NEW DELHI: | Dec 12, 2023 | ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲಬೆಲೆಭಾರೀ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇಳಿಕೆ ಮಾಡುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ ಎಂದು ವರದಿಗಳು ಹೇಳುತ್ತಿದ್ದು ಈ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
2022ರ ಲ್ಲಿ ಕಚ್ಚಾತೈಲ ಬೆಲೆ ಭಾರೀ ಏರಿಕೆ ಕಂಡಿದ್ದಾಗ ತೈಲ ಕಂಪನಿಗಳು ಪ್ರತಿ ಲೀ. ಪೆಟ್ರೋಲ್ ಗೆ 17 ಮತ್ತು ಡೀಸೆಲ್‌ಗೆ 35 ರು.ವರೆಗೂ ನಷ್ಟ ಅನುಭವಿಸುತ್ತಿದ್ದವು. ಆದರೆ ನಂತರ ದರದಲ್ಲಿ ಭಾರೀ ಇಳಿಕೆಯಾಗಿದೆ. ತೈಲ ಕಂಪನಿಗಳು ಪ್ರತಿ ಲೀ.ಪೆಟ್ರೋಲ್‌ಗೆ 7-10 ರು. ಮತ್ತು ಡೀಸೆಲ್‌ಗೆ 3-4 ರು. ಲಾಭ ಮಾಡಿಕೊಳ್ಳುತ್ತಿದೆ.
READ : ಹೊಸಮನೆ ನೋಡಿ ಬರುವಷ್ಟರಲ್ಲಿ ದಂಪತಿಗೆ ಎದುರಾಗಿತ್ತು ಶಾಕ್ | ರಾಯಲ್ ಎನ್ಫೀಲ್ಡ್ ಗಾಗಿ ಬೈಕ್ ಸವಾರನ ಹುಡುಕಾಟ
ಕಳೆದ 3 ತಿಂಗಳಲ್ಲಿ ಅಂದಾಜು 28000 ಕೋಟಿ ರು. ಲಾಭ ಮಾಡಿಕೊಂಡಿವೆ ಎಂದು ಹೇಳಲಾಗಿದೆ. ಇನ್ನೂ ಇದೀಗ ಲೋಕಸಭಾ ಚುನಾವಣೆಗೆ ಸಿದ್ದತೆಗಳು ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಇಂಧನ ದರ ಇಳಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇಂಧನ ಬೆಲೆ ಕಡಿಮೆ ಮಾಡಿದರೆ, ಹಣದುಬ್ಬರದ ಮೇಲೂ ಪರಿಣಾಮ ಬೀರಲಿದ್ದು ಅವಶ್ಯಕ ವಸ್ತುಗಳ ಬೆಲೆಯಲ್ಲಿಯು ರಿಯಾಯಿತಿ ಸಿಗುವ ಸಾಧ್ಯತೆ ಇದೆ. ಈ ಕಾರಣಕ್ಕೆ ಕೇಂದ್ರ ಸರ್ಕಾರ ಪೆಟ್ರೋಲ್ ಡೀಸೆಲ್ ದರ ಇಳಿಕೆಗೆ ಚಿಂತನೆ ನಡೆಸಿದೆಯೆಂದು ವರದಿ ತಿಳಿಸಿದೆ.
