ಹಂದಿ ಅಣ್ಣಿ ಹತ್ಯೆಯ ಪ್ರಮುಖ ಆರೋಪಿ ಕಾಡಾ ಕಾರ್ತಿಗೆ ಆರು ತಿಂಗಳು ಶಿಕ್ಷೆ/ 2 ಸಾವಿರ ರೂಪಾಯಿ ದಂಡ

Malenadu Today

ಶಿವಮೊಗ್ಗ :  ಹಂದಿ ಅಣ್ಣಿಯ ಹತ್ಯೆಯ (handi anni murder) ಪ್ರಮುಖ ಆರೋಪಿ ಕಾಡಾ ಕಾರ್ತಿಗೆ ಶಿವಮೊಗ್ಗ ಕೋರ್ಟ್​ ಆರು ತಿಂಗಳ ಶಿಕ್ಷೆ ವಿಧಿಸಿದೆ. ಕೋರ್ಟ್ಗೆ ಹಾಜರಾಗದೇ ತಪ್ಪಿಸಿ ತಿರುಗುತ್ತಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆತನಿಗೆ ಈ ಶಿಕ್ಷೆ ವಿಧಿಸಲಾಗಿದೆ. 

29 ವರ್ಷದ ಕಾರ್ತಿಕ @ ಕಾಡ,(kada karti)  ವಿನೋಬನಗರ ಠಾಣೆಯ ಒಟ್ಟು 4 ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಆದರೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ, ಈತನ ವಿರುಧ್ಧ ಕೋರ್ಟ್ ದಸ್ತಗಿರಿ ವಾರೆಂಟ್ & ಪ್ರೋಕ್ಲಮೇಷನ್ ಹೊರಡಿಸಿತ್ತು. 

ಇದನ್ನು ಸಹ ಓದಿ : Handi anni Exclusive fallowup Report ಅಣ್ಣಾ ನಿನ್ನ ಕೊಂದವರನ್ನು ಬಿಡಲ್ಲ ಎಂದು ಸಮಾದಿ ಮೇಲೆ ಆಣೆ ಮಾಡಿದ ಆ ರೌಡಿಯಿಂದಲೇ ನಡೆಯಿತಾ…ಕೊಲೆ? ಹಂದಿ ಅಣ್ಣಿಯ ಅಟ್ಯಾಕ್ ನಲ್ಲಿ ಲೀಡ್ ತಗೆದುಕೊಂಡ ಬಂಕ್ ಬಾಲುವಿನ ಈ ಶಿಷ್ಯ ಯಾರು ಗೊತ್ತಾ?

ಈ ಸಂಬಂಧ  229(ಎ) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ಕೋರ್ಟ್​ಗೆ ಚಾರ್ಜ್​ಶೀಟ್​ ಸಲ್ಲಿಸಿದ್ದರು. ಈ  ಪ್ರಕರಣದಲ್ಲಿ  3ನೇ ಜೆಎಂಎಫ್.ಸಿ ನ್ಯಾಯಾಲಯದ ನ್ಯಾಯಧೀಶರಾದ ಶೃತಿ ರವರುವಿಚಾರಣೆ ನಡೆಸಿ ತೀರ್ಪು ನೀಡಿದ್ಧಾರೆ. ನಿನ್ನೆ ಅಂದರೆ,  ದಿನಾಂಕಃ-05-12-2022 ರಂದು ಹೊರಬಿದ್ದ ತೀರ್ಪಿನಲ್ಲಿ ಕಾಡಾ ಕಾರ್ತಿಗೆ  6 ತಿಂಗಳು ಸಾದಾ ಕಾರಾವಾಸ ಶಿಕ್ಷೆ & ರೂ 2,000/- ದಂಡ, ದಂಡವನ್ನು ಕಟ್ಟಲು ವಿಫಲನಾದರೆ  ಹೆಚ್ಚುವರಿ 6 ತಿಂಗಳು ಸಾದಾ ಕಾರವಾಸ ಶಿಕ್ಷೆ ನೀಡಲಾಗಿದೆ. 

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

Share This Article