ಹೊಸಮನೆ ನೋಡಿ ಬರುವಷ್ಟರಲ್ಲಿ ದಂಪತಿಗೆ ಎದುರಾಗಿತ್ತು ಶಾಕ್ | ರಾಯಲ್ ಎನ್​ಫೀಲ್ಡ್​ ಗಾಗಿ ಬೈಕ್ ಸವಾರನ ಹುಡುಕಾಟ

Here are the details of house burglary and bike theft cases in Shivamogga

ಹೊಸಮನೆ ನೋಡಿ ಬರುವಷ್ಟರಲ್ಲಿ ದಂಪತಿಗೆ ಎದುರಾಗಿತ್ತು ಶಾಕ್  |  ರಾಯಲ್ ಎನ್​ಫೀಲ್ಡ್​ ಗಾಗಿ ಬೈಕ್ ಸವಾರನ ಹುಡುಕಾಟ

SHIVAMOGGA |  Dec 12, 2023  |  ಶಿವಮೊಗ್ಗದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ರಾಯಲ್ ಎನ್ ಫೀಲ್ಡ್ ಬೈಕ್‌ ಕಳ್ಳತನವಾಗಿರುವ ಘಟನೆ ಸಂಭವಿಸಿದೆ. 

ಇಲ್ಲಿನ  ನಗರದ ಶರಾವತಿ ನಗರದಲ್ಲಿ  ಘಟನೆ ನಡೆದಿದೆ. ಶರಾವತಿ ನಗರದ ಸಂದೀಪ್ ಎಂಬುವವರು ಕೆಲಸ ಮುಗಿಸಿ ಬಂದು ರಾತ್ರಿ 9 ಗಂಟೆಗೆ ತಮ್ಮ ಮನೆ ಮುಂದೆ ಬೈಕ್ ನಿಲ್ಲಿಸಿದ್ದರು. 

ದೊಡ್ಡಪೇಟೆ ಪೊಲೀಸ್ ಠಾಣೆ

ಮರುದಿನ ಬೆಳಗ್ಗೆ ಎದ್ದು ನೋಡಿದಾಗ ಬೈಕ್‌ ಇರಲಿಲ್ಲ. ಎಲ್ಲೆಡೆ ಹುಡುಕಾಡಿದ ಸಂದೀಪ್ ಕೊನೆಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

READ : ksrtc ಬಸ್​ ನಿಲ್ದಾಣದಲ್ಲಿಯೇ ಮಹಿಳೆಯ ಮೇಲೆ ಹರಿದ ಬಸ್​! cctv ಯಲ್ಲಿ ದೃಶ್ಯ ಸೆರೆ

ಮನೆ ಬಾಗಿಲಿನ ಬೀಗ ಮುರಿದು ಕಳ್ಳತನ

ಇನ್ನೊಂದೆಡೆ  ಶಿವಮೊಗ್ಗ ತಾಲೂಕು ಗೋವಿಂದಾಪುರದಲ್ಲಿ ಮನೆ ಬಾಗಿಲ ಬೀಗ ಮುರಿದು ಚಿನ್ನಾಭರಣ ಮತ್ತು ನಗದು ದೋಚಿರುವ ಘಟನೆ ನಡೆದಿದೆ. 

ಇಲ್ಲಿನ ಮನೆಯೊಂದರ ನಿವಾಸಿ ಹಾಯ್‌ಹೊಳೆಯಲ್ಲಿ ಹೊಸ ಮನೆ ನಿರ್ಮಾಣ ಕಾರ್ಯ ವೀಕ್ಷಿಸಲು ತೆರಳಿದ್ದರು. ಈ ವೇಳೆ  ಗೋವಿಂದಾಪುರದ ವಾಸದ ಮನೆಯ ಬಾಗಿಲಿನ ಬೀಗ ಮುರಿದ ಕಳ್ಳರು ದೇವರ ಮನೆ ಸ್ಟೀಲ್ ಹುಂಡಿಯಲ್ಲಿಟ್ಟಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಮತ್ತು ₹1 ಲಕ್ಷ ನಗದು ಕಳವು ಮಾಡಿದ್ದಾರೆ.

 ತುಂಗಾ ನಗರ ಪೊಲೀಸ್ ಠಾಣೆ

ಕಳವಾಗಿರುವ ಚಿನ್ನಾಭರಣ ಮತ್ತು ನಗದು ಮೊತ್ತ ಒಟ್ಟು ₹2.95 ಲಕ್ಷ ಎಂದು ಎಂದು ಅಂದಾಜಿಸಲಾಗಿದೆ. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.