ತೀರ್ಥಹಳ್ಳಿಯ ಅಬ್ದುಲ್‌ ಮತೀನ್‌ ತಾಹ, ಮುಸಾವಿರ್‌ ಹುಸೇನ್‌ ಶಾಜೀಬ್‌ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

Do you know how Abdul Mateen Taha, Musavir Hussain Shajeeb of Tirthahalli was caught?

ತೀರ್ಥಹಳ್ಳಿಯ ಅಬ್ದುಲ್‌ ಮತೀನ್‌ ತಾಹ, ಮುಸಾವಿರ್‌ ಹುಸೇನ್‌ ಶಾಜೀಬ್‌ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?
Abdul Mateen Taha, Musavir Hussain Shajeeb

Shivamogga  Apr 16, 2024  ಬೆಂಗಳೂರು ರಾಮೇಶ್ವರಂ ಕಫೆ ಸ್ಫೋಟ ಪ್ರಕರಣದಲ್ಲಿ  ಮತ್ತೊಂದು ಸುದ್ದಿ ಹೊರಬಿದ್ದಿದೆ. ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಅಬ್ದುಲ್‌ ಮತೀನ್‌ ತಾಹ ಹಾಗೂ ಮುಸಾವಿರ್‌ ಹುಸೇನ್‌ ಶಾಜೀಬ್‌ ಎಂಬಿಬ್ಬರ ಬಂಧನ ಹೇಗಾಯ್ತು  ಎಂಬುದರ ಬಗ್ಗೆ ರಾಷ್ಟ್ರೀಯ ಮಾಧ್ಯಮವೊಂದು ಸುದ್ದಿ ಮಾಡಿದೆ. 

 Abdul Mateen Taha, Musavir Hussain Shajeeb 

ವರದಿ ಮೂಲಗಳ ಪ್ರಕಾರ, ಮತೀನ್‌ ಹಾಗೂ ಶಾಜೀಬ್‌ ರವರಿಗೆ ಸಂಬಂಧಿಸಿದ ಅಕೌಂಟ್‌ಗಳ ಮೂಲಕ ಅವರನ್ನ ಟ್ರೇಸ್‌ ಮಾಡಲಾಗಿದೆ ಎಂಬ ವಿವರ ಲಭ್ಯವಾಗಿದೆ. ಎನ್‌ಐಎ ಹಾಗೂ ಐಬಿ ಆರೋಪಿಗಳ ಅಕೌಂಟ್‌ ಟ್ರಾಂಜೇಕ್ಷನ್‌ ಬಗ್ಗೆ ವಿಶೇಷವಾದ ನಿಗಾ ಹರಿಸಿತ್ತು. ಶಂಕಿತ ಬೇನಾಮಿ ಅಕೌಂಟ್‌ಗಳು ಹಾಗೂ ಈಗಾಗಲೇ ಪತ್ತೆಯಾಗಿದ್ದ ಆರೋಪಿಗಳು ನೀಡಿದ್ದ ಸುಳಿವನ್ನ ಆಧರಿಸಿದ ಅಕೌಂಟ್‌ ಮೇಲೆ ತನಿಖಾ ಸಂಸ್ಥೆಗಳು ನಿಗಾವಹಿಸಿ ಪರಿಶೀಲನೆ ನಡೆಸಿದ್ದವು. 

ಈ ನಡುವೆ ತೀರ್ಥಹಳ್ಳಿ ಶಂಕಿತರ ಸಂಪರ್ಕದಲ್ಲಿದ್ದ ಅನಾಮದೇಯ ಹ್ಲಾಂಡ್ಲರ್‌ನಿಂದ ಹಣವು ಮತೀನ್‌ ಮತ್ತು ಶಾಜೀಬ್‌ರ ಬೇನಾಮಿ ಅಕೌಂಟ್‌ಗೆ ಟ್ರಾನ್ಸಫರ್‌ ಆಗಿರುವುದು ಗೊತ್ತಾಗಿದೆ. ಹಣ ಖಾಲಿಯಾಗಿದ್ದರಿಂದ ಇಬ್ಬರಿಗೂ ಬೇರೆಯವರಿಂದ ದುಡ್ಡು ಹಾಕಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಆದರೆ ಈ ಬಗ್ಗೆ ಕಣ್ಣಿಟ್ಟಿದ್ದ ಎನ್‌ಐಎ ಹಣವನ್ನು ಕ್ಯಾಶ್‌ ಮಾಡಿಸಿಕೊಳ್ಳುವ ಪ್ರಕ್ರಿಯೆಯವರೆಗೂ ಕಾದು ಕುಳಿತಿತ್ತು. ಒಮ್ಮೆ ಹಣವನ್ನ ರಿಲೀಸ್‌ ಮಾಡಿಕೊಂಡ ಬಳಿಕ ಆರೋಪಿಗಳ ಲೊಕೆಶನ್‌ ಟ್ರೇಸ್‌ ಮಾಡಿದ ಎನ್‌ಐಎ ಹಾಗೂ ಐಬಿ ಅಲ್ಲಿಯ ಲೋಕಲ್‌ ಪೊಲೀಸರ ಜೊತೆಗೂಡಿ ಆರೋಪಿಗಳನ್ನ ಸೆರೆ ಹಿಡಿದಿದೆ ಎನ್ನಲಾಗಿದೆ. 

ಇನ್ನೂ ಮತೀನ್‌ ಹಾಗೂ ಶಾಜೀಬ್‌ ಪಶ್ಚಿಮಬಂಗಾಳದ ಮೂಲಕ ಬಾಂಗ್ಲಾದೇಶಕ್ಕೆ ಹೋಗಿ ಅಲ್ಲಿಂದ ನೇಪಾಳ ತಲುಪಿ ಅಲ್ಲಿ ಫೇಕ್‌ ಪಾಸ್‌ಪೋರ್ಟ್‌ ಮಾಡಿಸಿಕೊಂಡು ಸಿರಿಯಾ ಅಥವಾ ಪಾಕಿಸ್ತಾನಕ್ಕೆ ಹೋಗುವ ಪ್ಲಾನ್‌ನಲ್ಲಿದ್ದರು ಎಂದು ಹೇಳಲಾಗಿದೆ. ಸದ್ಯ ಎನ್‌ಐಎ ತನಿಖೆ ಇನ್ನಷ್ಟು ಆಳವಾಗಿ ಸಾಗಿದೆ.