ಶಕ್ತಿ ಯೋಜನೆ ಹೆಸರಲ್ಲಿ ಸರ್ಕಾರಿ ಬಸ್​ ನಿರ್ವಾಹಕನಿಗೆ ಖಾಸಗಿ ಬಸ್​ ಸಿಬ್ಬಂದಿ ಹಲ್ಲೆ ! ತೀರ್ಥಹಳ್ಳಿಯಲ್ಲಿ ನಡೆದಿದ್ದೇನು?

In the name of Shakti Yojana, a government bus conductor was attacked by private bus staff. What happened in Thirthahalli?

ಶಕ್ತಿ ಯೋಜನೆ ಹೆಸರಲ್ಲಿ ಸರ್ಕಾರಿ ಬಸ್​ ನಿರ್ವಾಹಕನಿಗೆ ಖಾಸಗಿ ಬಸ್​ ಸಿಬ್ಬಂದಿ ಹಲ್ಲೆ ! ತೀರ್ಥಹಳ್ಳಿಯಲ್ಲಿ ನಡೆದಿದ್ದೇನು?
government bus conductor was attacked by private bus staff. What happened in Thirthahalli?

SHIVAMOGGA |  Dec 10, 2023 | ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಪೇಟೆಯಲ್ಲಿನ ತೀರ್ಥಹಳ್ಳಿ ಖಾಸಗಿ ಬಸ್ ನಿಲ್ದಾಣದಲ್ಲಿ ಸರ್ಕಾರಿ ಬಸ್​ನ ಕೀ ಕಿತ್ತುಕೊಂಡು, ಬಸ್ ನಿರ್ವಾಹಕನ ಮೇಲೆ ಹಲ್ಲೆ ಮಾಡಿದ ಆರೋಪವೊಂದು ಕೇಳಿಬಂದಿದ್ದು, ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಸ್ಟೇಷನ್​ನಲ್ಲಿ ದೂರು ಸಹ ದಾಖಲಾಗಿದೆ. 

ಸರ್ಕಾರದ ಶಕ್ತಿ ಯೋಜನೆಯ ಕಾರಣ ಈ ಘಟನೆ ನಡೆದಿದೆ ಎನ್ನಲಾಗುತ್ತಿದ್ದು, ಖಾಸಗಿ ಬಸ್ ಮಾಲೀಕರಿಗೆ ಶಕ್ತಿ ಯೋಜನೆಯಿಂದ ಮಹಿಳಾ ಪ್ರಯಾಣಿಕರ ಕೊರತೆ ಎದುರಾಗಿದೆ. ಮಹಿಳೆಯರು ಬಸ್ ಕಡಿಮೆಯಿದ್ದರೂ ಸರ್ಕಾರಿ ಬಸ್​ಗಳಿಗಾಗಿ ಕಾದು ಹತ್ತುತ್ತಿದ್ದಾರೆ. ಈ ವಿಚಾರದಲ್ಲಿಯೇ ಈ ಘಟನೆ ನಡೆದಿದೆ ಎಂದು ದೂರಲಾಗಿದೆ. 

READ:  ಬಿಗ್​ ಬಾಸ್ ಕಾರ್ಯಕ್ರಮದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಾಗರದ ವಕೀಲರಿಂದ ಡಿಜಿಪಿಗೆ ಪತ್ರ

ಸರ್ಕಾರಿ ಬಸ್ ನಿರ್ವಾಹಕ ಬಸ್​ನ್ನ ತೀರ್ಥಹಳ್ಳಿ ಬಸ್ ನಿಲ್ದಾಣಕ್ಕೆ ತಂದ ಬೆನ್ನಲ್ಲೆ ಖಾಸಗಿ ಬಸ್​ವೊಂದಕ್ಕೆ ಸೇರಿದವರು ಸರ್ಕಾರಿ ಬಸ್​ನ್ನ ತಡೆದು ಡ್ರೈವರ್​ನಿಂದ ಕೀ ಕಿತ್ತುಕೊಂಡಿದ್ದಾರೆ. ಅಲ್ಲದೆ ಡ್ರೈವರ್ ಹಾಗೂ ಕಂಡೆಕ್ಟರ್​ಗಳಿಗೆ ನಿಂದಿಸಿದ್ದಾರೆ. ಹಲ್ಲೆ ಸಹ ಮಾಡಿದ್ದಾರೆ ಎನ್ನಲಾಗಿದೆ. ಬಳಿಕ ಅಲ್ಲಿದ್ದವರು ಜಗಳ ಬಿಡಿಸಿದ್ದಾರೆ. ಸದ್ಯ ಈ ಸಂಬಂಧ ಕಂಪ್ಲೆಂಟ್ ಆಗಿದ್ದು ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ.