ರಸ್ತೆ ಬದಿ ನಿಂತು ಮೊಬೈಲ್‌ನಲ್ಲಿ ಮಾತನಾಡುವಾಗ ಜಾಗ್ರತೆ ! ಹೀಗಾಗಬಹುದು !
The bike hit a man who was talking on his mobile phone while standing on the roadside near Theerthahalli Ranjadakatte. Malnad Today, Thirthahalli News,

KARNATAKA NEWS / ONLINE / Malenadu today/ Nov 16, 2023 SHIVAMOGGA NEWS
Shivamogga | Malnenadutoday.com | ಮೊಬೈಲ್‌ನಲ್ಲಿ ಮಾತನಾಡ್ತಾ ವಾಹನ ಓಡಿಸುವುದು ಅಪಾಯಕಾರಿ. ಅದರಂತೆ ಹೆದ್ದಾರಿಗಳಲ್ಲಿ ರೋಡ್ನಿಂದ ಕೆಳಕ್ಕೆ ಇಳಿದು ಸೇಫ್ ಆದ ಜಾಗದಲ್ಲಿ ನಿಂತು ಮೊಬೈಲ್‌ನಲ್ಲಿ ಮಾತನಾಡುವುದು ಒಳ್ಳೆಯದು. ಇಲ್ಲವಾದರೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ರಂಜದಕಟ್ಟೆಯಲ್ಲಿ ನಡೆದಂತಹ ಘಟನೆ ಎದುರಾಗುವ ಸಾದ್ಯತೆ ಇರುತ್ತದೆ.
ಎನಾಯ್ತು ರಂಜದಕಟ್ಟೆಯಲ್ಲಿ?
ಇಲ್ಲಿನ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ರಾಷ್ಟ್ರೀಯ ಹೆದ್ದಾರಿಯ ತಿರುವಿನಲ್ಲಿ ರಸ್ತೆ ಬದಿ ಬೈಕ್ ನಿಲ್ಲಿಸಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಯುವಕನಿಗೆ ಹಿಂದಿನಿಂದ ಬಂದ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರನ ತಲೆಗೆ ತೀವ್ರ ಸ್ವರೂಪದ ಗಾಯವಾಗಿದೆ.
READ : ಶಿವಮೊಗ್ಗದ ಎರಡು ತಾಲ್ಲೂಕುಗಳಲ್ಲಿ ವಿಪರೀತವಾದ ಕಾಡಾನೆ ಕಾಟ!
ರಂಜದಕಟ್ಟೆಯ ಅಭಿಷೇಕ್ (32) ಗಾಯಗೊಂಡಿದ್ಧಾರೆ. ಸದ್ಯ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತನ್ನ ಸ್ನೇಹಿತನ ಬೈಕ್‌ನ್ನು ರಸ್ತೆಯ ಎಡ ಬದಿಯಲ್ಲಿ ನಿಲ್ಲಿಸಿಕೊಂಡು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ..
ನಿಂತಿದ್ದ ಬೈಕ್ಗೆ ಹಿಂಬದಿಯಿಂದ ವೇಗವಾಗಿ ಬಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದ್ದು, ಅಪಘಾತಕ್ಕೆ ಕಾರಣವಾದವನು ಎಸ್ಕೇಪ್ ಆಗಿದ್ದಾನೆ