ಬಿಗ್​ ಬಾಸ್ ಕಾರ್ಯಕ್ರಮದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಾಗರದ ವಕೀಲರಿಂದ ಡಿಜಿಪಿಗೆ ಪತ್ರ

Sagar's lawyer writes to DGP seeking legal action against Bigg Boss show

ಬಿಗ್​ ಬಾಸ್ ಕಾರ್ಯಕ್ರಮದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಾಗರದ ವಕೀಲರಿಂದ ಡಿಜಿಪಿಗೆ ಪತ್ರ
Sagar's lawyer writes to DGP seeking legal action against Bigg Boss show

SHIVAMOGGA |  Dec 10, 2023 ಬಿಗ್ ಬಾಸ್ ಕಾರ್ಯಕ್ರಮದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ವಕೀಲರು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಅವರಿಗೆ ಪತ್ರ ಬರೆದಿದ್ದಾರೆ. ಸಾಗರ ತಾಲ್ಲೂಕು ಚಾಮರಾಜಪೇಟೆಯ ವಕೀಲರು ಕೆ.ವಿ. ಪ್ರವೀಣ್​ರವರು ಈ ಪತ್ರ ಬರೆದಿದ್ದಾರೆ 

ಏನಿದೆ ಪತ್ರದಲ್ಲಿ 

ವಿಷಯ: "ಕಲರ್ಸ್ ಕನ್ನಡ ಮನರಂಜನಾ ಚಾನಲ್‌ನಲ್ಲಿ ಮೂಡಿಬರುತ್ತಿರುವ ಬಿಗ್‌ಬಾಸ್ ಕಾರ್ಯಕ್ರಮವು ಅಶ್ಲೀಲ ಮತ್ತು ಆವಾಚ್ಯ ಪದಗಳ ಬಳಕೆ ಹಾಗೂ ಅತೀರೇಕದ ವರ್ತನೆಯನ್ನು ತಡೆಗಟ್ಟುವ ಸಂಬಂಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕೋರಿ"

READ : ಭದ್ರಾವತಿಯಲ್ಲಿ ದುಷ್ಕರ್ಮಿಗಳಿಂದ ಬಿಜೆಪಿ ಕಾರ್ಯಕರ್ತನ ಕಾರು ಪೀಸ್​ ಪೀಸ್! Facebook Post ಕಾರಣನಾ?

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕಲ್ಲರ್ಸ್ ಕನ್ನಡ ಮನರಂಜನಾ ಚಾನಲ್‌ನಲ್ಲಿ ಕಾರ್ಯಕ್ರಮವು ಬಿತ್ತರಗೊಳ್ಳುತ್ತಿದ್ದು ಇದು ಸ್ಪರ್ದಿಗಳ ನಡುವೆ ಅಶ್ಲೀಲ ಸಂಭಾಷಣೆ ಮತ್ತು ಅವಾಚ್ಯ ಪದಗಳ ಬಳಕೆ ಹಾಗೂ ಆತೀರೇಕದ ವರ್ತನೆ ನಡೆಯುತ್ತಿದೆ. ಅಲ್ಲದೇ ಸ್ಪರ್ದಿಗಳು ಚಪ್ಪಲಿಯಲ್ಲಿ ಹೊಡೆದುಕೊಳ್ಳುವ ದೃಶ್ಯಗಳು ಸಹ ಅತಿ ರೋಚಕವಾಗಿ ಬಿತ್ತರಗೊಳ್ಳುತ್ತಿವೆ. 

ಈ ಮೂಲಕ ಕುಟುಂಬ, ಸಮಾಜದಲ್ಲಿ ಕೆಟ್ಟ ಪರಿಣಾಮವನ್ನು ಬೀರುವ ಕಾರ್ಯಕ್ರಮವಾಗಿದೆ. ಅಲ್ಲದೆ ಈ ಕಾರ್ಯಕ್ರಮವು ನೈತಿಕ ಮಟ್ಟವು ಕುಸಿಯುವಂತಹ ಕಾರ್ಯಕ್ರಮವಾಗಿದೆ. ಇದರ ಚಿತ್ರೀಕರಣವು ಬಿಡದಿಯಲ್ಲಿ ನಡೆಯುತ್ತಿರುವ ಬಗ್ಗೆ ಮಾಹಿತಿ ಇದೆ. 

ಆದ್ದರಿಂದ 'ತಾವುಗಳು ಕಲ್ಲರ್ಸ್ ಕನ್ನಡ ಮನರಂಜನಾ ಚಾನಲ್‌ನಲ್ಲಿ ಮೂಡಿಬರುತ್ತಿರುವ ಬಿಗ್‌ಬಾಸ್ ಕಾರ್ಯಕ್ರಮವು ಅಶ್ಲೀಲ ಮತ್ತು ಅವಾಚ್ಯ ಪದಗಳ ಬಳಕೆ ಹಾಗೂ ಆತೀರೇಕದ ವರ್ತನೆಯನ್ನು ತಡೆಗಟ್ಟುವ ಸಂಬಂಧ ಸೂಕ್ತ ಕಾನೂನು ಕ್ರಮ ಜರುಗಿಸಿ ಈ ಕಾರ್ಯಕ್ರಮವನ್ನು ತಡೆಗಟ್ಟುವ ಸಂಬಂಧ ಸೂಕ್ತ ಕಾನೂನು ಕ್ರಮ ಜರುಗಿಸುಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.