ಗೋವಾ ಪೊಲೀಸರಿಂದ ಶಿವಮೊಗ್ಗದ ಮೂವರ ಬಂಧನ! ಕಾರಣವೇನು? ಉಡುಪಿ ಪೊಲೀಸರಿಗೂ ಬೇಕಾಗಿದ್ದ ಆರೋಪಿ!

Goa police arrests three people from Shimoga What is the reason? Udupi police wanted the accused too!

ಗೋವಾ ಪೊಲೀಸರಿಂದ ಶಿವಮೊಗ್ಗದ ಮೂವರ ಬಂಧನ! ಕಾರಣವೇನು? ಉಡುಪಿ ಪೊಲೀಸರಿಗೂ ಬೇಕಾಗಿದ್ದ ಆರೋಪಿ!

KARNATAKA NEWS/ ONLINE / Malenadu today/ Jun 28, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆಯ ಮೂವರನ್ನ ಗೋವಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮೂವರು ಗೋವಾದಲ್ಲಿ ವಾಸಿಸುತ್ತಿದ್ದ ಮೂವರಿಂದ 23 ದುಬಾರಿ ಮೊಬೈಲ್​ಗಳನ್ನು ವಶಕ್ಕೆ ಪಡೆದಿದ್ಧಾರೆ.

  

ಪಣಜಿ ಪೊಲೀಸರು ಮೊಬೈಲ್​ ಕಳ್ಳರ ಜಾಲವನ್ನು ಭೇದಿಸಿದ್ದಾರೆ. ಸ್ಯಾಮ್​ಸಾಂಗ್ ಗೆಲಾಕ್ಸಿ ಮೊಬೈಲ್ ಕಳ್ಳತನ ಸಂಬಂಧ ದಾಖಲಾದ ದೂರಿನನ್ವಯ ತನಿಖೆ ನಡೆಸಿದ ಪೊಲೀಸರು ಶಿವಮೊಗ್ಗ ಮೂಲದ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. 25 ವರ್ಷದ ಡಿಕೆ ಲಕ್ಷ್ಮಣ ಹಾಗೂ 30 ವರ್ಷದ ಸಂದೀಪ್​ ಹಾಗೂ 35 ವರ್ಷದ ಸಂತೋಷ್ ಬಂಧಿತ ಆರೋಪಿಗಳು

ಕಮಲಮ್ಮ ಕೊಲೆ ಪ್ರಕರಣದ ಪ್ರಮುಖ ಅನುಮಾನಸ್ಪದ ಆರೋಪಿ ತಾಯಿ ಆತ್ಮಹತ್ಯೆಗೆ ಯತ್ನ!

ಗೋವಾದ ವಿವಿಧ ನಗರಗಳಲ್ಲಿ ಇವರು ಮೊಬೈಲ್ ಕಳ್ಳತನ ಮಾಡುತ್ತಿದ್ದರು, ಶಿಫ್ಟ್​ಗಳಲ್ಲಿ ಕೆಲಸ ಮಾಡುತ್ತಿದ್ದವರನ್ನ ಟಾರ್ಗೆಟ್ ಮಾಡುತ್ತಿದ್ದ ಇವರು,  ಶಿಫ್ಟ್​ನಲ್ಲಿ ಕೆಲಸ ಮುಗಿಸಿ ರೂಮಿಗೆ ಬರುವವರನ್ನು ಹಿಂಬಾಲಿಸುತ್ತಿದ್ದರು. ಷೇರಿಂಗ್ ರೂಮ್​ಗಳಲ್ಲಿ,  ಶಿಫ್ಟ್ ಮುಗಿಸಿ ರೂಮಿಗೆ ಬರುವವರಿಗಾಗಿ ಬಾಗಿಲು ತೆಗೆಯಬೇಕಾಗುತ್ತದೆ ಎಂದು ಡೋರ್​ನ್ನ ಲಾಕ್ ಮಾಡದೇ ಇರುವ ಅಭ್ಯಾಸವಿರುತ್ತದೆ. ಇದನ್ನ  ಬಂಡವಾಳ ಮಾಡಿಕೊಳ್ತಿದ್ದ ಈ ಆರೋಪಿಗಳು, ಅಂತಹ ರೂಮ್​ಗಳಿಗೆ ಹೋಗಿ ಮೊಬೈಲ್ ಕದ್ದು ಪರಾರಿಯಾಗುತ್ತಿದ್ದರು. ಹಾಗೊಂದು ವೇಳೆ ಯಾರಾದರೂ ವಿಚಾರಿಸಿದರೆ, ತಾವು ಮೂಗರು..ಮಾತು ಬರೋದಿಲ್ಲ ಏನಾದರೂ ಸಹಾಯ ಮಾಡಿ ಎಂದು ನಕಲಿ ವೈದ್ಯರ ಸರ್ಟಿಫಿಕೇಟ್​ಗಳನ್ನ ತೋರಿಸಿ ಬಚಾವ್ ಆಗುತ್ತಿದ್ದರು. 

ಸದ್ಯ ಈ ಆರೋಪಿಗಳನ್ನ ಬಂಧಿಸಿರುವ ಪೊಲೀಸರು ಆರೋಪಿಗಳಿಂದ 23 ದುಬಾರಿ ಮೊಬೈಲ್​ಗಳನ್ನ ಜಪ್ತಿ ಮಾಡಿದ್ದಾರೆ. ಇದರ ಮೌಲ್ಯ ಅಂದಾಜು ಏಳು ಲಕ್ಷ ರೂಪಾಯಿ. ಡಿಕೆ ಲಕ್ಷ್ಮಣ್​ ಗ್ಯಾಂಗ್ ಲೀಡರ್ ಆಗಿದ್ದು, ಈತ ಈಗಾಗಲೇ ಒಂದು ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾಗಿದೆ. ಇನ್ನೊಬ್ಬ ಆರೋಪಿ ಸಂದೀಪ್​ ಉಡುಪಿಯ ಮಣಿಪಾಲ್ ಪೊಲೀಸರಿಗೆ ಬೇಕಾಗಿರುವ ಆರೋಪಿಯಾಗಿದ್ದಾನೆ. ಮತ್ತೊಬ್ಬನ ಬಗ್ಗೆ ತನಿಖೆ ಮುಂದುವರಿದಿದೆ. 


BREAKING NEWS / ಇಂಜಿನಿಯರ್ ಪತ್ನಿಯ ಕೊಲೆ ಕೇಸ್! ಶಿವಮೊಗ್ಗ ಪೊಲೀಸರಿಂದ ಆರು ಮಂದಿ ಅರೆಸ್ಟ್!



ಶಿವಮೊಗ್ಗ ನಗರದಲ್ಲಿ ನಡೆದಿದ್ದ ಕಮಲಮ್ಮ ಕೊಲೆ ಪ್ರಕರಣದಲ್ಲಿ ಆರು ಆರೋಪಿಗಳನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. 17-06-23 ರ ಸಂಜೆ ಶಿವಮೊಗ್ಗ ನಗರದ ವಿಜಯ ನಗರದ 2ನೇ ತಿರುವಿನಲ್ಲಿ ಮನೆಯಲ್ಲಿದ್ದ ಒಂಟಿ ಮಹಿಳೆ ಕಮಲಮ್ಮ(57) ರ ಕೊಲೆ ಪ್ರಕರಣವನ್ನು ಶಿವಮೊಗ್ಗ ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಇವತ್ತು ಆರು ಆರೋಪಿಗಳನ್ನ ಬಂಧಿಸಿದ್ದಾರೆ. ಕಾರ್  ಡ್ರೈವರ್ ಹನುಮಂತ ನಾಯ್ಕ್​ ಸೇರಿದಂತೆ, ಆರು ಮಂದಿಯನ್ನ ಅರೆಸ್ಟ್ ಮಾಡಲಾಗಿದ್ದು, ಅವರನ್ನ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗಿದೆ. ಆರೋಪಿಗಳ ಪೈಕಿ ಮೂವರು ಅನುಪಿನಕಟ್ಟೆಯವರು, ಇಬ್ಬರು ಗುಂಡಪ್ಪಶೆಡ್ ನವರು ಹಾಗೂ ಓರ್ವ ಹುಣಸೋಡು ಮೂಲದವನು ಎಂಬುದಾಗಿ ತಿಳಿದುಬಂದಿದೆ.

ಇಂಜಿನಿಯರ್ ಪತ್ನಿಯ ಕೊಲೆ! ಮಿಸ್ಸಿಂಗ್​​ ಆದ 32 ಲಕ್ಷ ರೂಪಾಯಿ ಎಲ್ಲಿ? ಆತ ಗೋವಾಕ್ಕೆ ಹೋಗದೇ ಮನೇಗೇಕೆ ಬಂದಿದ್ದ! ನಿಗೂಢ ಹತ್ಯೆಯ ಇನ್​ಸೈಡ್ ಸ್ಟೋರಿ JP ಬರೆಯುತ್ತಾರೆ