KARNATAKA NEWS / ONLINE / Malenadu today/ Nov 16, 2023 SHIVAMOGGA NEWS
Shivamogga | Malnenadutoday.com | ಪ್ರಯಾಣಿಕರ ಅನುಕೂಲ ಅನಾನುಕೂಲಗಳನ್ನು ರೈಲ್ವೆ ಇಲಾಖೆ ಹತ್ತಿರದಿಂದ ಗಮನಿಸುತ್ತಿದೆ. ಪ್ರಯಾಣದ ಭರದಲ್ಲಿ ರೈಲಿನಲ್ಲಿಯೇ ಬಿಟ್ಟುಹೋಗುವ ವಸ್ತುಗಳನ್ನು ಇಲಾಖೆಯ ಸಿಬ್ಬಂದಿಗಳು ಜೋಪಾನ ಮಾಡಿ ವಾಪಸ್ ನೀಡುತ್ತಿದ್ದಾರೆ.
ಇತ್ತೀಚೆಗೆ ಅನುಮಾನಸ್ಪದವಾಗಿ ಕಂಡು ಬಂದಿದ್ದ ಅಪ್ರಾಪ್ತೆಯೊಬ್ಬಳನನ್ನ ರಕ್ಷಿಸಿದ್ದ ಶಿವಮೊಗ್ಗ ರೈಲ್ವೆ ಪೊಲೀಸರು ಆಪರೇಷನ್ ಅಮಾನತ್ ಅಡಿಯಲ್ಲಿ ಪ್ರಯಾಣಿಕರೊಬ್ಬರು ಕಳೆದುಕೊಂಡಿದ್ದ ಮೊಬೈಲ್ನ್ನ ಅವರಿಗೆ ವಾಪಸ್ ಕೊಡಿಸಿದ್ದಾರೆ.
READ :ರಸ್ತೆ ಬದಿ ನಿಂತು ಮೊಬೈಲ್ನಲ್ಲಿ ಮಾತನಾಡುವಾಗ ಜಾಗ್ರತೆ ! ಹೀಗಾಗಬಹುದು !
ಏನಿದು ಘಟನೆ
ಮೈಸೂರು-ತಾಳಗುಪ್ಪ (16206 Express) ರೈಲಿನಲ್ಲಿ ಪ್ರಯಾಣಿಸ್ತಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ನ ಮರೆತು ಟ್ರೈನ್ನಲ್ಲಿಯೇ ಬಿಟ್ಟು ತೆರಳಿದ್ದರು. ಬಳಿಕ ಮೊಬೈಲ್ ಹುಡುಕಿಕೊಂಡು ಬಂದ ಅವರಿಗೆ ಅವರ ವಸ್ತು ಸಿಕ್ಕಿರಲಿಲ್ಲ. ಈ ಮಧ್ಯೆ ಮೊಬೈಲ್ನ ಹುಡುಕಾಟದಲ್ಲಿ ತೊಡಗಿದ ರೈಲ್ವೆ ಪೊಲೀಸರು 10 ಸಾವಿರ ರೂಪಾಯಿ ಮೌಲ್ಯದ Redmi mobile ನ್ನ ಅದನ್ನು ಕಳೆದುಕೊಂಡ ಪ್ರಯಾಣಿಕರಿಗೆ ವಾಪಸ್ ಕೊಡಿಸಿದ್ದಾರೆ.
#Operation Amanat: RPF/Shivamogga recovered one left over Redmi mobile phone worth Rs.10, 000/- in train No. 16206 Express at Shivamogga Railway station. Further, the same was handed over to the concerned passenger. @RPF_INDIA pic.twitter.com/rJjWoKehO3
— RPF MYSURU DIV (@rpfswrmys) November 14, 2023
