ರಾಮೇಶ್ವರಂ ಕಫೆ ಸ್ಫೋಟ ಕೇಸ್‌ನಲ್ಲಿ NIA ನಿಂದ ತೀರ್ಥಹಳ್ಳಿಯ ಎ ಒನ್‌ ಆರೋಪಿ ಅರೆಸ್ಟ್!‌

NIA Arrests A One Accused of Thirthahalli in Rameswaram Cafe Blast Case!

ರಾಮೇಶ್ವರಂ ಕಫೆ ಸ್ಫೋಟ ಕೇಸ್‌ನಲ್ಲಿ NIA ನಿಂದ ತೀರ್ಥಹಳ್ಳಿಯ ಎ ಒನ್‌ ಆರೋಪಿ ಅರೆಸ್ಟ್!‌
Rameswaram Cafe Blast Case, Thirthahalli

Shivamogga  Apr 7, 2024 Bangalore Rameswaram Cafe Blast  ಬೆಂಗಳೂರು ರಾಮೇಶ್ವರಂ ಕಫೆ ಸ್ಫೋಟ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳ ಮತ್ತೊಂದು ಬಿಗ್‌ ಮೂವ್‌ ತೋರಿದೆ. ಪ್ರಕರಣದಲ್ಲಿ ಟೆಕ್ನಿಲ್‌ ಎವಿಡೆನ್ಸ್‌ ಹಾಗೂ ರಿವರ್ಸ್‌ ಇನ್ವೆಸ್ಟಿಗೇಷನ್‌ ನಲ್ಲಿ ತೊಡಗಿರುವ ಎನ್‌ಐಎ ಪ್ರಕರಣ ಸಂಬಂಧ ಎ ಒನ್‌ ಆರೋಪಿಯನ್ನ ಅರೆಸ್ಟ್‌ ಮಾಡಿದೆ. ಬೆಂಗಳೂರು ಪರಪ್ಪನ ಅಗ್ರಹಾರದಲ್ಲಿ ಶಿವಮೊಗ್ಗ ಟ್ರಯಲ್‌ ಬ್ಲಾಸ್ಟ್‌ ಕೇಸ್‌ ಅಡಿಯಲ್ಲಿ ವಿಚಾರಣಾದೀನ ಕೈದಿಯಾಗಿರುವ ತೀರ್ಥಹಳ್ಳಿ ಮಾಜ್‌ ಮುನೀರ್‌ ಇಡೀ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. 



ಈ ಹಿಂದೆ ರಾಮೇಶ್ವರಂ ಕಫೆ ಸ್ಫೋಟ ಸಂಬಂಧ NIA  ಮಾಜ್‌ ಮುನೀರ್‌ನನ್ನ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿತ್ತು. ಅದರ ಬೆನ್ನಲ್ಲೆ ಎನ್‌ಐಎಗೆ ಕಫೆ ಸ್ಫೋಟದ ಆರೋಪಿಗಳು ತೀರ್ಥಹಳ್ಳಿಯ ಶರೀಫ್‌ ಎಂಬುದು ಗೊತ್ತಾಗಿತ್ತು. ಶಿವಮೊಗ್ಗ ಪೊಲೀಸರ ಸಹಾಯದಿಂದ ಈ ಬಗ್ಗೆ ಮಾಹಿತಿ ಪಡೆದ ಎನ್‌ಐಎ ಟೆಕ್ನಿಕಲ್‌ ಎವಿಡೆನ್ಸ್‌ ಅಡಿಯಲ್ಲಿ ರಾಜ್ಯದ 18 ಕಡೆಗಳಲ್ಲಿ ರೇಡ್‌ ನಡೆಸಿತ್ತು. ತೀರ್ಥಹಳ್ಳಿಯಲ್ಲಿಯು ಈ ಸಂಬಂಧ ದಾಳಿ ನಡೆದಿತ್ತು. 

ಇದಾದ ಬೆನ್ನಲ್ಲೆ ಮುಜಾಮಿಲ್‌ ಎಂಬಾತನನ್ನ ಎನ್‌ಐಎ ಲಿಫ್ಟ್‌ ಮಾಡಿತ್ತು. ಆತನು ಇಡೀ ಪ್ರಕರಣಕ್ಕೆ ದೊಡ್ಡ ಬ್ರೇಕ್‌ ಥ್ರೂ ನೀಡಿದ್ದಾನೆ. ಆತನ ಮೂಲಕ ಪ್ರಕರಣದ ಬಹುಮುಖ್ಯ ಕಲೆಹಾಕಿದ್ದ ಎನ್‌ಐಎ ತೀರ್ಥಹ‍ಳ್ಳಿಯಲ್ಲಿ ಮತ್ತೆ ಮೂವರನ್ನ ತನ್ನ ವಿಚಾರಣೆಗೆ ಗೌಪ್ಯವಾಗಿ ಕರೆದುಕೊಂಡು ಹೋಗಿತ್ತು. ಇದರಲ್ಲಿದ್ದ ಬಿಜೆಪಿ ಕಾರ್ಯಕರ್ತ ಎನ್‌ಐಎ ವಿಚಾರಣೆ ಮುಗಿಸಿ ಹೊರಕ್ಕೆ ಬಂದು ತಮ್ಮ ಐಡಿ ಮಿಸ್‌ ಯೂಸ್‌ ಆಗಿರುವ ಬಗ್ಗೆ ಮಾಹಿತಿ ನೀಡಿದ್ದರು. 

ಇವೆಲ್ಲದರ ನಡುವೆ ಎನ್‌ಐಎ ಮಾಜ್‌ ಮುನೀರ್‌ನನ್ನ ಅರೆಸ್ಟ್‌ ಎಂದು ತೋರಿಸಿದ್ದು, ಆತನನ್ನೆ ಏ ಒನ್‌ ಆರೋಪಿಯನ್ನಾಗಿಸಿದೆ. ಮತೀನ್‌ ಹಾಗೂ ಶರೀಫ್‌ ಎ 2 ಮತ್ತು ಎ 3 ಆರೋಪಿಗಳು. ನಾಲ್ಕನೇ ಆರೋಪಿ ಮುಜಾಮಿಲ್‌ ಆಗಿದ್ದಾನೆ. ಇವರಷ್ಟೆ ಅಲ್ಲದೆ ಇನ್ನಷ್ಟು ಮಂದಿಯನ್ನ ಎನ್‌ಐಎ ವಿಚಾರಣೆ ನಡೆಸ್ತಿದ್ದು, ಶೀ‍ಘ್ರದಲ್ಲಿಯೇ ಇಡೀ ಕೇಸ್‌ನ ಮೂಲ ಹುಡುಕುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.