ದರ ಕಡಿಮೆಯಾಗೋದಕ್ಕೆ , ಅಡಿಕೆ ಕಳ್ಳಸಾಗಾಣಿಕೆ ಕಾರಣವಾ? ಮಿಜೋರಾಂನಲ್ಲಿ ಮಯನ್ಮಾರ್​ ಅಡಿಕೆ ಲಾರಿಗಳಿಗೆ ಬೆಂಕಿ ಹಚ್ಚಿದ್ದೇಕೆ?

ಇಲ್ಲಿ ಕಡಿಮೆ ರೇಟ್​ಗೆ ವಿದೇಶಿ ಅಡಿಕೆಗಳನ್ನು ಕಳ್ಳ ಸಾಗಾಣಿಕೆ ಮಾಡುವುದರಿಂದ ಸ್ಥಳೀಯ ಅಡಿಕೆಗೆ ಬೆಲೆ ಸಿಗುತ್ತಿಲ್ಲ ಎಂಬುದು ಬೆಳೆಗಾರರ ಆರೋಪವಾಗಿದೆ.

ದರ ಕಡಿಮೆಯಾಗೋದಕ್ಕೆ , ಅಡಿಕೆ ಕಳ್ಳಸಾಗಾಣಿಕೆ ಕಾರಣವಾ? ಮಿಜೋರಾಂನಲ್ಲಿ ಮಯನ್ಮಾರ್​ ಅಡಿಕೆ ಲಾರಿಗಳಿಗೆ ಬೆಂಕಿ ಹಚ್ಚಿದ್ದೇಕೆ?

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್​ನಲ್ಲಿ ಇವತ್ತು ಸುದ್ದಿಗೋಷ್ಟಿ ನಡೆಸ್ತಾ, ಕಾಂಗ್ರೆಸ್​ ಮುಖಂಡ ರಮೇಶ್ ಹೆಗ್ಡೆಯವರು, ಅಡಿಕೆ ದರ ಕಾರಣಕ್ಕೆ ಕಳ್ಳಸಾಗಾಣಿಕೆಯು ನೇರ ಕಾರಣ ಎಂದು ಆರೋಪಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಿಜೋರಾಂ ಕಾಂಗ್ರೆಸ್​ ನಾಯಕರು ಸಂಸತ್​ನಲ್ಲಿ ಪ್ರಶ್ನೆಯೊಂದನ್ನು ಎತ್ತಿದ್ದರು, ವಿದೇಶಗಳಿಂದ ಮಯನ್ಮಾರ್​ ಬಾರ್ಡರ್​ನ ಮೂಲಕ ಅಡಿಕೆ ಕಳ್ಳಸಾಗಾಣಿಕೆಯಾಗುತ್ತಿದೆ.

ಇದನ್ನು ಸಹ ಓದಿ :ಅಡಿಕೆ ದರ ಕ್ವಿಂಟಾಲ್​ಗೆ 20 ಸಾವಿರ ಕಡಿಮೆಯಾಗಲು ಬಿಜೆಪಿ ಕಾರಣ? | ಗುಟ್ಕಾ ವ್ಯಾಪಾರಸ್ಥರ ಪರ ನಿಂತ ಮೋದಿ ಸರ್ಕಾರ | ಕಾಂಗ್ರೆಸ್​ ಆರೋಪವೇನು

ಆದರೆ ಮಿಜೋರಾಂ ತ್ರಿಪುರಾದ ಅಡಿಕೆ ಅಸ್ಸಾಂನಲ್ಲಿ ಮಾರಲಾಗ್ತಿಲ್ಲ. ಇದು ಸರಿಯಲ್ಲ ಎಂದು ಪ್ರಶ್ನಿಸಿದ್ದರು. ಇದರ ಬೆನ್ನಲ್ಲೆ ಮಯನ್ಮಾರ್​ನಿಂದ ಕಳ್ಳಸಾಗಾಣಿಕೆ ಮಾಡಲಾಗ್ತಿದೆ ಎಂದು ಹೇಳಲಾದ ಆರು ವಾಹನಗಳಿಗೆ ಪಶ್ಚಿಮ ಮಿಜೋರಾಂನ ಮಾಮಿತ್ ಜಿಲ್ಲೆಯಲ್ಲಿ ಬೆಂಕಿ ಹಚ್ಚಲಾಗಿದೆ.  ಜಮುವಾಂಗ್ ಮತ್ತು ಜೌಲ್ನುವಾಮ್ ಗ್ರಾಮಗಳ ಬಳಿಯ ರಾಷ್ಟ್ರೀಯ ಹೆದ್ದಾರಿ -108 ರಲ್ಲಿ ಕಳೆದ  ಶನಿವಾರ ಈ ಘಟನೆ ಸಂಭವಿಸಿದೆ.

ಇದನ್ನು ಸಹ ಕ್ಲಿಕ್ ಮಾಡಿ : ಜಿ20 ಸಭೆಗಾಗಿ ಬೆಂಗಳೂರಿನಲ್ಲಿ ಬೀಡುಬಿಟ್ಟ ಸಕ್ರೆಬೈಲ್​ನ ಜೋಡಿ ಆನೆಗಳು | ಏನಿದು ವಿಶೇಷ ಗೊತ್ತಾ | Exclusive

ಸುಮಾರು 50 ಜನರ ಗುಂಪು ವಾಹನಗಳನ್ನು ತಡೆದು ಸರಕು ಸಾಗಣೆ ವಾಹನಗಳಿಗೆ ಬೆಂಕಿ ಹಚ್ಚಿದೆ. ಇದಕ್ಕೂ ಒಂದು ತಿಂಗಳಿಗೂ ಮೊದಲೇ ಇಲ್ಲಿನ ಬೆಳೆಗಾರರು ಅಡಿಕೆ ಕಳ್ಳಸಾಗಾಣಿಕೆಯನ್ನು ತಡೆಯದಿದ್ದರೇ ಎಚ್ಚರಿಕೆ ಎಂದು ಪ್ರತಿಭಟಿಸಿದ್ದರು. ಅದರ ಬೆನ್ನಲ್ಲೆ ಈ ಘಟನೆ ನಡೆದಿದೆ. ಇಲ್ಲಿ ಕಡಿಮೆ ರೇಟ್​ಗೆ ವಿದೇಶಿ ಅಡಿಕೆಗಳನ್ನು ಕಳ್ಳ ಸಾಗಾಣಿಕೆ ಮಾಡುವುದರಿಂದ ಸ್ಥಳೀಯ ಅಡಿಕೆಗೆ ಬೆಲೆ ಸಿಗುತ್ತಿಲ್ಲ ಎಂಬುದು ಬೆಳೆಗಾರರ ಆರೋಪವಾಗಿದೆ. 

ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ವಾಟ್ಸ್ಯಾಪ್​ ಗ್ರೂಪ್​ನ ಲಿಂಕ್​ಗೆ ಕ್ಲಿಕ್ ಮಾಡಿ :  Whatsapp link