ಬಂಗಾರ ಬಲು ಭಾರ | ದುಬಾರಿಯಾಯ್ತು ಚಿನ್ನದ ದರ | ಎಷ್ಟಿದೆ ಗೊತ್ತಾ ರೇಟು?

gold prices rise today

ಬಂಗಾರ ಬಲು ಭಾರ |  ದುಬಾರಿಯಾಯ್ತು ಚಿನ್ನದ ದರ | ಎಷ್ಟಿದೆ ಗೊತ್ತಾ ರೇಟು?
gold prices rise today

Shivamogga  Apr 17, 2024   | gold prices rise today  ಮಲೆನಾಡಿಗೆ ಅಡಿಕೆ ರೇಟಿನ ಏರಿಕೆ ಖುಷಿ ಕೊಡುತ್ತಿದೆಯಾದರೂ ಚಿನ್ನದ ಬೆಲೆ ಮತ್ತಷ್ಟು ದುಬಾರಿಯಾಗುತ್ತಿರುವುದು ಮಹಿಳೆಯರಿಗೆ ಬೇಸರ ಮೂಡಿಸ್ತಿದೆ. ಈ ಸಂಬಂಧ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದು,  ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಚಿನ್ನದ ದರವು ಮಂಗಳವಾರ ಮತ್ತೆ ಏರಿಕೆಯಾಗಿದೆ ಎನ್ನಲಾಗಿದೆ

ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ₹75,820ರಂತೆ ಮಾರಾಟವಾಗಿದ್ದರೆ, ಕೆ.ಜಿ ಬೆಳ್ಳಿ ಧಾರಣೆಯು ₹86,200ಕ್ಕೆ ಮುಟ್ಟಿದೆ.

ನವದೆಹಲಿಯ ಚಿನಿವಾರ ಪೇಟೆಯಲ್ಲಿ ಚಿನ್ನದ ದರವು 10 ಗ್ರಾಂ.ಗೆ ₹700 ಹೆಚ್ಚಳವಾಗಿ 73,750ರಂತೆ ಮಾರಾಟವಾಗಿದೆ. ಬೆಳ್ಳಿಯು ಕೆ.ಜಿಗೆ ₹800 ಏರಿಕೆಯಾಗಿ ₹86,500ಕ್ಕೆ ಮುಟ್ಟಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯು ಒಂದು ಔನ್ಸ್‌ಗೆ (28.34 ಗ್ರಾಂ) ಕ್ರಮವಾಗಿ 2,370 ಡಾಲರ್‌ (ಅಂದಾಜು ₹1.98 ಲಕ್ಷ) ಮತ್ತು 28.40 (ಅಂದಾಜು ₹2,374) ಡಾಲರ್‌ನಂತೆ ಮಾರಾಟವಾಗಿದೆ.