮಾನದಂಡಗಳನ್ನು ಅಳವಡಿಸಿಕೊಂಡು ಹಿಂದುಳಿದ ವರ್ಗಳ ಜಾತಿ ರಾಜಕೀಯ ಅಧಿಕಾರ ಸಾಮಾಜಿಕ ಆರ್ಥಿಕ ಮಾಹಿತಿಗಳನ್ನ ಸಂಗ್ರಹಿಸಿ ವೈಜ್ಞಾನಿತವಾಗಿ ಅಧ್ಯಯನ ಮಾಡಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿಯನ್ನು 2018 ರಲ್ಲಿ ಮುಖ್ಯಮಂತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರಕ್ಕೆ ಸಲ್ಲಿಸುವ ಸಂದರ್ಭದಲ್ಲಿ ರಾಜಕೀಯ ಪ್ರಕ್ಷುಬ್ಧತೆ ಮತ್ತು ವಿಧಾನಸಭೆ ಚುನಾವಣೆಯಿಂದಾಗಿ ವರದಿಯೂ ಸರ್ಕಾರಕ್ಕೆ ಸಲ್ಲಿಕೆಯಾಗಲಿಲ್ಲ. 

ವರದಿ ಸಿದ್ದಪಡಿಸಲು ಸರ್ಕಾರಕ್ಕೆ 158.47 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ಹೇಳಲಾಗಿದೆ. ನಂತರ ಬಂದ ಸರ್ಕಾರದ ಮುಖ್ಯಮಂತ್ರಿಗಳು ವರದಿ ಅನುಷ್ಠಾನಕ್ಕೆ ಮನಸ್ಸು ಮಾಡಲಿಲ್ಲ. ಬಲಾಢ್ಯ ಜಾತಿಗಳ ರಾಜಕೀಯ ಮುಖಂಡರಿಗೆ ವರದಿ ಬಹಿರಂಗವಾಗುವುದು ಇಷ್ಟವಿಲ್ಲ. ಸಿದ್ದರಾಮಯ್ಯನವರು ಯಾಕೆ ವರದಿ ಬಿಡುಗಡೆ ಮಾಡಲು ಮೀನಾಮೇಷ ಮಾಡುತ್ತಿದ್ದಾರೆ., ಇದು ಸರಿಯಾದ ಕ್ರಮವಲ್ಲ ಎಂದು ತೀ ನಾ ಶ್ರೀನಿವಾಸ್ ಹೇಳಿದ್ದಾರೆ. 

ಪಂಚಾಯತ್ ರಾಜ್ ನಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಇದ್ದಂತೆ ವಿಧಾನಸಭೆ ಮತ್ತು ಲೋಕಸಭೆಯಲ್ಲೂ ಮೀಸಲಾತಿ ನೀಡುವಂತೆ ಒತ್ತಾಯಿಸಲಾಗುವುದು  ಎಂದು  ತೀ ನಾ ಶ್ರೀನಿವಾಸ್  ಹೇಳಿದ್ದಾರೆ. ಹೀಗಾಗಿ ಕಾಂತರಾಜು ವರದಿ ಜಾರಿಗೆ ಆಗ್ರಹಿಸಿ ನವಂಬರ್ 20 ರಂದು ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಆರ್ ಕೆ ಸಿದ್ದರಾಯಮ್ಮ  ರಾಜು ಸೇರಿದಂತೆ ಮತ್ತಿತ್ತರ ಮುಖಂಡರು ಪಾಲ್ಗೊಂಡಿದ್ದರು.