ದೇಶದ ಅತಿದೊಡ್ಡ ಸೆಕ್ಸ್ ರಾಕೆಟ್ ಬಯಲು/ 14 ಸಾವಿರಕ್ಕೂ ಹೆಚ್ಚು ಮಹಿಳೆಯರ ರಕ್ಷಣೆ/

ಮಾದಕ ಬಲೆಯಲ್ಲಿ ರಾಜ್ಯದ 2500 ಹೆಣ್ಮಕ್ಕಳು , ಕರ್ನಾಟಕದಲ್ಲಿ ದಾಖಲಾದ ಮಿಸ್ಸಿಂಗ್​ ಪ್ರಕರಣಗಳಿಗೆ ಮರಜೀವ ಸಾಧ್ಯತೆ , ಬೆಂಗಳೂರು ಕಾಲ್​ ಸೆಂಟರ್​, ಹೈದ್ರಾಬಾದ್ ಹೋಟೆಲ್, ವಾಟ್ಸ್ಯಾಪ್​ನಲ್ಲಿಯೇ ಡೀಲ್​, ಡಿಜಿಟಲ್ ಪೇಮೆಂಟ್​, ಡ್ರಗ್ಸ್​ ಕೊಟ್ಟು ಅಮಾಯಕ ಹುಡುಗಿಯರಿಗೆ ಗಾಳ

ದೇಶದ ಅತಿದೊಡ್ಡ ಸೆಕ್ಸ್  ರಾಕೆಟ್ ಬಯಲು/ 14 ಸಾವಿರಕ್ಕೂ ಹೆಚ್ಚು  ಮಹಿಳೆಯರ ರಕ್ಷಣೆ/

ಸೈದರಾಬಾದ್ ಪೊಲೀಸರು ಕಳೆದ ಮಂಗಳವಾರ ಹೈದ್ರಾಬಾದ್​ ನಗರದಲ್ಲಿ 14,000 ಕ್ಕೂ ಹೆಚ್ಚು ಮಹಿಳೆಯರನ್ನು ರಕ್ಷಣೆ ಮಾಡಿದ್ಧಾರೆ, ಇಷ್ಟೊಂದು ದೊಡ್ಡ ಪ್ರಮಾಣದ ಮಹಿಳೆಯರನ್ನು ಬಳಸಿಕೊಂಡು ನಡೆಸಲಾಗುತ್ತಿದ್ದ  ವೇಶ್ಯಾವಾಟಿಕೆ ದಂಧೆಯನ್ನು  ಪೊಲೀಸರು ಭೇದಿಸಿದ್ದಾರೆ. ಹೈದ್ರಾಬಾದ್​  ಕೆಲವು ಪ್ರಮುಖ ಹೋಟೆಲ್ಗಳಲ್ಲಿ ಸರಣಿ ದಾಳಿಗಳನ್ನು ನಡೆಸಿದ ಪೊಲೀಸರು ಅಲ್ಲಿನ ಪ್ರಮುಖ ಹೋಟೆಲ್ನ ಮ್ಯಾನೇಜರ್ ಸೇರಿದಂತೆ 17 ಜನರನ್ನು ಬಂಧಿಸಿದ್ದಾರೆ.  

ಇದನ್ನು ಸಹ ಓದಿ:  ಮರಗಳ್ಳರ ಜೊತೆ ಕೈ ಜೋಡಿಸಿ, ಮರ ಕಡಿಸಿದ ಅರಣ್ಯ ರಕ್ಷಕನಿಗೆ ಅಮಾನತ್ತಿನ ಬದಲು ವರ್ಗಾವಣೆ ಉಡುಗೊರೆ ನೀಡಿದರಾ ಡಿಸಿಎಫ್

ಅತಿದೊಡ್ಡ ಸೆಕ್ಸ್​ ರಾಕೇಟ್​ :  ಇನ್ನೂ ದೇಶದಲ್ಲಿಯೇ ಇಷ್ಟೊಂದು ದೊಡ್ಡ ಪ್ರಮಾಣ ಸೆಕ್ಸ್​ ರಾಕೇಟ್ ಇರೋದು ಪತ್ತೆಯಾಗಿದ್ದು ಇದೆ ಮೊದಲು. 14 ಸಾವಿರಕ್ಕೂ ಅಧಿಕ ಮಹಿಳೆಯರ ರಕ್ಷಣೆ ಹಲವು ನಾಪತ್ತೆ ಪ್ರಕರಣಗಳನ್ನು ಭೇದಿಸಲು ಸಹಾಯವಾಗುವ ನಿರೀಕ್ಷೆಯಿದೆ. ಪೊಲೀಸ್​ ಇಲಾಖೆಗಳ ವೈಫಲ್ಯವೇ ಇಂತಹದ್ದೊಂದು ಅತಿದೊಡ್ಡ ಮಾಂಸ ದಂಧೆ ನಡೆಯುವುದಕ್ಕೆ ಕಾರಣ ಎನ್ನಲಾಗುತ್ತಿದೆ. 

ಇದನ್ನು ಸಹ ಓದಿ : ಸಿಟಿ ಸೆಂಟರ್​ ಮಾಲ್​ ಬಳಿ, ಹಳೇ ಹುಡುಗನ ರಂಪಾಟ/ ಹುಡುಗಿಯನ್ನ ಅಡ್ಡಗಟ್ಟಿ ಹಲ್ಲೆ/ ಬೆನ್ನಟ್ಟಿ ಹೋಗಿ ಮೊಬೈಲ್​, ವಾಚ್​ ಕಿತ್ಕೊಂಡು ಹೋದ

ಹೈಫೈ ಕಾಂಟಾಕ್ಟ್​/ ಹೈಟೆಕ್​ ನೆಟ್​ವರ್ಕ್​ :  ಈ ದಂಧೆ ಎಷ್ಟು ಹೈಟೆಕ್​ ಆಗಿತ್ತು ಎಂದರೆ,  ಇಡೀ ಗ್ಯಾಂಗ್ಬೆಂಗಳೂರು ಮತ್ತು ದೆಹಲಿಯ ಕೆಲವು ಕಾಲ್ ಸೆಂಟರ್​ಗಳ ಮೂಲಕ ವಹಿವಾಟು ನಡೆಸ್ತಿತ್ತು. ಅಲ್ಲದೆ ಕೇವಲ  ವಾಟ್ಸಾಪ್ ಮೂಲಕ ಮಾಂಸದ ವ್ಯಾಪಾರ ಸಕ್ರಿಯವಾಗಿತ್ತು. ಇನ್ನೂ  ಫೋನ್ ಪೇ, ಗೂಗಲ್ ಪೇ ಅಥವಾ ಪೇಟಿಎಂನಂತಹ ಡಿಜಿಟಲ್ ಅಪ್ಲಿಕೇಶನ್ಗಳನ್ನು ಅನೈತಿಕ ಚಟುವಟಿಕೆಗಳ ಪೇಮೆಂಟ್​ಗಳಿಗೆ ಬಳಸಿಕೊಳ್ಳಲಾಗುತ್ತಿತ್ತು. 

ಇದನ್ನು ಸಹ ಓದಿ : ಹಂದಿ ಅಣ್ಣಿ ಹತ್ಯೆಯ ಪ್ರಮುಖ ಆರೋಪಿ ಕಾಡಾ ಕಾರ್ತಿಗೆ ಆರು ತಿಂಗಳು ಶಿಕ್ಷೆ/ 2 ಸಾವಿರ ರೂಪಾಯಿ ದಂಡ

ಕಾಲ್​ ಸೆಂಟರ್ ಕಳ್ಳ ವ್ಯವಹಾರ : ಕಾಲ್​ಸೆಂಟರ್​ ಮೂಲಕ ಗಿರಾಕಿಗಳನ್ನು ತಲುಪಿ, ಅವರಿಗೆ ವಾಟ್ಸ್ಯಾಪ್​ಗಳಲ್ಲಿ ಯುವತಿಯರ ಚಿತ್ರಗಳನ್ನು ಕಳುಹಿಸಿ, ನಂತರ ಪೇಮೆಂಟ್ ಆ್ಯಪ್​ಗಳ ಮೂಲಕ ಹಣ ಪಡೆದುಕೊಳ್ಳಲಾಗುತ್ತಿತ್ತು. ಆನಂತರ ನಿರ್ದಿಷ್ಟ ಜಾಗದ ವಿಳಾಸಗಳನ್ನು ನೀಡಲಾಗುತ್ತಿತ್ತು. ಇಷ್ಟೊಂದು ವ್ಯವಸ್ಥಿತವಾಗಿ ನಡೆಯುತ್ತಿದ್ದ ದಂಧೆಯನ್ನು ಇದೀಗ ಪೊಲೀಸರ ಭೇದಿಸಿದ್ಧಾರೆ.

ಇದನ್ನು ಸಹ ಓದಿ : ಕಾಳಿಂಗ ಸರ್ಪದ ರೋಷಾವೇಷ ಹೇಗಿರುತ್ತೆ ನೋಡಿ

ಕರ್ನಾಟಕದ ಮಿಸ್ಸಿಂಗ್ ಮಹಿಳೆಯರ ರಕ್ಷಣೆ : ಇನ್ನೂ ಈ ಬಗ್ಗೆ ಮಾತನಾಡಿರುವ  ಸೈಬರಾಬಾದ್ ಪೊಲೀಸ್ ಕಮಿಷನರ್ ಸ್ಟೀಫನ್ ರವೀಂದ್ರ ಅವರು , ಸುಮಾರು 14,190 ಸಂತ್ರಸ್ತರನ್ನು ರಕ್ಷಿಸಿದ್ದೇವೆ. ಅವರೆಲ್ಲಾ ತೆಲಂಗಾಣ, ಕರ್ನಾಟಕ, ದೆಹಲಿ, ಮುಂಬೈ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಹೊರತುಪಡಿಸಿ ತವರು ರಾಜ್ಯ ಆಂಧ್ರಪ್ರದೇಶದಿಂದ ಬಂದವರು ಎಂದು ತಿಳಿಸಿದ್ದಾರೆ.

ಇದನ್ನು ಸಹ ಓದಿ : ಉರುಳಿಗೆ ಸಿಲುಕಿ ಒದ್ದಾಡಿ ಪ್ರಾಣ ಬಿಟ್ಟ ಚಿರತೆ! ರಕ್ಷಿಸಬೇಕಾಗಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳು ಎಡವಿದ್ದೆಲ್ಲಿ

ಮಾದಕ ವಸ್ತುವಿನ ಕರಾಳ ದಂಧೆ : ಇನ್ನೂ ಬಂಧಿತ 17 ಮಂದಿ ಪೈಕಿ ಏಳು ಮಂದಿ ಸಂಘಟಕರಾಗಿದ್ದರೇ, ಉಳಿದ 10 ಮಂದಿ ವಿವಿಧ ಸಿಟಿಗಳಲ್ಲಿ ಬ್ರೋಕರ್​ಗಳಾಗಿದ್ದವರು. ಇವರು ಕಾಲ್​ಸೆಂಟರ್​ ಮೂಲಕ, ಕೆಲಸದ ಆಮೀಷ ನೀಡಿ ಮಹಿಳೆಯರನ್ನ ಕರೆಸಿಕೊಳ್ಳುತ್ತಿದ್ರು. ಆನಂತರ ಅವರಿಗೆ ಮಾದಕ ವಸ್ತು ಕೊಟ್ಟು, ಅವರ ಅಶ್ಲೀಲ ಚಿತ್ರ ತೆಗೆದು ಗ್ರಾಹಕರಿಗೆ ಕಳಿಸ್ತಿದ್ದರು. ಓಯೋ ಹೋಟೆಲ್​ ಮೂಲಕ ಗ್ರಾಹಕರನ್ನು ನಿರ್ವಹಿಸುತ್ತಿದ್ರು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಇನ್ನೂ ಈ ಪ್ರಕರಣದ ಬೆನ್ನು ಬಿದ್ದ ಪೊಲೀಸರು, ದೊಡ್ಡ ರಾಕೇಟ್​ನ್ನು ಬಯಲು ಮಾಡಿದ್ಧಾರೆ. 

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link